ಸೋನು ನಿಗಮ್ ಸಂಭಾವನೆ

  • Jul 30, 2024, 08:45 AM IST
1 /10

ಭಾರತೀಯ ಖ್ಯಾತ ಹಿನ್ನಲೆ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೋನು ನಿಗಮ್ 30 ಜುಲೈ 1973ರಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಜನಿಸಿದರು. ಇವರ ತಂದೆ ಆಗಮ್ ಕುಮಾರ್ ನಿಗಮ್,  ತಾಯಿ ಶೋಭಾ ನಿಗಮ್. 

2 /10

ಸೋನು ನಿಗಮ್ ಅವರ ತಂದೆ ಆಗಮ್ ಕುಮಾರ್ ನಿಗಮ್ ಕೂಡ ಸಂಗೀತಗಾರರೇ. ಸುಮಾರು ನಾಲ್ಕನೇ ವಯಸ್ಸಿನಿಂದ ಹಾಡಲು ಆರಂಭಿಸಿದ್ದ ಸೋನು ನಿಗಮ್ 10ನೇ ವಯಸ್ಸಿನಿಂದಲೂ  ತಂದೆಯೊಂದಿಗೆ ಹಲವು ಸ್ಟೇಜ್ ಶೋಗಳು, ಪಾರ್ಟಿಗಳು ಮತ್ತು ಮದುವೆ ಸಮಾರಂಭಗಳಲ್ಲಿ ಹಾಡಿದ್ದಾರೆ. 

3 /10

ದೆಹಲಿಯಲ್ಲಿ ಉಸ್ತಾದ್ ಮಹಾ ಕಂಜರ್ ನವೀದ್ ಅವರಿಂದ ಶಾಸ್ತ್ರೀಯ ಸಂಗೀತದ ತರಬೇತಿ ಪಡೆಯುತ್ತಿದ್ದ ಸೋನು ನಿಗಮ್ ತಮ್ಮ 18ನೇ ವಯಸ್ಸಿನಲ್ಲಿ ಹಿನ್ನಲೆ ಗಾಯಕರಾಗುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಅವರ ತಂದೆ ಮಗನನ್ನು ಮುಂಬೈಕೆ ಕರೆತರುತ್ತಾರೆ.

4 /10

ಹಲವಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಳಿಕ ಹಿನ್ನಲೆ ಗಾಯಕರಾಗಬೇಕೆಂಬ ಆಸೆ ಹೊತ್ತು ಮುಂಬೈಗೆ ಬಂದ ಸೋನು ನಿಗಮ್, ಪೌರಾಣಿಕ ಶಾಸ್ತ್ರೀಯ ಸಂಗೀತ ಮಾಂತ್ರಿಕ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರ ಗರಡಿಯಲ್ಲಿ ಪಳಗಿದವರು. 

5 /10

ಸೋನು ನಿಗಮ್ ಅವರಿಗೆ 1990ರಲ್ಲಿ 'ಜನಂ' ಚಿತ್ರದಲ್ಲಿ ಹಿನ್ನಲೆ ಗಾಯನಕ್ಕೆ ಮೊದಲ ಅವಕಾಶ ಸಿಕ್ಕಿತಾದರೂ, ಈ ಚಿತ್ರ ರಿಲೀಸ್ ಆಗಲೇಇಲ್ಲ. 

6 /10

ಟಿ-ಸೀರೀಸ್ ಮಾಲೀಕ ಗುಲ್ಶನ್ ಕುಮಾರ್ 'ಬೇವಾಫಾ ಸನಮ್'ನಲ್ಲಿ 'ಅಚ್ಛಾ ಸಿಲಾ ದಿಯಾ ಟ್ಯೂನ್' ಹಾಡಲು ಅವಕಾಶ ನೀಡಿದರು. ಈ ಗೀತೆ ಸೂಪರ್ ಹಿಟ್ ಆಯಿತು. 

7 /10

ಆದಾಗ್ಯೂ, ಸುಮಾರು ಐದು ವರ್ಷಗಳ ಕಾಲ ಮುಂಬೈನಲ್ಲಿ ಕಷ್ಟದ ದಿನಗಳನ್ನು ಅನುಭವಿಸಿದ ಸೋನು ನಿಗಮ್ ಅವರಿಗೆ ಸ್ಟೇಜ್ ಶೋಗಳೇ ಅವರ ಆದಾಯದ ಪ್ರಮುಖ ಮೂಲವಾಗಿತ್ತು. 

8 /10

1997ರಲ್ಲಿ ತೆರೆಕಂಡ 'ಬಾರ್ಡರ್' ಚಿತ್ರದಲ್ಲಿ 'ಸಂದೇಸೆ ಆತೆ ಹೇ' ಎಂಬ ಸೂಪರ್ ಹಿಟ್ ಗೀತೆಯ ಮೂಲಕ ಜನಪ್ರಿಯತೆ ಗಳಿಸಿದ ಸೋನು ನಿಗಮ್ ಬ್ಯಾಕ್ ಟು ಬ್ಯಾಕ್ ಹಿಟ್ ಗೀತೆಯ ಮೂಲಕ ಇಂದು ಭಾರತದಾದ್ಯಂತ ಮನೆ ಮಾತಾಗಿದ್ದಾರೆ.  

9 /10

ಸೋನು ನಿಗಮ್ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಪ್ ರಾಕ್, ಶಾಸ್ತ್ರೀಯ ಗಾಯನ, ಅರೆ-ಶಾಸ್ತ್ರೀಯ ಗಾಯನ, ಗಜಲ್ಸ್ ಗಾಯನ, ಹಿನ್ನೆಲೆ ಗಾಯನಸೇರಿದಂತೆ ಸುಮಾರು 2,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 

10 /10

ದೇಶದ ಟಾಪ್ ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸೋನು ನಿಗಮ್ ದೇಶ-ವಿದೇಶಗಳಲ್ಲಿ ನಡೆಸುವ ಸಂಗೀತ ಕಚೇರಿಗಳಿಗೆ 10 ರಿಂದ 15ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಇವರು ಒಂದು ಹಾಡಿಗೆ ಸುಮಾರು 5 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.