ಸಂದರ್ಶನಕ್ಕೆ ಬಂದ ನಿರೂಪಕಿಯ ಅಂದಕ್ಕೆ ಫಿದಾ ಆಗಿ ಆಕೆಯನ್ನೇ ಮದ್ವೆಯಾದ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಈತ!

Jasprit Bumrah-Sanjana Ganesan Love story: ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ ವನ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದಾರೆ. ಅಂದಹಾಗೆ ಇವರ ಲವ್ ಸ್ಟೋರಿ ಬಹುಶಃ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಇದು ಸಿನಿಮಾ ಕಥೆಗೆ ಕಮ್ಮಿಯಿಲ್ಲ ಎಂದಷ್ಟೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್. ಸ್ಟಾರ್ ಸ್ಪೋರ್ಟ್ಸ್‌’ನ ಪ್ರಸಿದ್ಧ ಆಂಕರ್. ಅಂದಹಾಗೆ ಇವರಿಬ್ಬರು ಮೊದಲ ಬಾರಿಗೆ 2017 ರಲ್ಲಿ ಐಪಿಎಲ್ ಸಮಯದಲ್ಲಿ ಭೇಟಿಯಾಗಿದ್ದರು.

2 /6

ಮೊದಲ ಭೇಟಿಯಲ್ಲಿ ಸಂಜನಾ ತುಂಬಾ ದುರಾಹಂಕಾರಿ ಎಂದುಕೊಂಡಿದ್ದರಂತೆ ಬುಮ್ರಾ. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಸಂಜನಾ ಕೂಡ ಬುಮ್ರಾ ಬಗ್ಗೆ ಅದೇ ಭಾವನೆ ಹೊಂದಿದ್ದರಂತೆ.

3 /6

ಇದಾದ ನಂತರ ಬುಮ್ರಾ ಮತ್ತು ಸಂಜನಾ ಗಣೇಶನ್ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹಿತರಾದರು. ಬಳಿಕ ಸ್ನೇಹ, ಪ್ರೇಮವಾಗಿ ಮಾರ್ಪಟ್ಟಿತು. ಕ್ರಮೇಣ ಪರಸ್ಪರರ ಮೇಲಿನ ಪ್ರೀತಿಯನ್ನು 2019 ರಲ್ಲಿ ಹೇಳಿಕೊಂಡರು ಎಂದು ಅವರೇ ಹೇಳಿದ್ದಾರೆ.

4 /6

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳನ್ನು ಯಾರ್ಕರ್‌’ನಲ್ಲಿ ಬೌಲ್ಡ್ ಮಾಡಿದ ಬುಮ್ರಾ, ಸಂಜನಾ ಮೇಲಿನ ಪ್ರೀತಿಯಿಂದ ಸ್ವತಃ ಕ್ಲೀನ್ ಬೌಲ್ಡ್ ಆಗಿದ್ದು ಸುಳ್ಳಲ್ಲ.

5 /6

ಇದಾದ ಬಳಿಕ ಬುಮ್ರಾ ಮತ್ತು ಸಂಜನಾ ಎರಡು ವರ್ಷಗಳ ಕಾಲ ರಹಸ್ಯವಾಗಿ ಡೇಟಿಂಗ್ ಮಾಡಿ, 2021 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಬುಮ್ರಾ ಬಿಸಿಸಿಐನಿಂದ ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆದಿದ್ದರು. ಇದೇ ಸಂದರ್ಭದಲ್ಲಿ ಅವರ ಮದುವೆಯ ವಿಷಯವು ಬಹಿರಂಗವಾಯಿತು. ಮಾರ್ಚ್ 15, 2021 ರಂದು, ಬುಮ್ರಾ ಮತ್ತು ಸಂಜನಾ ಮದುವೆಯಾದರು.

6 /6

ಸಂಜನಾ ಗಣೇಶನ್ ಸ್ಪೋರ್ಟ್ಸ್ ಆಂಕರ್ ಆಗುವ ಮೊದಲು ಮಾಡೆಲಿಂಗ್ ಲೋಕದಲ್ಲೂ ಸಾಕಷ್ಟು ಹೆಸರು ಗಳಿಸಿದ್ದರು. ಪ್ರಸಿದ್ಧ ಶೋ ಮಿಸ್ ಇಂಡಿಯಾದಲ್ಲಿ ಸಂಜನಾ ಫೈನಲ್ ತಲುಪಿದ್ದಾರೆ. ಅವರ ಕ್ರಿಕೆಟ್ ಜ್ಞಾನ ಅದ್ಭುತವಾಗಿದೆ ಎಂದು ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿದ್ದರು.