ನಾಳೆಯಿಂದ ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಸೂರ್ಯ ! ಒಂದು ತಿಂಗಳವರೆಗೆ ಸೋಲೇ ಇಲ್ಲ

ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 31 ರಿಂದ ಬುಧ ಕೂಡಾ ಮೇಷ ರಾಶಿಯಲ್ಲಿಯೇ ಇದ್ದಾನೆ.  ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದು ಸೇರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಸಂಪತ್ತಿನ ಬೆಳವಣಿಗೆಯ ದೃಷ್ಟಿಯಿಂದ ಬುಧಾದಿತ್ಯ ಯೋಗವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. 

ಬೆಂಗಳೂರು : ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 31 ರಿಂದ ಬುಧ ಕೂಡಾ ಮೇಷ ರಾಶಿಯಲ್ಲಿಯೇ ಇದ್ದಾನೆ.  ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದು ಸೇರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಸಂಪತ್ತಿನ ಬೆಳವಣಿಗೆಯ ದೃಷ್ಟಿಯಿಂದ ಬುಧಾದಿತ್ಯ ಯೋಗವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಏಪ್ರಿಲ್ 14 ರಂದು ಸೂರ್ಯನು ಮೇಷರಾಶಿಗೆ ಪ್ರವೇಶಿಸುವುದರೊಂದಿಗೆ, ಸೂರ್ಯ ಮತ್ತು ಬುಧನ ಸಂಯೋಗದಿಂದ ಬುಧಾದಿತ್ಯ ಯೋಗ ನಿರ್ಮಾಣವಾಗುತ್ತಿದೆ. ಮೇ 14 ರವರೆಗೆ ಈ ಯೋಗ ಇರಲಿದೆ. ಈ ಒಂದು ತಿಂಗಳ ಅವಧಿಯಲ್ಲಿ, 5 ರಾಶಿಯವರ ಜೀವನದಲ್ಲಿ ನಿರೀಕ್ಷೆಗೂ ಮೀರಿದ ಸುಖ ಸಂಪತ್ತು ಬಂದು ಒದಗಲಿದೆ. 

2 /6

ಮೇಷ ರಾಶಿಯ ಅಧಿಪತಿ ಮಂಗಳ. ಸ್ವಭಾವತಃ ಕೋಪಿಷ್ಠ ಎಂದು ಪರಿಗಣಿಸಲಾದ ಈ ರಾಶಿಯಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಒಂದು ರೀತಿಯ ಶಕ್ತಿ ಮತ್ತು ಉತ್ಸಾಹ ಸೃಷ್ಟಿಯಾಗುತ್ತದೆ. ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸಮಯದಲ್ಲಿ ಬಳಸುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ಒಂದು ತಿಂಗಳಲ್ಲಿ ಮೇಷ ರಾಶಿಯ ಜನರು ವೃತ್ತಿಜೀವನದ ದಿಕ್ಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅವರಿಗೆ ಲಾಭದಾಯಕವಾಗಿರಲಿವೆ. ಉದ್ಯೋಗದಲ್ಲಿ ಹೊಸ ಮತ್ತು ಅದ್ಭುತ ಅವಕಾಶಗಳು ಸಿಗಲಿವೆ. ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸು ಸಿಗಲಿವೆ. 

3 /6

 ಸಂಪತ್ತಿನ ಹೆಚ್ಚಳದ ದೃಷ್ಟಿಯಿಂದ ಬುಧಾದಿತ್ಯ ಯೋಗವು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ವ್ಯವಹಾರವನ್ನು ಕೂಡಾ ಪ್ರಾರಂಭಿಸಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಅನೇಕ ರೀತಿಯಲ್ಲಿ ಹಣವನ್ನು ಗಳಿಸುವಿರಿ. ಪ್ರೇಮ ವ್ಯವಹಾರಗಳ ವಿಷಯದಲ್ಲಿ ಬುಧಾದಿತ್ಯ ಯೋಗವು ತುಂಬಾ ಮಂಗಳಕರವಾಗಿರುತ್ತದೆ.

4 /6

ಕರ್ಕಾಟಕ ರಾಶಿಯವರು ಬುಧಾದಿತ್ಯ ಯೋಗದ ಪ್ರಭಾವದಿಂದಾಗಿ, ವೃತ್ತಿ ಮತ್ತು ಆರ್ಥಿಕ ಸಮೃದ್ಧಿಯ ವಿಷಯದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರಬಹುದು. ದೀರ್ಘಕಾಲದವರೆಗೆ ನಿಮ್ಮ ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಈ ಸಮಯದಲ್ಲಿ ಅಂಥಹ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಕೆಲಸದ ಕ್ಷೇತ್ರವು ವಿಸ್ತರಿಸುತ್ತದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ.   

5 /6

ಬುಧಾದಿತ್ಯ ಯೋಗವು ಸಿಂಹ ರಾಶಿಯ ಜನರಿಗೆ ಹಣ ಮತ್ತು ವೃತ್ತಿಯ ವಿಷಯದಲ್ಲಿ ಬಹಳ ಪ್ರಯೋಜನಕಾರಿಯಾಗಿರಲಿದೆ. ವೃತ್ತಿಯಲ್ಲಿ ಲಾಭಗಳ ಜೊತೆಗೆ ಹಣಕಾಸಿನ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ನಿಮ್ಮ ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಹಾಯವಾಗಲಿದೆ. ಈ ಸಮಯದಲ್ಲಿ ನಿಮಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. 

6 /6

ಧನು ರಾಶಿಯವರು ಬುಧಾದಿತ್ಯ ಯೋಗದ ಪ್ರಭಾವದಿಂದ ವೃತ್ತಿ ಸಂಬಂಧಿತ ವಿಷಯಗಳಲ್ಲಿ ಅನೇಕ ಅದ್ಭುತ ಅವಕಾಶಗಳನ್ನು ಪಡೆಯಬಹುದು. ಕಚೇರಿಯಲ್ಲಿ ನೀವು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದ್ದು,  ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಸಾಲವಾಗಿ ನೀಡಿದ ದೊಡ್ಡ ಮೊತ್ತ ಮರಳಿ ಸಿಗುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಒಂಟಿಯಾಗಿರುವವರ ಜೀವನದಲ್ಲಿ ಸಂಗಾತಿಯ ಪ್ರವೇಶವಾಗಬಹುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)