1. ಅನ್ನದಾನ - ದಾನದ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿರ್ಗತಿಕರಿಗೆ ಅನ್ನ ನೀಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಅಗತ್ಯವಿರುವವರಿಗೆ ದಾನ ಮಾಡಿ.
2. ಪ್ರತಿನಿತ್ಯ ಮನೆಯಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿ - ಗರುಡ ಪುರಾಣದ ಪ್ರಕಾರ, ಭೋಜನದ ಮೊದಲು ದೇವರಿಗೆ ಆಹಾರವನ್ನು ಅರ್ಪಿಸುವ ಮನೆಯಲ್ಲಿ ಆಹಾರ ಮತ್ತು ಹಣದ (Godess Lakshmi ) ಕೊರತೆ ಎಂದಿಗೂ ಇರುವುದಿಲ್ಲ. ಹೀಗೆ ಮಾಡಿ ತಾಯಿ ಅನ್ನಪೂರ್ಣೆಯ ಆಶೀರ್ವಾದವನ್ನು ಪಡೆಯಲು, ಪ್ರತಿದಿನ ಭೋಗ್ ವನ್ನು ಅರ್ಪಿಸಿ.
3. ಗ್ರಂಥಗಳ ಪಠಣ - ಗರುಡ ಪುರಾಣದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗ್ರಂಥದಲ್ಲಿ ಅಡಗಿರುವ ಜ್ಞಾನ ಪಡೆಯಲು ಅವುಗಳ ಪಠಣ ಮಾಡಬೇಕು. ಹೀಗಾಗಿ ಆದಷ್ಟು ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಪಠಿಸಬೇಕು.
4 ದೇವರ ಭಜನೆ ನಡೆಸಬೇಕು -ಗರುಡ ಪುರಾಣದ ಪ್ರಕಾರ, ತಪಸ್ಸು, ಧ್ಯಾನ, ಭಜನೆ ಇತ್ಯಾದಿಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಕೋಪವನ್ನು ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರೂ ಧ್ಯಾನವನ್ನು ಮಾಡಲೇಬೇಕು.
5. ಕುಲದೇವರು ಅಥವಾ ಕುಲದೆವತೆಯ ಪೂಜೆ - ಗರುಡ ಪುರಾಣದ ಪ್ರಕಾರ, ಕುಲದೇವಿ ಅಥವಾ ಕುಲದೇವರ ಆರಾಧನೆಯು ಅತ್ಯುತ್ತಮವಾಗಿದೆ. ಅವರ ಪೂಜೆಯಿಂದ ಏಳು ನಮ್ಮ ತಲೆಮಾರುಗಳು ಸುಖ ಸಂತೋಷದಿಂದ ಬಾಳುತ್ತವೆ.