ತಂದೆ-ಪುತ್ರನ ಅಶುಭ ಯೋಗದಿಂದ ಈ ರಾಶಿಗಳ ಜನರ ಜೀವನದಲ್ಲಿ ಮಾರ್ಚ್ 15ರವರೆಗೆ ಭಾರಿ ಸಂಕಷ್ಟ ಕಾಲ!

Sun-Saturn Conjunction: ಪ್ರಸ್ತುತ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಆತನ ಪುತ್ರ ಶನಿ ಇಬ್ಬರು ವಿರಾಜಮಾನರಾಗಿದ್ದಾರೆ. ತಂದೆ ಮಗನ ಈ ಮೈತ್ರಿ 3 ಜಾತಕದವರ ಜೀವನದಲ್ಲಿ ಭಾರಿ ಬಿರುಗಾಳಿಗೆ ಕಾರಣವಾಗಲಿದ್ದು, ಇವರಿಗೆ ಭಾರಿ ಧನ ಹಾನಿಯ ಸಾಧ್ಯತೆ ಇದೆ.
 

  • Feb 21, 2023, 14:29 PM IST

Surya-Shani Yuti 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ಒಂದು ರಾಶಿಯನ್ನು ತೊರೆದು ಇನ್ನೊಂದು ರಾಶಿಯನ್ನು ಪ್ರವೇಶಿಸುತ್ತದೆ. ಗ್ರಹಗಳ ಈ ರಾಶಿ ಪರಿವರ್ತನೆಯ ಪ್ರಭಾವ ದೇಶ, ಜಗತ್ತು ಮತ್ತು ಇಡೀ ಭೂಮಿಯ ಮೇಲೆ ಕಂಡುಬರುತ್ತದೆ. ಅಲ್ಲದೆ, ಈ ಬದಲಾವಣೆಯು ಕೆಲವರಿಗೆ ಶುಭ ಸಾಬೀತಾದರೆ ಮತ್ತು ಕೆಲವರಿಗೆ ಅಶುಭ ಸಾಬೀತಾಗುತ್ತದೆ. ಫೆಬ್ರವರಿ 13 ರಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ ಮತ್ತು ಮಕರ ಸಂಕ್ರಾಂತಿ ದಿನ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ, ಶನಿದೇವ ಈಗಾಗಲೇ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಹೀಗಾಗಿ ಕುಂಭ ರಾಶಿಯಲ್ಲಿ ತಂದೆ-ಪುತ್ರನ ಮೈತ್ರಿಯು ರೂಪುಗೊಂಡಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿ ದೇವರ ನಡುವೆ ದ್ವೇಷ ಭಾವದ ಸಂಬಂಧ ಇದೆ ಎನ್ನಲಾಗುತ್ತದೆ. ಹೀಗಾಗಿ ಮೂರು ರಾಶಿಗಳ ಜನರು ಮಾರ್ಚ್ 15 ರವರೆಗೆ ಈ ಮೈತ್ರಿ ಕಾಲದಲ್ಲಿ ಭಾರಿ ಎಚ್ಚರದಿಂದಿರುವ ಅವಶ್ಯಕತೆ ಇದೆ. ಆ ರಾಶಿಗಳು ಯಾವುವು ಬನ್ನಿ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Holi ಹಬ್ಬದ ಬಳಿಕ ರಾಹು-ಶುಕ್ರ ಯುತಿ, 3 ರಾಶಿಗಳ ಜನರಿಗೆ ಅದೃಷ್ಟವೋ ಅದೃಷ್ಟ.. ಪ್ರತಿ ಕ್ಷೇತ್ರದಲ್ಲೂ ಯಶಸ್ಸು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಕರ್ಕ ರಾಶಿ: ಶನಿ ಮತ್ತು ಸೂರ್ಯನ ಸಂಯೋಜನೆಯು ನಿಮಗೆ ಹಾನಿಕಾರಕ ಸಾಬೀತಾಗಬಹುದು. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಅಷ್ಟಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಮತ್ತು ಶನಿದೇವ ನಿಮ್ಮ ಜಾತಕದ ಸಪ್ತಮೇಶ ಹಾಗೂ ಅಷ್ಟಮೇಶ ಅಂದರೆ ಎರಡೂ ಭಾವಗಳಿಗೆ ಅಧಿಪತಿ ಎಂದರ್ಥ. ಇಲ್ಲಿ ಶನಿಯೂ ಮಾರ್ಕೇಶ ಕೂಡ ಆಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನೀವು ನಿಮ್ಮ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಸ್ವಂತ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಬೆಂಬಲ ಸಿಗುವುದಿಲ್ಲ.  ಈ ಸಮಯದಲ್ಲಿ ಕೆಲ ನಿಗೂಢ ಕಾಯಿಲೆಗಳು ನಿಮ್ಮನ್ನು ಕಾಡಬಹುದು.    

2 /3

ಶನಿ ಮತ್ತು ಸೂರ್ಯನ ಸಂಯೋಜನೆಯು ನಿಮಗೆ ಪ್ರತಿಕೂಲ ಸಬೀತಾಗಲಿದೆ ಏಕೆಂದರೆ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಈ ಮೈತ್ರಿ ಏರ್ಪಡುತ್ತಿದೆ. ಇದರೊಂದಿಗೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಲಗ್ನ ಭಾವದ ಅಧಿಪತಿಯೂ ಆಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಶೀತ, ಕೆಮ್ಮು ಮತ್ತು ಜ್ವರ ಬರಬಹುದು. ಇದರೊಂದಿಗೆ ಶನಿಯ ಸಾಡೇಸಾತಿಯೂ ನಿಮ್ಮ ಮೇಲೆ ನಡೆಯುತ್ತಿದೆ. ಹೀಗಾಗಿ ನಿಮ್ಮ ವ್ಯಾಪಾರವು ಈ ಸಮಯದಲ್ಲಿ ನಿಧಾನ ಗತಿಯಲ್ಲಿ ಸಾಗಲಿದೆ. ಒಪ್ಪಂದವನ್ನು ಅಂತಿಮಗೊಳಿಸುವಾಗ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.  

3 /3

ಕುಂಭ ರಾಶಿ: ಶನಿ ಮತ್ತು ಸೂರ್ಯ ದೇವನ ಸಂಯೋಜನೆಯು ಕುಂಭ ರಾಶಿಯವರಿಗೆ ಹಾನಿಕಾರಕ ಸಾಬೀತಾಗಬಹುದು. ಈ ಅವಧಿಯಲ್ಲಿ, ನಿಮ್ಮ ಗಂಟಲು ಮತ್ತು ಬಾಯಿಯಲ್ಲಿ ನೀವು ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ದೇಹದಲ್ಲಿ ಸೋಂಕು ಇರಬಹುದು. ಈ ಅವಧಿಯಲ್ಲಿ ನೀವು ಕೈಗೊಂಡ ಕೆಲಸಗಳು ಹಾಳಾಗಬಹುದು. ಏಕೆಂದರೆ ನಿಮ್ಮ ರಾಶಿಯೊಂದಿಗೆ ಲಗ್ನ ಭಾವದಲ್ಲಿ ಈ ಮೈತ್ರಿ ಏರ್ಪಡುತ್ತಿದೆ. ಇದೇ ವೇಳೆ ಸಂಗಾತಿಯ ಆರೋಗ್ಯವೂ ಹದಗೆಡಬಹುದು. ಕೆಲವು ವಿಷಯಗಳಲ್ಲಿ ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು.   ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)