ಈ ತಿಂಗಳಲ್ಲಿ ಮೂರು ಗ್ರಹಗಳು ಬೆಳಗುವುದು ಈ ಐದು ರಾಶಿಯವರ ಅದೃಷ್ಟ!

ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿ ಗ್ರಹ ಮತ್ತು ಅದರ ಚಲನೆಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಒಟ್ಟು ಒಂಬತ್ತು ಗ್ರಹಗಳು ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಒಂದು ರಾಶಿಯಲ್ಲಿ ಉಳಿಯುತ್ತದೆ ನಂತರ ತನ್ನ ಸ್ಥಾನವನ್ನು ಬದಲಾಯಿಸಿ, ಇನ್ನೊಂದು ರಾಶಿಗೆ ಸಾಗುತ್ತದೆ. ಈ ಪ್ರತಿಯೊಂದು ಬದಲಾವಣೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿನ  ಬದಲಾವಣೆಗೆ ಕಾರಣವಾಗುತ್ತದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿ ಗ್ರಹ ಮತ್ತು ಅದರ ಚಲನೆಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಒಟ್ಟು ಒಂಬತ್ತು ಗ್ರಹಗಳು ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಒಂದು ರಾಶಿಯಲ್ಲಿ ಉಳಿಯುತ್ತದೆ ನಂತರ ತನ್ನ ಸ್ಥಾನವನ್ನು ಬದಲಾಯಿಸಿ, ಇನ್ನೊಂದು ರಾಶಿಗೆ ಸಾಗುತ್ತದೆ. ಈ ಪ್ರತಿಯೊಂದು ಬದಲಾವಣೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿನ  ಬದಲಾವಣೆಗೆ ಕಾರಣವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

2023 ರ ಫೆಬ್ರವರಿ ತಿಂಗಳು ಗ್ರಹಗಳ ಸಾಗಣೆಯ ವಿಷಯದಲ್ಲಿ ಬಹಳ ಮುಖ್ಯವಾಗಿದೆ.  ಈ ತಿಂಗಳಲ್ಲಿ ಸೂರ್ಯ, ಬುಧ, ಶುಕ್ರ  ಎಂಬ ಮಹತ್ವದ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುತ್ತವೆ.  ಈ ನಾಲ್ಕು ಗ್ರಹಗಳ ಸಂಚಾರದಿಂದಾಗಿ, ಫೆಬ್ರವರಿ ತಿಂಗಳು ಐದು ರಾಶಿಯವರ ಜೀವದಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ಐದು ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ.  ಈ ರಾಶಿಯವರು ಅದೃಷ್ಟಶಾಲಿಗಳಾಗಿ ಹೊರ ಹೊಮ್ಮುತ್ತಾರೆ. 

2 /6

ಮೇಷ ರಾಶಿ :ಫೆಬ್ರವರಿ 2023 ರಲ್ಲಿ ನಡೆಯುವ ಗ್ರಹಗಳ ಸಂಚಾರವು ಮೇಷ ರಾಶಿಯ ಯವರಿಗೆ ಫಲಪ್ರದವಾಗಿರಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆರ್ಥಿಕ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ.  ಹೊರಗಡೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು.  ಈ ಸಮಯದಲ್ಲಿ ಯಾವ ಕೆಲಸ ಮಾಡಿಸರೂ ಅದೃಷ್ಟ ಬೆನ್ನಿಗಿರಲಿದೆ.  ಅಂದು ಕೊಂಡ ಕೆಲಸ ಪೂರ್ಣಗೊಳ್ಳುತ್ತದೆ. 

3 /6

ಕಟಕ ರಾಶಿ : ಕರ್ಕಾಟಕ ರಾಶಿಯವರು ಫೆಬ್ರವರಿ ತಿಂಗಳಲ್ಲಿ ನಡೆಯುವ ಗ್ರಹಗಳ ಚಲನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ, ಪೂರ್ವಜರ ಅಥವಾ ಕುಟುಂಬದ ಆಸ್ತಿಯನ್ನು ಪಡೆದುಕೊಳ್ಳುವ ಅವಕಾಶ ಸಿಗಲಿದೆ. ಶುಕ್ರನ ಪ್ರಭಾವದ ಪರಿಣಾಮವಾಗಿ ಹೊಸ ವ್ಯಾಪಾರ ಅವಕಾಶಗಳು ಹೊರಹೊಮ್ಮುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸೂರ್ಯನ ಪ್ರಭಾವದ ಪರಿಣಾಮವಾಗಿ ಜೀವನದಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನವು ಹೆಚ್ಚಾಗುತ್ತದೆ. ಶಿಕ್ಷಣದ ವಿಷಯದಲ್ಲಿ, ಈ ಸಮಯವು ವಿದ್ಯಾರ್ಥಿಗಳಿಗೆ ಅದ್ಭುತವಾಗಿರುತ್ತದೆ. 

4 /6

ಕನ್ಯಾರಾಶಿ :ಫೆಬ್ರವರಿ ತಿಂಗಳಲ್ಲಿ ಸಂಭವಿಸುವ ನಾಲ್ಕು ಸಂಕ್ರಮಣಗಳು ಕನ್ಯಾರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿರುವವರು ಹಣವನ್ನು ಉಳಿಸುವುದು ಮತ್ತು ಹೊಸ ಉದ್ಯೋಗ  ಪಡೆಯುವುದು ಸಾಧ್ಯವಾಗುತ್ತದೆ. 

5 /6

ತುಲಾ ರಾಶಿ :ಫೆಬ್ರವರಿ ತಿಂಗಳು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ನಿಮ್ಮ ಮನಸ್ಸು ಮಕ್ಕಳ ಪ್ರಗತಿಯಿಂದ ತೃಪ್ತವಾಗಿರುತ್ತದೆ.  ಸ್ವಂತ ವ್ಯವಹಾರವನ್ನು ನಡೆಸುವವರಿಗೆ ಗ್ರಹಗಳ ಪ್ರಭಾವದಿಂದ ಲಾಭವಾಗುವುದು.  

6 /6

ಕುಂಭ ರಾಶಿ : ಫೆಬ್ರವರಿ ತಿಂಗಳು ಕುಂಭ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರಲಿದೆ.  ಶುಕ್ರ, ಸೂರ್ಯ ಮತ್ತು ಬುಧ ಗ್ರಹಗಳ ಶುಭ ಪ್ರಭಾವವು ನಿಮ್ಮ ಜೀವನದಲ್ಲಿ ಕಂಡುಬರುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಗೆ ಹೋಗಬಹುದು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)