Health Tips: ಕಟ್ಟಿದ ಮೂಗಿನ ಸಮಸ್ಯೆಗೆ ತ್ವರಿತವಾಗಿ ಮುಕ್ತಿ ನೀಡುವ ಮನೆಮದ್ದುಗಳು

Remedies for a blocked nose: ಶೀತವನ್ನು ನಿವಾರಿಸಲು & ಕಟ್ಟಿದ ಮೂಗನ್ನು ತೆರೆಯಲು ಮಸಾಲೆಯುಕ್ತ ಆಹಾರ ಸೇವಿಸಬೇಕು. ಏಕೆಂದರೆ ಮೆಣಸಿನಕಾಯಿಗಳು ಕ್ಯಾಪ್ಸೈಸಿನ್‌ ಎಂಬ ಘಟಕವನ್ನು ಹೊಂದಿರುತ್ತವೆ. ಇದು ಮೂಗಿನ ಹಾದಿಗಳನ್ನು ತೆರೆಯಲು & ಊರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Blocked nose problem: ಮಳೆಗಾಲ, ಚಳಿಗಾಲ ಹಿಗೆ ಯಾವುದೇ ಋತುವಿನಲ್ಲಾದರೂ ಶೀತದ ಸಮಸ್ಯೆ ಭಾದಿಸುತ್ತಲೇ ಇರುತ್ತದೆ. ಅನೇಕ ಸಂದರ್ಭದಲ್ಲಿ ಶೀತದ ಸಮಸ್ಯೆಯಿಂದ ಮೂಗು ಕಟ್ಟಿದಂತಾಗುತ್ತದೆ. ಇದರಿಂದ ಉಸಿರಾಡಲು ಕೂಡ ತೊಂದರೆಯಾಗುತ್ತದೆ. ಶೀತದಿಂದ ಮೂಗಿನಲ್ಲಿ ಸೋರುವಿಕೆ ಮತ್ತು ಮೂಗುಕಟ್ಟುವಿಕೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ಕಾರಣದಿಂದ ರಾತ್ರಿಯಿಡೀ ಉಸಿರಾಡಲು ಸಾಧ್ಯವಾಗದೆ ನಿದ್ದೆಗೆಡಬೇಕಾಗುತ್ತದೆ. ಕಟ್ಟಿದ ಮೂಗಿನ ಸಮಸ್ಯೆಯನ್ನು ಸೈನುಟಿಸ್‌ ಎಂದು ಕರೆಯಲಾಗುತ್ತದೆ. ಕಟ್ಟಿದ ಮೂಗಿನ ಸಮಸ್ಯೆಗೆ ತ್ವರಿತವಾಗಿ ಮುಕ್ತಿ ನೀಡುವ ಕೆಲವು ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಜೇನುತುಪ್ಪ ಮತ್ತು ಕರಿಮೆಣಸಿನ ಸೇವನೆಯು ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಉತ್ತಮ ಮನೆಮದ್ದಾಗಿದೆ. ಇದಕ್ಕಾಗಿ ಎರಡು ಚಮಚ ಜೇನುತುಪ್ಪಕ್ಕೆ ಎರಡು ಚಿಟಿಕೆ ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಬೇಕು. ಇದು ನಿಮಗೆ ಕಟ್ಟಿದ ಮೂಗಿನ ಸಮಸ್ಯೆಯಿಂದ ಶೀಘ್ರವೇ ಪರಿಹಾರವನ್ನು ಒದಗಿಸುತ್ತದೆ.

2 /7

ಬಿಸಿ ಚಹಾ ಅಥವಾ ಬಿಸಿ ಬಿಸಿ ಸೂಪ್‌ ಕುಡಿಯುವಾಗ ಅದರ ಬಿಸಿ ಹಬೆ ಮೂಗಿನೊಳಗೆ ಪ್ರವೇಶಿಸುತ್ತದೆ. ಇದರಿಂದ ಕಟ್ಟಿಕೊಂಡ ಮೂಗು ತೆರೆಯುತ್ತದೆ ಹಾಗೂ ಉಸಿರಾಟವು ಕೂಡ ಸರಾಗವಾಗಿ ಸಾಗುತ್ತದೆ. 

3 /7

ಶುಂಠಿ ಮತ್ತು ತುಳಸಿ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್‌ ಗುಣಗಳಿವೆ. ಆದ್ದರಿಂದ ಶುಂಠಿ-ತುಳಸಿ ಚಹಾ ತಯಾರಿಸಿ ಕುಡಿಯಬೇಕು. ಇದು ಸಿಂಬಳವನ್ನು ಸಡಿಲಗೊಳಿಸಲು ಮತ್ತು ಮೂಗು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. 

4 /7

ನಿಮಗೆ ಕಟ್ಟಿದ ಮೂಗಿನ ಸಮಸ್ಯೆ ಭಾದಿಸಿದಾಗ ನೀವು ಉಸಿರಾಟದ ವ್ಯಾಯಾಮ ಮಾಡುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಮೊದಲು ಆಳವಾದ ಉಸಿರನ್ನು ತೆಗೆದುಕೊಳ್ಳಿ, ತಲೆಯನ್ನು ಹಿಂದಕ್ಕೆ ತಿರುಗಿಸಿ ಮತ್ತು ಸ್ವಲ್ಪ ಸಮಯದವರೆಗೆ ಉಸಿರನ್ನು ಹಿಡಿದುಕೊಳ್ಳಿ. ಇದರ ನಂತರ ಮೂಗು ತೆರೆದುಕೊಳ್ಳುವ ಮೂಲಕ ಉಸಿರಾಡಲು ಸುಲಭವಾಗುತ್ತದೆ. 

5 /7

ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ಹೊರಬರುವ ಹಬೆಯು ಮೂಗಿನ ಊರಿಯೂತದಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೂಗಿನ ಮೂಲಕ ಉಸಿರಾಡಲು ಅನುವು ಮಾಡಿಕೊಡುತ್ತದೆ. 

6 /7

ನೀವು ಕಟ್ಟಿದ ಮೂಗಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಬಯಸಿದರೆ, ಸ್ಟೀಮ್ ತೆಗೆದುಕೊಳ್ಳಿರಿ. ಸ್ಟೀಮ್‌ ತೆಗೆದುಕೊಳ್ಳುವುದರಿಂದ ಮೂಗಿನಲ್ಲಿ ಸಂಗ್ರಹವಾಗಿರುವ ಲೋಳೆಗಳನ್ನು ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ. 

7 /7

ಶೀತವನ್ನು ನಿವಾರಿಸಲು ಮತ್ತು ಕಟ್ಟಿದ ಮೂಗನ್ನು ತೆರೆಯಲು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಕು. ಏಕೆಂದರೆ ಮೆಣಸಿನಕಾಯಿಗಳು ಕ್ಯಾಪ್ಸೈಸಿನ್‌ ಎಂಬ ಘಟಕವನ್ನು ಹೊಂದಿರುತ್ತವೆ. ಇದು ಮೂಗಿನ ಹಾದಿಗಳನ್ನು ತೆರೆಯಲು ಮತ್ತು ಊರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.