Birthday Special: ಪತ್ರಕರ್ತೆಯಾಗ ಬಯಸಿದ್ದ ಈ ಖ್ಯಾತ ಬಾಲಿವುಡ್ ನಟಿಯ ಜೀವನ ಬದಲಾಯಿಸಿದ್ದು ಬ್ಯೂಟಿ ಕಾಂಟೆಸ್ಟ್

ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿರುವ ಜಾಕ್ವೆಲಿನ್ ಫರ್ನಾಂಡೀಸ್ ಎಂದು ತನ್ನ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

  • Aug 11, 2020, 13:22 PM IST

ನವದೆಹಲಿ: ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿರುವ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಎಂದು ತನ್ನ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ 35 ವರ್ಷ ತುಂಬಿದೆ. ಆಗಸ್ಟ್ 11, 1985 ರಂದು ಬಹ್ರೇನ್‌ನಲ್ಲಿ ಜಾಕ್ವೇಲಿನ್ ಜನಸಿದ್ದಾರೆ. ಈ ಸಂದರ್ಭದಲ್ಲಿ, ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಕೇಳದ ವಿಷಯಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ.

1 /9

ಜಾಕ್ವೇಲಿನ್ ಶ್ರೀಲಂಕಾ ಮೂಲದ ನಟಿ ಹಾಗೂ ಮಾಡೆಲ್ ಆಗಿದ್ದಾರೆ. 2006 ರಲ್ಲಿ ಮಿಸ್ ಯುನಿವರ್ಸ್ ಶ್ರೀಲಂಕಾ ಪಿಜೆಂಟ್ ಪ್ರಶಸ್ತಿಯನ್ನು ಜಾಕ್ವೇಲಿನ್ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. 

2 /9

ಜಾಕ್ವೇಲಿನ್ ಒಂದು ಮಲ್ಟಿ ಎಥನಿಕ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಜನಿಸಿದ್ದು ಬಹರೇನ್ ನಲ್ಲಿ. ಅವರ ತಂದೆ ಶ್ರೀಲಂಕಾ ಮೂಲದವರಾಗಿದ್ದರೆ, ಅವರ ತಾಯಿ ಮಲೇಷಿಯಾ ಮೂಲದವರಾಗಿದ್ದಾರೆ.

3 /9

1980ರಲ್ಲಿ ಭುಗಿಲೆದ್ದ ತಮಿಳ್ ಹಾಗೂ ಸಿಂಹಳಿಯರ ವಿವಾದದ ಹಿನ್ನೆಲೆ ಜಾಕ್ವೇಲಿನ್ ಅವರ ತಂದೆ ಬಹರೇನ್ ಗೆ ಹೋಗಿದ್ದರು ಅಲ್ಲಿಅವರು ಏರ್ ಹೋಸ್ಟೆಸ್ ಆಗಿದ್ದ ಜಾಕ್ವೇಲಿನ್ ಅವರ ತಾಯಿಯನ್ನು ಭೇಟಿಯಾಗಿದ್ದರು.

4 /9

ಬಹರೇನ್ ನಲ್ಲಿಯೇ ಜಾಕ್ವೇಲಿನ್ ಬೆಳೆದಿದ್ದಾರೆ. ಅವರ ಆರಂಭಿಕ ಶಿಕ್ಷಣ ಕೂಡ ಅಲ್ಲಿಯೇ ನಡೆದಿದೆ. ಆಸ್ಟ್ರೇಲಿಯಾದ ಸಿಡ್ನಿ ವಿವಿಯಿಂದ ಅವರು ಮಾಸ್ ಕಮ್ಯುನಿಕೇಷನ್ ಅಧ್ಯಯನ ನಡೆಸಿದ್ದಾರೆ. ಚಿತ್ರೋದ್ಯಮಕ್ಕೆ ಬರುವುದಕ್ಕೂ ಮುನ್ನ ಜಾಕ್ವೇಲಿನ್ ಓರ್ವ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾಳೆ.

5 /9

ಹಲವು ಭಾಷೆಗಳ ಮೇಲೆ ಜಾಕ್ವೇಲಿನ್ ಉತ್ತಮ ಪ್ರಭುತ್ವ ಹೊಂದಿದ್ದಾರೆ. ಬರಲ್ಟೀಜ್ ಸ್ಕೂಲ್ ಆಫ್ ಲ್ಯಾಂಗ್ವೇಜ್ ನಲ್ಲಿ ಅವರು ಸ್ಯಾನಿಶ್, ಫ್ರೆಂಚ್ ಹಾಗೂ ಅರೇಬಿಕ್ ಅಧ್ಯಯನ ನಡೆಸಿದ್ದಾರೆ.

6 /9

ಫೂಡಿ ಆಗಿರುವ ಜಾಕ್ವೇಲಿನ್ ಗೆ ಅಡುಗೆ ತಯಾರಿಸುವುದು ತುಂಬಾ ಇಷ್ಟದ ಕೆಲಸ. ಜಾಕ್ವೇಲಿನ್ ಗೆ ಫ್ರೆಂಚ್ ಆಹಾರ ತುಂಬಾ ಇಷ್ಟ. ಆದರೆ, ಶ್ರೀಲಂಕಾ ನಿವಾಸಿಯಾಗಿರುವ ಕಾರಣ ಅವರ ಡಯಟ್ ಪ್ಲಾನ್ ನಲ್ಲಿ ಮೀನು ಮಹತ್ವದ ಪಾತ್ರವಹಿಸುತ್ತದೆ.

7 /9

ಜಪಾನಿ ಶೆಫ್ ಆಗಿರುವ ದರ್ಶನ್ ಜೊತೆಗೆ ಸೇರಿ ಜಾಕ್ವೇಲಿನ್ ಶ್ರೀಲಂಕಾದಲ್ಲಿ ರೆಸ್ಟೋರೆಂಟ್ ವೊಂದನ್ನು ಕೂಡ ನಡೆಸುತ್ತಾಳೆ ಹಾಗೂ ಅದಕ್ಕೆ 'ಕಾಮಸೂತ್ರ' ಎಂದು ಹೆಸರಿಟ್ಟಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ಜಾಕ್ವೇಲಿನ್ ಅವರ ಸಹೋದರಿಯ ರೆಸಿಪಿ ಬುಕ್ ನಲ್ಲಿರುವ ಆಹಾರಗಳನ್ನು ತಯಾರಿಸಲಾಗುತ್ತದೆ.

8 /9

ಬೆಹರೆನ್ ರಾಜಕುಮಾರ ಪ್ರಿನ್ಸ್ ಬಿನ್ ರಶೀದ್ ಅಲ್ ಖಲಿಫಾ ಜಾಕ್ವೇಲಿನ್ ಮೊದಲ ಬಾಯ್ ಫ್ರೆಂಡ್. ಬ್ರೇಕ್ ಅಪ್ ಬಳಿಕ ಪ್ರಿನ್ಸ್ 'ಜಾಕಿ' ಹೆಸರಿನ ಅಲ್ಬಮ್ ಕೂಡ ಬಿಡುಗಡೆ ಮಾಡಿದ್ದ.

9 /9

ಜಾಕ್ವೇಲಿನ್ ಸಲ್ಮಾನ್ ಖಾನ್ ನ ಹತ್ತಿರದ ಸ್ನೇಹಿತೆಯಾಗಿದ್ದಾಳೆ. ಬಾಂದ್ರಾದಲ್ಲಿರುವ ಒಂದು 3 BHK ಅಪಾರ್ಟ್ಮೆಂಟ್ ಅನ್ನು ಸಲ್ಮಾನ್ ಖಾನ್ ಜಾಕ್ವೇಲಿನ್ ಗಾಗಿ ಪ್ರೋತ್ಸಾಹಕ ಟೋಕನ್ ರೂಪದಲ್ಲಿ ನೀಡಿದ್ದ ಎಂದೂ ಕೂಡ ಹೇಳಲಾಗುತ್ತದೆ. ಆದರೆ, ಬಳಿಕ ಜಾಕ್ವೇಲಿನ್ ಈ ಕುರಿತಾದ ವರದಿಗಳನ್ನು ತಿರಸ್ಕರಿಸಿದ್ದಳು.