ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ಗೆ ಹಣ ನೀರಿನಂತೆ ಹರಿದು ಬಂದಿದ್ದೇಗೆ? ಸೀಕ್ರೆಟ್ ಬಿಚ್ಚಿಟ್ಟ ದಿನಕರ್ ತೂಗುದೀಪ!!

Challenging star darshan:‌ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಬಳಿಕ ಹೀರೊ ಆದರು. 'ಮೆಜೆಸ್ಟಿಕ್' ಚಿತ್ರದ ನಂತರ ದರ್ಶನ್ ಹಿಂತಿರುಗಿ ನೋಡಲಿಲ್ಲ.

Challenging star darshan: ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮತ್ತು ದಿನಕರ್ ತೂಗುದೀಪ ಕನ್ನಡ ಚಿತ್ರರಂಗದ ಸ್ಟಾರ್ ಸಹೋದರರು. ಇಬ್ಬರ ಪೈಕಿ ಒಬ್ಬ ನಟನಾಗಿ ಗೆದ್ದರೆ, ಮತ್ತೊಬ್ಬ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ.  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ನಟ ದರ್ಶನ್ ಸಂಕಷ್ಟ ಎದುರಿಸುವಂತಾಗಿತ್ತು. ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಇದೇ ಹೊತ್ತಿನಲ್ಲಿ ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿರುವ 'ರಾಯಲ್' ಸಿನಿಮಾ ಇದೇ ಜನವರಿ 24ರಂದು ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ. ಗಣರಾಜ್ಯೋತ್ಸವದ ವೀಕೆಂಡ್ ಚಿತ್ರಕ್ಕೆ ಸಕ್ಸಸ್ ತಂದುಕೊಡುವ ನಿರೀಕ್ಷೆಯಿದೆ. ಚಿತ್ರದ ಪ್ರಚಾರದ ಭಾಗವಾಗಿ ನಿರ್ದೇಶಕ ದಿನಕರ್ ತೂಗುದೀಪ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

2 /6

ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ನಟ ದರ್ಶನ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಬಳಿಕ ಹೀರೊ ಆದರು. 'ಮೆಜೆಸ್ಟಿಕ್' ಚಿತ್ರದ ನಂತರ ದರ್ಶನ್ ಹಿಂತಿರುಗಿ ನೋಡಲಿಲ್ಲ. ಆದರೂ ಸಹ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.

3 /6

ಒಂದು ಕಾಲದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸು ಕಟ್ಟಿ ಹಾಲು ಮಾರುತ್ತಿದ್ದ ದರ್ಶನ್ ಬಳಿಕ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡರು. ಹಲವಾರು ಸೂಪರ್‌ ಡೂಪರ್‌ ಹಿಟ್‌ ಸಿನಿಮಾ ನೀಡಿದ ಅವರು, ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಸಹೋದರ ದಿನಕರ್ ಸಹ ನಿರ್ದೇಶಕರಾಗಿ ಗೆದ್ದರು. 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ', 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಗಮನ ಸೆಳೆದಿದ್ದಾರೆ. ನಿರ್ಮಾಪಕರಾಗಿಯೂ ಅವರು ಯಶಸ್ವಿ ಆಗಿದ್ದಾರೆ. 

4 /6

ತಂದೆ ತೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗದಲ್ಲಿ ಖಳನಟನಾಗಿ ಹೆಸರು ಮಾಡಿದರೂ ಹಣ ಸಂಪಾದಿಸಲಿಲ್ಲ. ಆದರೆ ದರ್ಶನ್ ಹಾಗೂ ದಿನಕರ್ ಅದನ್ನು ಸಾಧಿಸಿ ತೋರಿಸಿದರು. ತಮ್ಮಿಬ್ಬರಿಗೆ ಹಣ ಹರಿದು ಬರೋಕೆ ಕಾರಣ ಏನು ಅನ್ನೋದರ ಬಗ್ಗೆ ಸ್ವತಃ ದಿನಕರ್ ಅವರೇ ಹೇಳಿದ್ದಾರೆ. ಚಿಕ್ಕಂದಿನಿಂದ ತನಗೆ ಹಾಗೂ ಸಹೋದರ ದರ್ಶನ್‌ಗೆ ಇದ್ದ ಒಂದು ನಂಬಿಕೆಯ ಬಗ್ಗೆ ಅವರು ಮಾತನಾಡಿದ್ದಾರೆ.

5 /6

ಅಂದಹಾಗೆ ಬೆಂಗಳೂರಿನಿಂದ ಮೈಸೂರಿಗೆ ದಿನಕರ್ ಹಾಗೂ ವಿರಾಟ್ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಹಾದಿಯಲ್ಲಿ 'ರಾಯಲ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ರಸ್ತೆ ಮಧ್ಯೆ ಕಾರ್ ನಿಲ್ಲಿಸಿದ ದಿನಕರ್ ಹರಿಯುವ ಕಾವೇರಿ ನದಿಯ ನೀರಿಗೆ ಕಾಸು ಹಾಕಿದ್ದಾರೆ. ಇದು ಯಾಕೆ ಅಂತಾ ವಿರಾಟ್ ಪ್ರಶ್ನಿಸಿದಾಗ ಅವರು ಇಂಟರೆಸ್ಟಿಂಗ್‌ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ʼನಮ್ಮ ತಂದೆ ಬೆಂಗಳೂರಿನಿಂದ ಮೈಸೂರಿಗೆ ಓಡಾಡುವಾಗ ಕಾವೇರಿ ನದಿಗೆ ಕಾಸು ಹಾಕುತ್ತಿದ್ದರು. ನಮ್ಮಪ್ಪನಿಗೆ ಒಂದು ನಂಬಿಕೆ. ಹರಿಯುವ ನೀರಿಗೆ ಕಾಸು ಹಾಕಿದರೆ ನಮಗೂ ಕಾಸು ಹರಿದು ಬರುತ್ತದೆ ಅಂತ. ನಾನು ಹಾಗೂ ದರ್ಶನ್ ಕೂಡ ಅದನ್ನೇ ಫಾಲೋ ಮಾಡ್ತಿರ್ತೀವಿʼ ಎಂದಿದ್ದಾರೆ. 

6 /6

ದಿನಕರ್ ಅವರ ಈ ಮಾತನ್ನ ಕೇಳಿದ ನಟ ವಿರಾಟ್ ಸಹ ಕಾವೇರಿ ನದಿ ನೀರಿಗೆ ಕಾಸು ಹಾಕಿದ್ದಾರೆ. ನಮ್ಮ ʼರಾಯಲ್ʼ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡು ಹೀಗೆ ಹಣ ಹರಿದು ಬರಲಿ ಅಂತಾ ಹೇಳಿ ಇಬ್ಬರೂ ಕಾವೇರಿ ನದಿ ನೀರಿಗೆ ಕಾಸು ಹಾಕಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.