ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಓರಿಯಂಟ್ ಭಾರತದಲ್ಲಿ ಕ್ಲೌಡ್ ಫ್ಯಾನ್ ಅನ್ನು ಪರಿಚಯಿಸಿದೆ. ಈ ಓರಿಯಂಟ್ ಕ್ಲೌಡ್ ಫ್ಯಾನ್ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಬೇಸಿಗೆ ಕಾಲ ಆರಂಭವಾಯಿತೆಂದರೆ ಫ್ಯಾನ್, ಕೂಲರ್, ಎಸಿ ಇರದೆ ಇರುವುದನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ. ಬದಲಾದ ವಾತಾವರಣದಲ್ಲಿ ಫ್ಯಾನ್ ಹವಾ ಸಾಕಾಗುವುದಿಲ್ಲ ಎಂದು ಜನರು ಕೂಲರ್ ಅಥವಾ ಎಸಿಗಳ ಮೊರೆ ಹೋಗುತ್ತಾರೆ. ಆದರೆ, ಇದರಿಂದ ವಿದ್ಯುತ್ ಬಿಲ್ ಹೆಚ್ಚಾಗುವ ಭಯವೂ ಕೂಡ ಕಾಡುತ್ತದೆ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಓರಿಯಂಟ್ ಭಾರತದಲ್ಲಿ ಕ್ಲೌಡ್ ಫ್ಯಾನ್ ಅನ್ನು ಪರಿಚಯಿಸಿದೆ. ಈ ಓರಿಯಂಟ್ ಕ್ಲೌಡ್ ಫ್ಯಾನ್ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಓರಿಯಂಟ್ ಕ್ಲೌಡ್ ಫ್ಯಾನ್ ಇದು ದೇಶದ ಮೊದಲ ಕ್ಲೌಡ್ ಫ್ಯಾನ್ ಆಗಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಫ್ಯಾನ್ ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ. ವಾಸ್ತವವಾಗಿ, ಈ ಕ್ಲೌಡ್ ಫ್ಯಾನ್ನಲ್ಲಿ ನಾಲ್ಕರಿಂದ ಐದು ಲೀಟರ್ ನೀರಿನ ಟ್ಯಾಂಕ್ ಹೊಂದಿಸಲಾಗಿದ್ದು ಇದರಿಂದ ತಂಪಾದ ಹವಾ ಪಡೆಯಬಹುದಾಗಿದೆ.
ಕ್ಲೌಡ್‌ಚಿಲ್ ತಂತ್ರಜ್ಞಾನದೊಂದಿಗೆ ಬರುವ ಓರಿಯಂಟ್ ಕ್ಲೌಡ್ 3 ತಾಪಮಾನವನ್ನು ಸುಮಾರು 12 ಡಿಗ್ರಿಗಳಷ್ಟು ಕಡಿಮೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ಫ್ಯಾನ್ ಅನ್ನು ಎಲ್ಲಿ ಬೇಕಾದರೂ ಸುಲಭವಾಗಿ ಹೊಂದಿಸಬಹುದಾಗಿದ್ದು, ಇದರ ಬೆಲೆ ಕೂಡ ತುಂಬಾ ದುಬಾರಿ ಏನಲ್ಲ. ಎಸಿಯಂತಹ ಹವಾ ನೀಡಬಲ್ಲ ಈ ಕ್ಲೌಡ್ ಫ್ಯಾನ್ ಬೆಲೆ 15,999 ರೂ. ಎಂದು ಕಂಪನಿ ತಿಳಿಸಿದೆ.
ಓರಿಯಂಟ್ ಕ್ಲೌಡ್ 3 ಫ್ಯಾನ್ ಚಲಿಸುವಾಗಲೂ ಕೂಡ ಫ್ಯಾನ್ ಒನ್ ಆಗಿದೆ ಎಂಬ ಶಬ್ಧವೇ ನಿಮಗೆ ಗೊತ್ತಾಗುವುದಿಲ್ಲ. ವಾಸ್ತವವಾಗಿ, ಇದು ಅಂತರ್ನಿರ್ಮಿತ ಕ್ಲೋಚೆ ಚೇಂಬರ್‌ಗಳನ್ನು ಇದು ನೀರನ್ನು ಮೋಡಗಳಾಗಿ ಪರಿವರ್ತಿಸುವ ಮೂಲಕ ಗಾಳಿಯನ್ನು ಹೊರಸೂಸುತ್ತದೆ. ಇದರಿಂದ ಇಡೀ ಕೋಣೆ ನಿಮಿಷಗಳಲ್ಲಿ ತಂಪಾಗುತ್ತದೆ.
ಓರಿಯಂಟ್ ಕ್ಲೌಡ್ 3ನಲ್ಲಿ ಮೂರು ಮೂರು ಸೆಟ್ಟಿಂಗ್‌ಗಳು ಲಭ್ಯವಿವೆ. ಇದರ ಸಹಾಯದಿಂದ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿಯೇ ವೇಗವನ್ನು ಸೆಟ್ ಮಾಡಬಹುದು.
ಎರಡು ಬಣ್ಣಗಳಲ್ಲಿ ಲಭ್ಯವಿರುವ ಓರಿಯಂಟ್ ಕ್ಲೌಡ್ 3 ಅನ್ನು ನೀವು ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್‌ನಿಂದ ಖರೀದಿಸಬಹುದಾಗಿದೆ.