ಪ್ರಸ್ತುತ ಜ್ಯೋತಿಷ್ಯದ ಪ್ರಕಾರ, ರಾಹುವು ಮೇಷ ರಾಶಿಯಲ್ಲಿದ್ದು, 30 ಅಕ್ಟೋಬರ್ 2023 ರಂದು ಮೀನ ರಾಶಿಗೆ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ರಾಹು ಮಹಾದಶ ಪ್ರಭಾವವೂ ಇರಲಿದ್ದು, ಇದರ ಪರಿಣಾಮವಾಗಿ ಕೆಲ ರಾಶಿಯ ಜನರ ಜೀವನದ ಮೇಲೆ ಸುಮಾರು 18 ವರ್ಷಗಳ ಕಾಲ ರಾಹುವಿನ ಕೃಪೆ ಇರಲಿದೆ
ರಾಹು ಗ್ರಹವನ್ನು ಕ್ರೂರ, ಛಾಯಾಗ್ರಹ ಎಂದೆಲ್ಲಾ ಕರೆದರೂ ಸಹ, ತನ್ನ ಕೃಪಾದೃಷ್ಟಿಯಿಂದ ಕೆಲ ರಾಶಿಗಳಿಗೆ ಸಂಪತ್ತಿನ ಮಹಾಮಳೆಯನ್ನೇ ಹರಿಸುತ್ತಾನೆ ಎಂಬುದು ನಂಬಿಕೆ. ಇನ್ನು ರಾಹು ಮೀನ ರಾಶಿಯಲ್ಲಿ ಸಂಚರಿಸಲಿದ್ದು, ಯಾವ ರಾಶಿಯವರಿಗೆ ದಯೆ ತೋರಲಿದ್ದಾನೆ ಎಂದು ತಿಳಿಯೋಣ.
ಮೇಷ ರಾಶಿ: ಇನ್ನು ರಾಹು ರಾಶಿ ಬದಲಾವಣೆಯಿಂದ ಗುರು-ಚಂಡಾಲ ಯೋಗದ ಅಶುಭ ಫಲ ಅಂತ್ಯವಾಗಲಿದೆ, ಇದರ ಈ ರಾಶಿಯ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭವಾಗಲಿದೆ. ಇನ್ನು ಮುಖ್ಯವಾಗಿ ರಾಹು ಮಹಾದಶಾ ಪ್ರಭಾವ ಇರಲಿದ್ದು, ಮುಂದಿನ 18 ವರ್ಷ ಉತ್ತಮ ಸಮಯವಾಗಲಿದೆ.
ಸಿಂಹ ರಾಶಿ: ಗುರು-ಚಂಡಾಲ ಯೋಗದ ಅಶುಭ ಫಲ ಅಂತ್ಯದಿಂದ ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಆರೋಗ್ಯ ಸುಧಾರಿಸುತ್ತದೆ. ಇನ್ನು ಆದಾಯದಲ್ಲೂ ವೃದ್ಧಿ ಕಾಣಲಿದ್ದಾರೆ. ವ್ಯಾಪಾರ ಸಂಬಂಧಗಳು ಸುಧಾರಿಸುತ್ತವೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.
ತುಲಾ ರಾಶಿ: ಈ ರಾಶಿಯ ಜನರು ಗುರು-ಚಂಡಾಲ ಯೋಗದ ಅಂತ್ಯದಿಂದ ಬಹಳ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಿಸುತ್ತದೆ. ಹಣ ಮತ್ತು ವೃತ್ತಿಯ ವಿಷಯದಲ್ಲಿಯೂ ನಿಮಗೆ ಶುಭ ಅವಕಾಶಗಳು ಸೃಷ್ಟಿಯಾಗುತ್ತವೆ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯತೆಯೂ ಹೆಚ್ಚಾಗುತ್ತದೆ.
ಧನು ರಾಶಿ: ಗುರು-ಚಂಡಾಲ ಯೋಗದ ಅಂತ್ಯವು ಧನು ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಯೋಜನೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಮಾಡಿದ ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ. ಸರ್ಕಾರಿ ಉದ್ಯೋಗದ ಜೊತೆ ಬಡ್ತಿ ಪ್ರಾಪ್ತಿಯಾಗಬಹುದು. ವೃತ್ತಿಜೀವನದಲ್ಲಿ ನೀವು ಬಯಸಿದ ಅವಕಾಶಗಳನ್ನು ಪಡೆಯುತ್ತಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)