Home Loan: ಗೃಹ ಸಾಲಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿರುವ ನಿರ್ಣಯದ ವೇಳೆ ಅರ್ಜಿ ಸಲ್ಲಿಸುವಾಗ ಮಾಡಲಾಗುವ ಕೆಲ ತಪ್ಪುಗಳು, ಗರಿಷ್ಠ ಸಾಲ ಪಡೆಯುವ ನಿಮ್ಮ ಅವಕಾಶಗಳನ್ನು ಕಡಿಮೆ ಮಾಡುವುದರ ಜೊತೆಗೆ ಭವಿಷ್ಯದ ರೀಪೇಮೆಂಟ್ ಮೇಲೂ ಪ್ರಭಾವ ಬೀರುತ್ತವೆ.
Home Loan: ಸ್ವಂತ ಮನೆ ಹೊಂದುವುದು ಯಾರ ಕನಸು ಆಗಿರುವುದಿಲ್ಲ ಹೇಳಿ. ಇದಕ್ಕಾಗಿ ಜನರು ಸಾಕಷ್ಟು ಸಮಯದಿಂದ ಹಣ ಕೂಡಿ ಹಾಕಿದರೆ, ಇನ್ನೂ ಕೆಲವರು ಬ್ಯಾಂಕ್ ನಿಂದ ಸಾಲ ಪಡೆದು ತಮ್ಮ ಕನಸು ಈಡೇರಿಸಿಕೊಳ್ಳುತ್ತಾರೆ. ಗೃಹ ಸಾಲ ಒಂದು ದೀರ್ಘಾವಧಿಯ ಆರ್ಥಿಕ ಹೊಣೆಗಾರಿಕೆಯಾಗಿದೆ. ಹೀಗಿರುವ ಹೋಂ ಲೋನ್ ಗಾಗಿ ತೆಗೆದುಕೊಳ್ಳಲಾಗಿರುವ ನಿರ್ಣಯಗಳಲ್ಲಿ ಒಂದು ವೇಳೆ ಯಾವುದಾದರೊಂದು ತಪ್ಪು ನಡೆದರೆ, ಅದು ನಿಮ್ಮ ಗರಿಷ್ಟ ಸಾಲ ಪಡೆಯುವ ಅವಕಾಶವನ್ನು ಕಡಿಮೆ ಮಾಡುವುದಲ್ಲದೆ, ಭವಿಷ್ಯದ ರೀಪೇಮೆಂಟ್ ಮೇಲೂ ಕೂಡ ಇದು ಪ್ರಭಾವ ಬೀರುತ್ತದೆ. ಈ ರೀತಿಯ ಯಾವುದೇ ಒಂದು ಪರಿಸ್ಥಿತಿಯಿಂದ ಬಚಾವಾಗಲು ಅರ್ಜಿ ಸಲ್ಲಿಸುವ ಮೊದಲು ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇಲ್ಲಿ ಇಲ್ಲಿ ನಾವು ಹೋಂ ಲೋನ್ (Home Loan) ಗೆ ಅರ್ಜಿ ಸಲ್ಲಿಸುವಾಗ ಮಾಡಲಾಗುವ ಐದು ತಪ್ಪುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಸಾಲ ಪಡೆಯುವವರು ಈ ತಪ್ಪುಗಳನ್ನು (Mistakes Made During Home Loan) ಮಾಡುವುದರಿಂದ ದೂರ ಉಳಿಯಬೇಕು.
ಇದನ್ನೂ ಓದಿ- SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಕಡಿಮೆ ಡೌನ್ ಪೇಮೆಂಟ್ - ಆರ್ಬಿಐ (RBI) ಮಾರ್ಗಸೂಚಿಗಳ ಪ್ರಕಾರ, ಗೃಹ ಸಾಲ ನೀಡುವವರು ಗೃಹ ಸಾಲದ ಮೊತ್ತದ ಆಧಾರದ ಮೇಲೆ ಯಾವುದೇ ಆಸ್ತಿಯ ಮೌಲ್ಯದ ಶೇಕಡಾ 75-90ರವರೆಗೆ ಸಾಲ ನೀಡಬಹುದಾಗಿದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರ ಕ್ರೆಡಿಟ್ ಅಪಾಯದ ಮೌಲ್ಯಮಾಪನದ ಆಧಾರದ ಮೇಲೆ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಾಲಗಾರನು ಉಳಿದ ಮೊತ್ತವನ್ನು ಇತರ ಮೂಲಗಳಿಂದ ಸಂಗ್ರಹಿಸಿ ಡೌನ್ ಪೇಮೆಂಟ್ ಅಥವಾ ಮಾರ್ಜಿನ್ ಕಾಂಟ್ರೀಬ್ಯೂಶನ್ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಗೃಹ ಸಾಲ ಅರ್ಜಿದಾರರು ಆಸ್ತಿಯ ಮೌಲ್ಯದ ಕನಿಷ್ಠ 10-25% ಅನ್ನು ಸಂಗ್ರಹಿಸುವ ಮೂಲಕ ಸಾಲವನ್ನು ಮಂಜೂರು ಮಾಡುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಡೌನ್ ಪೇಮೆಂಟ್ ಜಾಸ್ತಿಯಾದಷ್ಟು ಸಾಲದಾತರಿಗೆ ಸಾಲದ ಅಪಾಯ ಕಡಿಮೆಯಾಗುತ್ತದೆ ಮತ್ತು ಸಾಲದ ಅರ್ಜಿಯನ್ನು ಅನುಮೋದಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಇದಲ್ಲದೆ, ಬಡ್ಡಿದರಗಳಲ್ಲಿಯೂ ಸ್ವಲ್ಪ ಪರಿಹಾರ ಸಿಗಲಿದೆ.. ಆದರೆ, ಡೌನ್ಪೇಮೆಂಟ್ ಮೊತ್ತವನ್ನು ಹೆಚ್ಚಿಸಲು, ತುರ್ತು ನಿಧಿಗಳು ಅಥವಾ ಹಣಕಾಸಿನ ಗುರಿಗಳಿಗಾಗಿ ಮಾಡಿದ ಹೂಡಿಕೆಯನ್ನು ಹಾಳು ಮಾಡಬಾರದು.
2. ಕ್ರೆಡಿಟ್ ಸ್ಕೋರ್ (Credit Score) ಗಮನಿಸದೆ ಇರುವುದು - ಸಾಲಕ್ಕಾಗಿ ಬಂದ ಅರ್ಜಿಯನ್ನು ಸ್ವೀಕರಿಸುವಾಗ ಸಾಲದಾತರು ಕ್ರೆಡಿಟ್ ಸ್ಕೋರ್ ಅನ್ನು ಸಹ ಪರಿಗಣಿಸುತ್ತಾರೆ. ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿರುವ ಅರ್ಜಿದಾರರ ಅರ್ಜಿಯನ್ನು ಅವರು ಗೃಹ ಸಾಲಕ್ಕೆ ಪರಿಗಣಿಸಿ ಅನುಮೋದಿಸುವ ಸಾಧ್ಯತೆ ಹೆಚ್ಚು ಮತ್ತು ಬಡ್ಡಿದರದಲ್ಲಿ ಕೂಡ ನೆಮ್ಮದಿ ಸಿಗುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಇದರಿಂದ ಅರ್ಜಿದಾರರಿಗೆ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸುತ್ತದೆ.
3. ಗೃಹ ಸಾಲ ನೀಡುವವರ ಹೋಮ್ ಲೋನ್ ಕೊಡುಗೆಗಳನ್ನು ಪರಿಶೀಲಿಸದೆ ಇರುವುದು - ಸಾಲ ಪಡೆಯಬೇಕೆನ್ನುವವರ ಕ್ರೆಡಿಟ್ ಪ್ರೊಫೈಲ್ ಪ್ರಕಾರ, ಬಡ್ಡಿದರ, ಪ್ರೊಸೆಸಿಂಗ್ ಶುಲ್ಕ, ರೀಪೇಮೆಂಟ್ ಅವಧಿ, ಲೋನ್ ಅಮೌಂಟ್ ಹಾಗೂ LTV ರೆಶ್ಯೂಗಳು ವಿವಿಧ ಸಾಲನೀಡುವ ಸಂಸ್ಥೆಗಳಿಗೆ ಭಿನ್ನವಾಗಿರುತ್ತವೆ. ಹೀಗಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ಗ್ರಾಹಕರು ವಿವಿಧ ಸಾಲ ನೀಡುವ ಸಂಸ್ಥೆಗಳ ತುಲನಾತ್ಮಕ ಅಧ್ಯಯನ ನಡೆಸುವುದು ತುಂಬಾ ಮಹತ್ವದ್ದಾಗಿದೆ. ಇದಾದ ಬಳಿಕ ಆನ್ಲೈನ್ ಫೈನಾನ್ಸಿಯಲ್ ಮಾರ್ಕೆಟ್ ಪ್ಲೇಸ್ ಗಳಿಗೆ ಭೇಟಿ ನೀಡಿ ಸಾಲದಾದರೂ ಆಫರ್ ಮಾಡುವ ಬಡ್ಡಿದರ ಹಾಗೂ ಸಾಲದ ವೈಶಿಷ್ಟ್ಯಗಳ ತುಳನಾತ್ಮಕ ಅಧ್ಯಯನ ಮಾಡಬೇಕು. ಯಾವ ಸಾಳದಾತ ಬೇಕಾಗಿರುವ ಮೊತ್ತ ಹಾಗೂ ಆಆಪ್ಟಿಮಲ್ ಸಾಲದ ಅವಧಿಗಾಗಿ ಕನಿಷ್ಠ ಬಡ್ಡಿದರ ಪಡೆಯುತ್ತಿರುತ್ತಾನೆಯೋ, ಆತನ ಬಳಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು.
4. ಕೈಗೆಟಕುವ EMI ನೋಡದೆ ಇರುವುದು - ಅರ್ಜಿದಾರರ ಸಾಲದ ಅರ್ಜಿಯನ್ನು ಪರಿಶೀಲಿಸುವಾಗ, ಸಾಲದಾತರು ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಸಾಲದಾತರು ಮಾಸಿಕ ಆದಾಯದ ಶೇಕಡಾ 50-60ರಷ್ಟು ಒಟ್ಟು ಇಎಂಐ ಹೊಣೆಗಾರಿಕೆ (ಅರ್ಜಿ ಸಲ್ಲಿಸಿದ ಹೊಸ ಸಾಲವನ್ನು ಒಳಗೊಂಡಂತೆ) ಇರುವ ಜನರಿಗೆ ಸಾಲ ನೀಡಲು ಬಯಸುತ್ತಾರೆ. ಇಎಂಐ ಹೊಣೆಗಾರಿಕೆ ಮಾಸಿಕ ಆದಾಯದ ಶೇಕಡಾ 60 ಕ್ಕಿಂತ ಹೆಚ್ಚಿದ್ದರೆ, ಗೃಹ ಸಾಲ ಅರ್ಜಿಯನ್ನು ಅನುಮೋದಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಮೊದಲು ತೆಗೆದುಕೊಂಡ ಸಾಲವನ್ನು ಮರುಪಾವತಿಸಬೇಕು ಇದರಿಂದ ಒಟ್ಟು ಇಎಂಐ ಹೊಣೆಗಾರಿಕೆ 50-60 ಶೇಕಡಾ ಮಿತಿಯನ್ನು ಮೀರುವುದಿಲ್ಲ. ಗೃಹ ಸಾಲ ಅರ್ಜಿದಾರರು ಆನ್ಲೈನ್ ಗೃಹ ಸಾಲ ಇಎಂಐ ಕ್ಯಾಲ್ಕುಲೇಟರ್ಗಳ ಮೂಲಕ ಗರಿಷ್ಠ ಇಎಂಐ ಅನ್ನು ಲೆಕ್ಕ ಹಾಕಬೇಕು, ಇದರಿಂದಾಗಿ ಭವಿಷ್ಯದಲ್ಲಿ ಡೀಫಾಲ್ಟ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ತುರ್ತು ನಿಧಿಯ (Contingency Fund) ಮೂಲಕ ಗೃಹ ಸಾಲದ EMI (Home Loan EMI) ಪಾವತಿಸಬಾರದು - ಉದ್ಯೋಗ ಕಳೆದುಕೊಳ್ಳುವುದು, ಅನಾರೋಗ್ಯಕ್ಕೆ ಗುರಿಯಾಗುವುದು, ಅಂಗವೈಕಲ್ಯತೆ ಇತ್ಯಾದಿ ಕಾರಣಗಳ ಮೂಲಕ ಸಾಲ ಪಡೆಯುವವರ ಮಾಸಿಕ ಆದಾಯ ನಿಂತುಹೋಗುವ ಸಾಧ್ಯತೆ ಇರುತ್ತದೆ ಮತ್ತು ಇದು ಸಾಲ ಮರುಪಾವತಿಯ ಮೇಲೆ ವಿಪರೀತ ಪ್ರಭಾವ ಬೀರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಗೃಹ ಸಾಲದ ಕಂತು ಪಾವತಿಸದೇ ಹೋದಲ್ಲಿ ಭಾರಿ ದಂಡ ಬೀಳುವ ಸಾಧ್ಯತೆ ಇರುತ್ತದೆ ಮತ್ತು ಇದು ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಕೂಡ ಹಾಳುಮಾಡುತ್ತದೆ. ಇದಲ್ಲದೆ ಗೃಹ ಸಲದ ಕಂತುಗಳನ್ನು ವರ್ತಮಾನದ ಹೂಡಿಕೆಯಿಂದ ಮರುಪಾವತಿಸುವುದರಿಂದ, ಭವಿಷ್ಯದ ಆರ್ಥಿಕ ಅಗತ್ಯತೆಗಳ ಲೆಕ್ಕಾಚಾರ ಕೂಡ ಹಾಳಾಗುತ್ತದೆ. ಹೀಗಾಗಿ ತುರ್ತು ನಿಧಿ ಸಂಗ್ರಹಣೆಯ ಸವಯದಲ್ಲಿ ಕನಿಷ್ಠ 6 ತಿಂಗಳ EMI ಕೂಡ ಅದರಲ್ಲಿ ಪರಿಗಣಿಸಬೇಕು.