ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ ಪ್ರಸಿದ್ಧ ನಟ-ನಟಿಯರು, ಸಾವಿಗೆ ಕಾರಣವೇನು ಗೊತ್ತಾ..?

ಈ ಸೆಲೆಬ್ರಿಟಿಗಳಲ್ಲಿ ಕೆಲವರು ಸಹಜ ಸಾವಿಗೀಡಾದರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾರತದ ಕೆಲವು ಪ್ರಸಿದ್ಧ ಸೆಲೆಬ್ರಿಟಿಗಳು ಚಿಕ್ಕ ವಯಸ್ಸಿನಲ್ಲಿಯೇ ಇಹಲೋಹ ತ್ಯಜಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿ ನಟ-ನಟಿಯರು ಸಾವನ್ನಪ್ಪಿದ್ದರಿಂದ ಅವರ ಅಪಾರ ಅಭಿಮಾನಿಗಳಿಗೆ ಆಘಾತವುಂಟಾಗಿತ್ತು. ಈ ಸೆಲೆಬ್ರಿಟಿಗಳಲ್ಲಿ ಕೆಲವರು ಸಹಜ ಸಾವಿಗೀಡಾದರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ ಕೆಲವು ಭಾರತೀಯ ಸ್ಟಾರ್ ನಟ-ನಟಿಯರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಸ್ಮಿತಾ ಪಾಟೀಲ್ ಅವರು ತಮ್ಮ 31ನೇ ವಯಸ್ಸಿನಲ್ಲಿ ತಮ್ಮ ಪುತ್ರ ಪ್ರತೀಕ್ ಬಬ್ಬರ್ ಗೆ ಜನ್ಮ ನೀಡುವ ಸಮಯದಲ್ಲಿ ನಿಧನರಾದರು. ಸ್ಮಿತಾ ಪಾಟೀಲ್ ಹಿಂದಿ, ಬೆಂಗಾಲಿ, ಕನ್ನಡ, ಮರಾಠಿ ಮತ್ತು ಮಲಯಾಳಂ ಸೇರಿದಂತೆ 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಮಿತಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದಲ್ಲದೆ ಇವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

2 /6

ದಿವ್ಯಾ ಭಾರತಿ ಅವರು ಕೇವಲ 19 ವರ್ಷದವರಾಗಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು. ದಿವ್ಯಾ 1993ರಲ್ಲಿ ಮುಂಬೈನ 5ನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದರು. ಮರಣೋತ್ತರ ಪರೀಕ್ಷೆಯ ವರದಿಯು ತಲೆಗೆ ಗಂಭೀರವಾದ ಗಾಯ ಮತ್ತು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ತೋರಿಸಿದೆ.

3 /6

ಪ್ರತ್ಯೂಷಾ ಬ್ಯಾನರ್ಜಿ ಅವರು 2010ರಲ್ಲಿ ಬಾಲಿಕಾ ವಧು ಎಂಬ ಪ್ರಸಿದ್ಧ ಧಾರವಾಹಿಯ ಮೂಲಕ ಮನೆಮಾತಾಗಿದ್ದರು. ಇದರಲ್ಲಿ ಪ್ರತ್ಯೂಷಾ ‘ಆನಂದಿ’ ಪಾತ್ರದಲ್ಲಿ ನಟಿಸಿದ್ದರು. 2016ರ ಏಪ್ರಿಲ್ 1ರಂದು ಟಿವಿ ತಾರೆ ತನ್ನ ಅಪಾರ್ಟ್ಮೆಂಟ್ ನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

4 /6

ತರುಣಿ ಸಚ್‌ದೇವ್ ಅವರು ‘ರಸ್ನಾ ಗರ್ಲ್’ ಎಂದೇ ಜನಪ್ರಿಯರಾಗಿದ್ದರು. ಅಮಿತಾಭ್ ಬಚ್ಚನ್ ಜೊತೆ ‘ಪಾ’ ಸಿನಿಮಾದಲ್ಲೂ ನಟಿಸಿದ್ದಳು. ತರುಣಿ ಅವರು ಕೇವಲ 14 ವರ್ಷದವರಾಗಿದ್ದಾಗ ನೇಪಾಳದಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.

5 /6

2020ರ ಜೂನ್ 14 ರಂದು ಬಾಲಿವುಡ್ ನ ಸ್ಟಾರ್ ನಟ ಸುಶಾಂತ್ ಸಿಂಗ್ ರಜಪೂತ್ ತನ್ನ ಮುಂಬೈ ನಿವಾಸದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದೆ ಎಂದು ಹೇಳಿದೆ. ಸುಶಾಂತ್ ಇಹಲೋಕ ತ್ಯಜಿಸಿದಾಗ ಅವರಿಗೆ ಕೇವಲ 34 ವರ್ಷ. ಅವರು ‘ಕೈ ಪೋ ಚೆ’, ‘ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’, ‘ಕೇದಾರನಾಥ್’ ಮತ್ತು ‘ಡಿಟೆಕ್ಟಿವ್ ಬ್ಯೋಮಕೇಶ್ ಭಕ್ಷಿ’ ಮುಂತಾದ ಸೂಪರ್‌ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

6 /6

ಜನಪ್ರಿಯ ಟಿವಿ ನಟ ಸಿದ್ಧಾರ್ಥ್ ಶುಕ್ಲಾ ಅವರು 2021ರ ಸೆಪ್ಟೆಂಬರ್ 2ರಂದು ತಮ್ಮ 40ನೇ ವಯಸ್ಸಿನಲ್ಲಿ ನಿಧನರಾದರು. ಸಿದ್ಧಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ಸಣ್ಣ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು.