Guru Pushya Yoga: ಫೆಬ್ರವರಿ 22 ರಂದು, ಚಂದ್ರನು ತನ್ನದೇ ಆದ ರಾಶಿ ಕರ್ಕ ರಾಶಿಯಲ್ಲಿ ಸಾಗಲಿದ್ದಾನೆ. ಮಾಘ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಾಗಿದ್ದು ಈ ದಿನ ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ, ರವಿ ಯೋಗಗಳ ಶುಭ ಸಂಯೋಗ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವೈದಿಕ ಜ್ಯೋತಿಷ್ಯದ ಪ್ರಕಾರ, 5 ರಾಶಿಗಳು ನಾಳೆ ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ. ಜೊತೆಗೆ ಜಾತಕದಲ್ಲಿ ಗುರುವಿನ ಸ್ಥಾನವು ಬಲಗೊಳ್ಳುತ್ತದೆ ಮತ್ತು ವಿಷ್ಣುವಿನ ಆಶೀರ್ವಾದವನ್ನು ಸಹ ಇವರು ಪಡೆಯಲಿದ್ದಾರೆ.
ಗುರು ಪುಷ್ಯ ಯೋಗದಿಂದ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದು ಈ ವರದಿಯ ಮೂಲಕ ತಿಳಿಯೋಣ.
ಮಿಥುನ ರಾಶಿ: ಮಿಥುನ ರಾಶಿಯ ಜನರು ಗುರು ಪುಷ್ಯ ಯೋಗದಿಂದ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ವಿಶೇಷ ಜನರನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕುಟುಂಬ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ
ಕನ್ಯಾ ರಾಶಿ: ಗುರು ಪುಷ್ಯ ಯೋಗವು ಕನ್ಯಾ ರಾಶಿಯವರಿಗೆ ಬಹಳ ವಿಶೇಷವಾಗಿರಲಿದೆ. ಹೂಡಿಕೆ ಮಾಡಲು ಇದು ಶುಭದಿನ. ಉದ್ಯೋಗಿಗಳ ವೃತ್ತಿಜೀವನದಲ್ಲಿ ಪ್ರಯೋಜನಗಳು ಮತ್ತು ಪ್ರಗತಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಪಡೆಯುತ್ತಾರೆ.
ಧನು ರಾಶಿ: ಧನು ರಾಶಿಯವರಿಗೆ ಗುರು ಪುಷ್ಯ ಯೋಗವು ಅನುಕೂಲಕರವಾಗಿರುತ್ತದೆ. ಎಲ್ಲಾ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವಿದೇಶಿ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳೂ ಇವೆ. ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವ ಸ್ಥಿತಿಯಲ್ಲಿರುತ್ತಾರೆ. ಬಡ್ತಿಯಾಗುವ ಸಾಧ್ಯತೆಯಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಮೀನ ರಾಶಿ: ಗುರು ಪುಷ್ಯ ಯೋಗವು ಮೀನ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವನ್ನು ತರಲಿದೆ. ಕೆಲವು ಯೋಜನೆಗಳಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸೌಕರ್ಯಗಳು ಹೆಚ್ಚಾಗುತ್ತವೆ. ಅನುಭವಿಸುತ್ತಿರುವ ಯಾವುದೇ ಒತ್ತಡವು ದೂರವಾಗುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ಲಾಭವನ್ನು ಪಡೆಯುತ್ತೀರಿ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)