Kohli ಯಿಂದ Ambani ವರೆಗೆ ಸೆಲೆಬ್ರಿಟಿಗಳಿಗೆ ಈ ಎಲೆಕ್ಟ್ರಿಕ್ ಕಾರೆಂದರೆ ಹುಚ್ಚು: ಇದರ ಬೆಲೆ ಊಹೆಗೂ ನಿಲುಕದ್ದು!

Indian Celebrities And Their Electric Cars: ಸಾಮಾನ್ಯ ಜನರಷ್ಟೇ ಅಲ್ಲ, ಭಾರತದ ಮಿಲಿಯನೇರ್ ಸೆಲೆಬ್ರಿಟಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಕಿಂಗ್ ವಿರಾಟ್ ಕೊಹ್ಲಿ, ಉದ್ಯಮಿ ಮುಖೇಶ್ ಅಂಬಾನಿ, ಧೋನಿ ಹೊರತಾಗಿಲ್ಲ. ಇಂದು ನಾವು ಸೆಲೆಬ್ರಿಟಿಗಳು ಬಳಕೆ ಮಾಡುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.  

1 /5

ಮುಖೇಶ್ ಅಂಬಾನಿ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನೀಲಿ ಬಣ್ಣದ ಟೆಸ್ಲಾ ಮಾಡೆಲ್ S 100D ಅನ್ನು ಹೊಂದಿದ್ದಾರೆ. ಈ ಕಾರನ್ನು ಆಮದು ಮಾಡಿಕೊಂಡಿದ್ದರು. ಇದು ಎಲೆಕ್ಟ್ರಿಕ್ ಸೆಡಾನ್‌ನ ಹೆಚ್ಚಿನ ಕಾರ್ಯಕ್ಷಮತೆಯ ರೂಪಾಂತರಗಳಲ್ಲಿ ಒಂದಾಗಿದೆ. ಇದು 100kWh ಬ್ಯಾಟರಿಯನ್ನು ಹೊಂದಿದ್ದು, ಪೂರ್ಣ 504 ಕಿಮೀ ಓಡಬಲ್ಲದು. ಕಾರಿನ ಗರಿಷ್ಠ ವೇಗ ಗಂಟೆಗೆ 250 ಕಿಮೀ.

2 /5

ಎಂಎಸ್ ಧೋನಿ: ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ಅವರ ಬಳಿ ಹಲವು ಆಧುನಿಕ ಮತ್ತು ವಿಂಟೇಜ್ ಕಾರುಗಳ ಸಂಗ್ರಹವಿದೆ. ಇತ್ತೀಚೆಗೆ ಅವರು Kia EV6 ಅನ್ನು ಖರೀದಿಸಿದರು, ಇದು ಅವರ ಕಾರು ಸಂಗ್ರಹಣೆಯಲ್ಲಿ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ. ಇದರ ಬೆಲೆ 59.95 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

3 /5

ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಬಳಿ ಎರಡು ಎಲೆಕ್ಟ್ರಿಕ್ ಕಾರುಗಳಿವೆ. ಅವರ ಮೊದಲ ಕಾರು ನೀಲಿ ಬಣ್ಣದ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಎರಡನೆಯದು ಕೆಂಪು ಬಣ್ಣದ ಆಡಿ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕೂಪ್ ಆಗಿದೆ. ವಿರಾಟ್ ಕೊಹ್ಲಿ ಆಡಿ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರುವುದರಿಂದ ಕಂಪನಿಯು ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿರಬಹುದು.

4 /5

ರಿತೇಶ್ ದೇಶ್‌ಮುಖ್: ರಿತೇಶ್ ದೇಶ್‌ಮುಖ್ ಟೆಸ್ಲಾದ ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.ಅದು BMW iX xDrive 40. ಇದು ತ್ವರಿತ SUV ಆಗಿದ್ದು, ಇದು ಕೇವಲ 6.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 200 ಕಿ.ಮೀ.

5 /5

ನಿತಿನ್ ಗಡ್ಕರಿ: ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ BMW iX ಎಲೆಕ್ಟ್ರಿಕ್ SUV ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ 1.16 ಕೋಟಿ ರೂ. ಎಲೆಕ್ಟ್ರಿಕ್ ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 425 ಕಿಮೀ ಓಡಬಲ್ಲದು.