Kiara Advani diet tips : ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್ ಪ್ಲ್ಯಾನ್, ಬ್ಯೂಟಿ ಟಿಪ್ಸ್ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್ಗಳು ಸಹ ಅಷ್ಟೇ ಬೆಳ್ಳಿತೆರೆಯಲ್ಲಿ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಅವರು ಜಿಮ್ನಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಅಲ್ಲದೆ ಸಿಹಿ ಮತ್ತು ಇತರ ಪದಾರ್ಥಗಳನ್ನು ತ್ಯಜಿಸುತ್ತಾರೆ.. ಸಧ್ಯ ಕಿಯಾರಾ ತಮ್ಮ ಬ್ಯೂಟಿ ಟಿಪ್ಸ್ ರಿವೀಲ್ ಮಾಡಿದ್ದಾರೆ.
ಡಯಟ್ ಟಿಪ್ಸ್ ಅನ್ನು ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿ ಅನುಸರಿಸುತ್ತಾರೆ. ಕಿಯಾರಾ ಅಡ್ವಾಣಿ ಇತ್ತೀಚೆಗೆ ತಾವು ಸುಂದರವಾಗಿ ಮತ್ತು ಸ್ಲೀಮ್ ಆಗಿ ಕಾಣಲು ಏನ್ ಮಾಡುತ್ತಾರೆ ಅಂತ ಪ್ಯಾನ್ಸ್ಗೆ ಹೇಳಿದ್ದಾರೆ.
ನಾನು ಎಷ್ಟು ಬೇಗ ತೂಕವನ್ನು ಹೆಚ್ಚಿಸಿಕೊಳ್ಳುತ್ತೇನೋ ಅಷ್ಟು ಬೇಗ ತೂಕವನ್ನು ಕಳೆದುಕೊಳ್ಳುತ್ತೇನೆ ಅಂತ ಹೇಳಿಕೊಂಡಿದ್ದಾರೆ. ತೂಕವನ್ನು ಹೆಚ್ಚಿಸುವುದು ಮತ್ತು ಕಳೆದುಕೊಳ್ಳುವುದು ಎರಡೂ ನನಗೆ ಸುಲಭ. ಅದಕ್ಕಾಗಿ ನಾನು ನೃತ್ಯ ಮತ್ತು ಈಜಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಯಾವಾಗ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆನೋ ಅಂದಿನಿಂದ ನನ್ನ ಜೀವನಶೈಲಿಯ ಭಾಗವಾಗಿ ಡ್ಯಾನ್ಸ್ ಮತ್ತು ಈಜುವುದನ್ನು ಅಳವಡಿಸಿಕೊಂಡೆ ಎನ್ನುತ್ತಾರೆ ನಟಿ ಕಿಯಾರಾ.
ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಬಿಟೌನ್ ತಾರೆ, ನಾನು ಯಾವುದೇ ಡಯಟ್ ಪ್ಲ್ಯಾನ್ ಅನುಸರಿಸುವುದಿಲ್ಲ, ನನ್ನ ನೆಚ್ಚಿನ ಆಹಾರವನ್ನು ಅತಿಯಾಗಿ ತಿನ್ನುತ್ತೇನೆ ಅಂತ ಹೇಳಿಕೊಂಡಿದ್ದಾರೆ.
ಅಲ್ಲದೆ, ತಾವು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದಿಲ್ಲ, ಮನೆಯಲ್ಲಿಯೇ ಮಾಡಿದ ಆಹಾರ ತಿನ್ನಲು ಇಷ್ಟಪಡುತ್ತೇನೆ ಎಂದು ಕಿಯಾರಾ ತಿಳಿಸಿದ್ದಾರೆ.
ಸಧ್ಯ ಕಿಯಾರಾ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ.