ತಂದೆ ಇಂಗ್ಲೆಂಡ್‌ ತಂಡದ ಪ್ಲೇಯರ್‌, ಮಗ ಭಾರತ ತಂಡದ ಸ್ಟಾರ್‌ ಆಟಗಾರ..ಯಾರು ಗೊತ್ತಾ..?

Mansoor ali khan pataudi father: ತಮ್ಮ ದೇಶಕ್ಕಾಗಿ ಆಡಿದ ಅನೇಕ ತಂದೆ-ಮಗ ಜೋಡಿ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಆದರೆ ಈ ಅಪರೂಪದ ಭಾರತೀಯ ತಂದೆ-ಮಗ ಜೋಡಿಯ ಬಗ್ಗೆ ನಿಮಗೆ ಗೊತ್ತಾ, ಈ ತಂದೆ ಮಗನ ಜೋಡಿ ಎಲ್ಲರಿಗಿಂತಲೂ ಡಿಫರೆಂಟ್‌ ಮಗ ದೇಶಕ್ಕಾಗಿ ಆಡಿದರೆ, ತಂದಟ ಇಂಗ್ಲೆಂಡ್‌ ತಂಡದ ಪ್ಲೇಯರ್‌.ವಿದೇಶದಲ್ಲಿ ಭಾರತ ಸರಣಿ ಗೆಲ್ಲುವಂತೆ ಮಾಡಿದ ನಾಯಕ. ದೌರ್ಬಲ್ಯವನ್ನು ಶಕ್ತಿಯಾಗಿ ಪರಿವರ್ತಿಸುವ ನಾಯಕ. ಎದುರಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸುವ ನಾಯಕ..ಯಾರು ಎನ್ನುವ ಕುತೂಹಲ ಇದೆಯಾ..? ತಿಳಿಯಲು ಮುಂದೆ ಓದಿ...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತಮ್ಮ ದೇಶಕ್ಕಾಗಿ ಆಡಿದ ಅನೇಕ ತಂದೆ-ಮಗ ಜೋಡಿ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಆದರೆ ಈ ಅಪರೂಪದ ಭಾರತೀಯ ತಂದೆ-ಮಗ ಜೋಡಿಯ ಬಗ್ಗೆ ನಿಮಗೆ ಗೊತ್ತಾ, ಈ ತಂದೆ ಮಗನ ಜೋಡಿ ಎಲ್ಲರಿಗಿಂತಲೂ ಡಿಫರೆಂಟ್‌ ಮಗ ದೇಶಕ್ಕಾಗಿ ಆಡಿದರೆ, ತಂದಟ ಇಂಗ್ಲೆಂಡ್‌ ತಂಡದ ಪ್ಲೇಯರ್‌.ವಿದೇಶದಲ್ಲಿ ಭಾರತ ಸರಣಿ ಗೆಲ್ಲುವಂತೆ ಮಾಡಿದ ನಾಯಕ. ದೌರ್ಬಲ್ಯವನ್ನು ಶಕ್ತಿಯಾಗಿ ಪರಿವರ್ತಿಸುವ ನಾಯಕ. ಎದುರಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸುವ ನಾಯಕ..ಯಾರು ಎನ್ನುವ ಕುತೂಹಲ ಇದೆಯಾ..? ತಿಳಿಯಲು ಮುಂದೆ ಓದಿ...

2 /5

ಮನ್ಸೂರ್ ಅಲಿ ಖಾನ್ ಪಟೌಡಿ ಭಾರತದ ಕ್ರಿಕೆಟ್‌ ತಂಡದ ದಂತಕಥೆ ಅವರ ಅಭಿಮಾನಿಗಳು ಯಾವಾಗಲೂ ಟೈಗರ್ ಪಟೌಡಿ ಎಂದು ಕರೆಯುತ್ತಿದ್ದರು. ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ನಾಯಕನಾಗಿರಲಿ ಅಥವಾ ವಿದೇಶದಲ್ಲಿ ಮೊದಲ ಸರಣಿಯನ್ನು ಗೆಲ್ಲುವುದರಲ್ಲಾಗಿರಲಿ ಹೀಗೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರಿನಲ್ಲಿ ಅಸಂಖ್ಯಾತ ಸಾಧನೆಗಳಿವೆ. ಅದೂ ಕೂಡ, ಅವರ ಚೊಚ್ಚಲ ಪ್ರವೇಶಕ್ಕೆ ಕೇವಲ ಆರು ತಿಂಗಳ ಮೊದಲು, ಮನ್ಸೂರ್ ಅಲಿ ಖಾನ್ ಅವರು ವೃತ್ತಿಪರ ಕ್ರಿಕೆಟ್ ಆಡಲು ಕಷ್ಟಪಡುತ್ತಾರೆ ಎಂದು ಭಾವಿಸಲಾಗಿತ್ತು. ವಾಸ್ತವವಾಗಿ, 1961 ರಲ್ಲಿ, ಮನ್ಸೂರ್ ಅಲಿ ಖಾನ್ ಪಟೌಡಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಅವರ ಕಣ್ಣಿಗೆ ಗಾಜಿನ ತುಂಡುಗಳು ತಾಕಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಟೈಗರ್ ಪಟೌಡಿ ಜೀವನದ ಈ ಕೆಟ್ಟ ಹಂತವನ್ನು ಜಯಿಸುವಲ್ಲಿ ಯಶಸ್ವಿಯಾದರು ಮತ್ತು ಆಶ್ಚರ್ಯಕರವಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.  

3 /5

ಇಂಗ್ಲೆಂಡಿನಲ್ಲಿ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ದೇಶಕ್ಕಾಗಿ ಆಡುವ ಕನಸು ಡಿಸೆಂಬರ್ 1961 ರಲ್ಲಿ ನನಸಾಯಿತು. ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದರು. ಮೊದಲ ಮೂರು ತಿಂಗಳ ನಂತರ, ಅವರ ವೃತ್ತಿಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತು ಮತ್ತು ಭಾರತದ ನಾಯಕರಾದರು. ಅವರು ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿದಾಗ, ಅವರ ವಯಸ್ಸು 21 ವರ್ಷ ಮತ್ತು 77 ದಿನಗಳು. ಆ ಸಮಯದಲ್ಲಿ ಇದು ಅತ್ಯಂತ ಕಿರಿಯ ವಯಸ್ಸಿನಲ್ಲಿ ನಾಯಕತ್ವದ ವಿಶ್ವ ದಾಖಲೆಯಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ನಿಯಮಿತ ನಾಯಕ ನಾರಿ ಕಂಟ್ರಾಕ್ಟರ್ ಗಾಯಗೊಂಡಿದ್ದರಿಂದ ಮನ್ಸೂರಿ ಅಲಿ ಖಾನ್ ಪಟೌಡಿ ಅವರನ್ನು ಹಠಾತ್ತನೆ ನಾಯಕರನ್ನಾಗಿ ಮಾಡಲಾಗಿತ್ತು.  

4 /5

ನವಾಬ್ ಪಟೌಡಿ ಅದೃಷ್ಟದಿಂದ ನಾಯಕತ್ವವನ್ನು ಪಡೆದಿರಬಹುದು, ಆದರೆ ಅವರು ಇತಿಹಾಸವನ್ನು ಸೃಷ್ಟಿಸುವ ರೀತಿಯಲ್ಲಿ ಈ ಅವಕಾಶವನ್ನು ಬಳಸಿಕೊಂಡರು. ಅವರು ಸ್ಪಿನ್ ಕ್ವಾರ್ಟೆಟ್ ಅನ್ನು ತಮ್ಮ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡರು ಮತ್ತು ನ್ಯೂಜಿಲೆಂಡ್‌ನಲ್ಲಿ ಸರಣಿಯನ್ನು ಗೆದ್ದರು. ಇದರೊಂದಿಗೆ ಮನ್ಸೂರ್ ಅಲಿ ಖಾನ್ ಪಟೌಡಿ ಭಾರತಕ್ಕೆ ವಿದೇಶದಲ್ಲಿ ಸರಣಿ ಗೆಲ್ಲುವಂತೆ ಮಾಡಿದ ಮೊದಲ ನಾಯಕ ಎನಿಸಿಕೊಂಡರು.  

5 /5

ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಂದೆ ಇಫ್ತಿಕರ್ ಅಲಿ ಖಾನ್ ಪಟೌಡಿ ಕೂಡ ಅವರ ಕಾಲದ ಪ್ರಸಿದ್ಧ ಕ್ರಿಕೆಟಿಗರು ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಇಫ್ತಿಕರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್‌ನಲ್ಲಿ ಓದುತ್ತಿದ್ದಾಗ ಭಾರತ ಕ್ರಿಕೆಟ್ ತಂಡ ರಚನೆಯಾಗಿರಲಿಲ್ಲ. ಇನ್ನೊಂದೆಡೆ ಇಂಗ್ಲೆಂಡ್ ತಂಡದಿಂದ ಇಫ್ತಿಕರ್ ಅಲಿಗೆ ಕರೆ ಬಂತು. ಈ ಮೂಲಕ ಇಫ್ತಿಕರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ಪರ ಆಡಲು ಆರಂಭಿಸಿದರು. ಇಂಗ್ಲೆಂಡ್ ಪರ ಆಡುವಾಗ ಶತಕವನ್ನೂ ಗಳಿಸಿದ್ದರು.