Home Loan Rates: ಈ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತಿದೆ ಗೃಹ ಸಾಲ

Home Loan Interest rates Rates : ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸು. ಈ ಕನಸು ಈಡೇರಿಸಲು ಸುವರ್ಣಾವಕಾಶವಿದೆ. 

ನವದೆಹಲಿ : Home Loan Interest rates Rates : ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸು. ಈ ಕನಸು ಈಡೇರಿಸಲು ಸುವರ್ಣಾವಕಾಶವಿದೆ.  ಸರ್ಕಾರಿ ಮತ್ತು ಖಾಸಗಿ ವಲಯದ ಅನೇಕ ದೊಡ್ಡ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ. ಈ ಯೋಜನೆಯು ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳಲ್ಲಿ ಚಾಲನೆಯಲ್ಲಿದೆ.  ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ಹಲವು ವಿನಾಯಿತಿಗಳನ್ನು ಕೂಡಾ ನೀಡಲಾಗುತ್ತಿದೆ. ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು ಬಡ್ಡಿದರಗಳನ್ನು ಹೋಲಿಕೆ ಮಾಡಿನೋಡಿವುದು ಒಳ್ಳೆಯದು. ಉಯಾವ ಬ್ಯಾಂಕ್ ನಲ್ಲಿ ಒಳ್ಳೆಯ ಡೀಲ್ ಸಿಗುತ್ತದೆಯೋ ಆ ಬ್ಯಾಂಕ್ ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕಿನ ಗೃಹ ಸಾಲದ ಮೇಲಿನ ಬಡ್ಡಿದರಗಳು ಶೇಕಡಾ 6.65 ರಿಂದ 7.20 ರಷ್ಟಿದೆ. ಇನ್ನೊಂದು ಬ್ಯಾಂಕಿನಿಂದ ಸಾಲವನ್ನು ವರ್ಗಾಯಿಸಿದರೆ, ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು. ಇದಕ್ಕಾಗಿ ಆರಂಭಿಕ ಬಡ್ಡಿ ದರ 6.60 ಶೇಕಡಾ. ಸ್ಯಾಲರೀಡ್  ಮತ್ತು ಸೆಲ್ಫ್ ಎಂಪ್ಲೋಯಡಗಳಿಗೆ ವಿಧಿಸುವ ಬಡ್ಡಿ ದರಗಳು ವಿಭಿನ್ನವಾಗಿರುತ್ತವೆ.

2 /6

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲದ ಬಡ್ಡಿ ದರವು ವಾರ್ಷಿಕ 6.70 ರಿಂದ 7.75 % ವರೆಗೆ ಇರುತ್ತದೆ. ಇದೀಗ ಬ್ಯಾಂಕ್ ಗ್ರಾಹಕರಿಗಾಗಿ ಮಾನ್ಸೂನ್ ಧಮಾಕಾ ಆಫರ್ ನೀಡಿದೆ. ಇದರ ಅಡಿಯಲ್ಲಿ ಸಂಸ್ಕರಣಾ ಶುಲ್ಕ ಶೂನ್ಯವಾಗಿರುತ್ತದೆ. ಗ್ರಾಹಕರು ಇದರ ಲಾಭವನ್ನು 31 ಆಗಸ್ಟ್ 2021 ರವರೆಗೆ ಮಾತ್ರ ಪಡೆಯಬಹುದು.

3 /6

ಬ್ಯಾಂಕ್ ಆಫ್ ಬರೋಡಾ (BoB) ಗೃಹ ಸಾಲದ ಮೇಲಿನ ಬಡ್ಡಿದರಗಳು ವರ್ಷಕ್ಕೆ 6.75 ರಿಂದ 8.25 % ವರೆಗೆ ಇರುತ್ತದೆ. ಈ ಬಡ್ಡಿದರಗಳು ಸಾಲದ ಮೊತ್ತ, ಆದಾಯ, ಅರ್ಜಿದಾರರ ಕ್ರೆಡಿಟ್ ಹಿಸ್ಟರಿ ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.  

4 /6

ನೀವು ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನಿಂದ ಗೃಹ ಸಾಲ ತೆಗೆದುಕೊಳ್ಳುವುದಾದರೆ, ಇಲ್ಲಿ ಬಡ್ಡಿ ದರಗಳು 6.75 ರಿಂದ 7.55 ಪ್ರತಿಶತದ ನಡುವೆ ಇರುತ್ತದೆ. ಇದರಲ್ಲಿ, ಸ್ಯಾಲರೀಡ್  ಮತ್ತು ಸೆಲ್ಫ್ ಎಂಪ್ಲೋಯಡಗಳಿಗೆ ಸಾಲದ ಮೊತ್ತದ ಆಧಾರದ ಮೇಲೆ ಬಡ್ಡಿದರಗಳು ಬದಲಾಗುತ್ತವೆ.  

5 /6

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ((UBI) ನಲ್ಲಿ ಗೃಹ ಸಾಲದ ಆರಂಭಿಕ ಬಡ್ಡಿ ದರವು ಪ್ರತಿ ವರ್ಷಕ್ಕೆ 6.80 ಶೇಕಡಾವಾಗಿದೆ . ಗೃಹ ಸಾಲಗಳಿಗೆ ಗರಿಷ್ಠ ಬಡ್ಡಿ ದರ 7.65 ಪ್ರತಿಶತದವರೆಗೆ ಇರುತ್ತದೆ.  

6 /6

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೃಹ ಸಾಲದ ಮೇಲಿನ ಬಡ್ಡಿದರಗಳು ವರ್ಷಕ್ಕೆ 6.80 ರಿಂದ 8 % ವರೆಗೆ ಇರುತ್ತದೆ. ವಿವಿಧ ಗೃಹ ಸಾಲ ಯೋಜನೆಗಳಿಗೆ PNB ವಿಭಿನ್ನ ಆರಂಭಿಕ ಬಡ್ಡಿದರಗಳನ್ನು ಹೊಂದಿದೆ.