ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?

Nani Movie Career : ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆರಿಯರ್ ಶುರು ಮಾಡಿ.. ಅನಿರೀಕ್ಷಿತವಾಗಿ ಹೀರೋ ಆದ ಈ ನಟ.. ಯಾವುದೇ ಹಿನ್ನೆಲೆ ಇಲ್ಲದೆ.. ಸ್ವ ಪ್ರಯತ್ನದಿಂದ ಬೆಳೆದು ಸ್ಟಾರ್ ಹೀರೋಗಳ ಎದುರು ನಿಂತು.. ಮುಂಬರುವ ಕಲಾವಿದರಿಗೆ, ನಿರ್ದೇಶಕರಿಗೆ ಮಾದರಿಯಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ 3000 ಸಂಭಾವನೆಯಿಂದ ವೃತ್ತಿ ಜೀವನ ಆರಂಭಿಸಿ ಈಗ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ... ಹಾಗಿದ್ರೆ ಯಾರು ಆ ನಟ.. ಬನ್ನಿ ತಿಳಿಯೋಣ..

1 /7

ಚಿತ್ರರಂಗದಲ್ಲಿ ಹೀರೋ ಅಥವಾ ಡೈರೆಕ್ಟರ್ ಆಗಿ ನಿಲ್ಲಲು ಪ್ರಯತ್ನಿಸುವವರು ಬಹಳ ಮಂದಿ ಇದ್ದಾರೆ. ಕೆಲವರು ಇನ್ನೂ ಸ್ಟುಡಿಯೋಗಳನ್ನು ಸುತ್ತಿತ್ತಲೇ ಇದ್ದಾರೆ.. ಈ ಪೈಕಿ ಇಂಡಸ್ಟ್ರಿಗೆ ಬಂದ ನಾಯಕನೊಬ್ಬ ನಿರ್ದೇಶಕನಾಗುವ ಕನಸು ಕಂಡಿದ್ದ. ಆದರೆ ಆಕಸ್ಮಿಕವಾಗಿ ಹೀರೋ ಆದರು.. ಈಗ ಸೌತ್‌ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿ ಖ್ಯಾತಿ ಪಡೆದಿದ್ದಾರೆ...

2 /7

ಕ್ಲಾಪ್ ಬೋರ್ಡ್ ಡೈರೆಕ್ಟರ್ ಆಗಿ ಸಿನಿರಂಗದಲ್ಲಿ ಕೆಲಸ ಶುರು ಮಾಡಿ ಇಂದು ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿರುವ ಹೀರೋ ಬೇರೆ ಯಾರೂ ಅಲ್ಲ, ತೆಲುಗು ನಟ, ನ್ಯಾಚುರಲ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ನಾನಿ. ಚಿತ್ರರಂಗದಲ್ಲಿ ಹೀರೋ ಆಗಬೇಕು, ನಿರ್ದೇಶಕನಾಗಿ ಮೆಗಾಫೋನ್ ಹಿಡಿಯಬೇಕು ಎಂಬ ಕನಸು ಅನೇಕರಿಗೆ ಇರುತ್ತದೆ. ಆದರೆ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಾನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ.. 

3 /7

ಮಣಿರತ್ನಂ ಅವರ ಚಿತ್ರಗಳನ್ನು ನೋಡಿ ನಾನಿ ಪ್ರಭಾವಿತರಾಗಿದ್ದರು. ಪದವಿ ಮುಗಿದ ನಂತರ ಉದ್ಯಮಕ್ಕೆ ಸೇರಿಕೊಂಡರು. ಇಂಡಸ್ಟ್ರಿಯಲ್ಲಿ ಅವಕಾಶಗಳು ಸಿಗಲಿಲ್ಲ.. ಇದರಿಂದಾಗಿ ನಿರ್ದೇಶನದತ್ತ ಮುಖ ಮಾಡಿದರು.  ನಿರ್ಮಾಪಕ ಅನಿಲ್ ಕುಮಾರ್ ಕೋನೇರು ಅವರೊಂದಿಗೆ ಕೆಲಸ ಮಾಡಿದರು. ರಾಧಾಗೋಪಾಲಂ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡು ಕ್ಲಾಪ್ ಬಾಯ್ ಆದರು. ಸ್ವಂತ ಸಿನಿಮಾ ಮಾಡುವ ಯೋಚನೆಯೂ ನಾನಿ ತಲೆಯಲ್ಲಿತ್ತು. 

4 /7

ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಾನಿ ಹಲವು ಅವಮಾನಗಳನ್ನು ಎದುರಿಸಿದ್ದರು. ಸಿನಿಮಾ ನಿರ್ದೇಶಕರೊಬ್ಬರು ಅವರಿಗೆ ಸಾಕಷ್ಟು ಅವಮಾನ ಮಾಡಿದ್ದನ್ನು ಕೆಲವು ಸಂದರ್ಶನಗಳಲ್ಲಿ ನಾನಿ ನೆನಪಿಸಿಕೊಂಡಿದ್ದಾರೆ. ಆಗ ಅವರ ಸಂಬಳ ಕೇವಲ 3000. ಅಷ್ಟೇ ಅಲ್ಲ, ನಿರ್ದೇಶಕರೊಬ್ಬರು ಎಲ್ಲರ ಮುಂದೆ ನಾನಿಯವರನ್ನು ಕೆಟ್ಟದಾಗಿ ಅವಮಾನಿಸಿದ್ದರಂತೆ.

5 /7

ನಿರ್ದೇಶಕ ಇಂದ್ರಗಂಟಿ ಮೋಹನ ಕೃಷ್ಣ ನಾನಿಯಲ್ಲಿನ ನಟನೆಯನ್ನು ಗುರುತಿಸಿ ಅವಕಾಶ ಕೊಟ್ಟರು. ಅಷ್ಟ ಚಮ್ಮಾ ಚಿತ್ರದ ಮೂಲಕ ನಾನಿ ನಾಯಕ ನಟನಾಗಿ ಪರಿಚಯವಾದರು. ಈ ಸಿನಿಮಾದ ಯಶಸ್ಸಿನೊಂದಿಗೆ ನಾನಿ ಅಭಿನಯಕ್ಕೆ ಉತ್ತಮ ಅಂಕಗಳು ಸಿಕ್ಕವು.. 2012ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ಮಜ್ನು ಸಿನಿಮಾ ಹಿಟ್‌ ಆದ ನಂತರ ನಾನಿ ಕ್ರೇಜ್‌ ಹೆಚ್ಚಾಯಿತು.

6 /7

ಭಲೇ ಭಲೇ ಮಗಾಡಿವೋಯ್, ನೇನು ಲೋಕಲ್, ಜೆರ್ಸಿಯಂತಹ ಹಿಟ್ ಚಿತ್ರಗಳೊಂದಿಗೆ ನಾನಿಗೆ ನ್ಯಾಚುರಲ್ ಸ್ಟಾರ್ ಎಂಬ ಪಟ್ಟ ಪಡೆದರು. ಇತ್ತೀಚೆಗೆ ತೆರೆಕಂಡ ʼದಸರಾʼ ಮತ್ತು ʼಹಾಯ್ ನಾನ್ನʼ ಸಿನಿಮಾಗಳು ನಾನಿ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಸಿದವು. ನಾನಿ ಈಗ 30 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

7 /7

ಸಧ್ಯ ನಾನಿ ಸರಿಪೋದಾ ಶನಿವಾರ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ. ಸೋಷಿಯಲ್ ಮೀಡಿಯಾ ಫಾಲೋಯಿಂಗ್ ಜೊತೆಗೆ ನಾನಿ ಹ್ಯಾಪಿ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ.