ಒಂದು ಚಮಚ ಕಡಲೆಹಿಟ್ಟು ತ್ವಚೆಯ ಮೂರು ಸಮಸ್ಯೆಗಳಿಗೆ ಪರಿಹಾರ

 ಇದು ಬ್ಲಾಕ್ ಹೆಡ್ ಸಮಸ್ಯೆ, ಆಯಿಲಿ ಫೇಸ್ ಸಮಸ್ಯೆ , ಮತ್ತು  ಕಾಂತಿ ಹೀನ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ಬೆಂಗಳೂರು :  ಕಡಲೆಹಿಟ್ಟನ್ನು ಅಡುಗೆ ಮಾಡಲು ಮಾತ್ರವಲ್ಲ, ತ್ವಚೆಯ ಸಮಸ್ಯೆಗಳ ಪರಿಹಾರಕ್ಕಾಗಿಯೂ ಬಳಸಲಾಗುತ್ತದೆ. ಕಡಲೆ ಹಿಟ್ಟು ತ್ವಚೆಯ ಮೂರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಬ್ಲಾಕ್ ಹೆಡ್ ಸಮಸ್ಯೆ, ಆಯಿಲಿ ಫೇಸ್ ಸಮಸ್ಯೆ , ಮತ್ತು  ಕಾಂತಿ ಹೀನ ಸಮಸ್ಯೆಗೆ ಪರಿಹಾರ ನೀಡುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕಡಲೆ ಹಿಟ್ಟು  ಮತ್ತು ಆಲೋವಿರಾ ಟ್ಯಾನಿಂಗ್ ಮತ್ತು ಸನ್ ಬರ್ನ್ ಸಮಸ್ಯೆಗೆ ಪರಿಹಾರ ನೀಡುತ್ತದೆ.   ಒಂದು ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ಆಲೋವಿರಾ ಜೆಲ್ ಬೆರೆಸಿ ಮುಖಕ್ಕೆ ಹಚ್ಚಿ. ಒಳಗುವವರೆಗೆ ಹಾಗೆಯೇ ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ದಿನ ಈ ರೀತಿ ಮಾಡಿದರೆ ಪರಿಣಾಮ ಕಾಣಿಸುತ್ತದೆ. 

2 /4

ಕಡಲೆ ಹಿಟ್ಟಿಗೆ  ಪಪ್ಪಾಯ ಸೇರಿಸಿ ಮುಖಕ್ಕೆ ಹಚ್ಚಿದರೆ  ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆಗೆ  ಪರಿಹಾರ ಸಿಗುತ್ತದೆ. ಇದಕ್ಕಾಗಿ ನಾಲ್ಕರಿಂದ ಐದು ತುಂಡು ಪಪ್ಪಾಯವನ್ನು  ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬೇಕು. 

3 /4

ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಆಯಿಲಿ ಫೇಸ್ ಸಮಸ್ಯೆ ನಿವಾರಣೆಯಾಗುತ್ತದೆ.   

4 /4

ಆದರೆ ನೆನಪಿರಲಿ ಮುಖಕ್ಕೆ ಯಾವುದೇ ರೀತಿಯ ಫೇಸ್ ಪ್ಯಾಕ್ ಹಾಕಿದರೂ ನಂತರ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.  ಇಲ್ಲವಾದರೆ ಒಣ ತ್ವಚೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.