ಸ್ಮಾರ್ಟ್‌ಫೋನ್‌ನ ಬ್ಯಾಟರಿ ಲೈಫ್ ಹೆಚ್ಚಿಸಬೇಕಾದರೆ ಚಾರ್ಜ್ ಮಾಡುವಾಗ ಈ ವಿಚಾರಗಳು ನೆನಪಿರಲಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಸರಿಯಾದ ವಿಧಾನ ನಿಮಗೆ ಗೊತ್ತಿದೆಯ? ಫೋನ್ ಅನ್ನು ಚಾರ್ಜ್ ಮಾಡುವಾಗ  ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ. 
 

ನವದೆಹಲಿ :  ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ ಬಳಸದವರು ತೀರಾ ವಿರಳ.  ಸ್ಮಾರ್ಟ್‌ಫೋನ್‌ನೊಂದಿಗೆ ಅನೇಕ ಪರಿಕರಗಳು ಬಂದರೂ, ನಾವು ಅತಿ ಹೆಚ್ಚು ಬಳಸುವುದು ಫೋನ್ ಚಾರ್ಜರ್ . ಯಾಕೆಂದರೆ ಚಾರ್ಜರ್ ಇಲ್ಲದೆ, ಫೋನ್ ಅನ್ನು ಬಹಳ ಕಾಲದವರೆಗೆ ಬಳಸುವುದು ಸಾಧ್ಯವಿಲ್ಲ. ಆದರೆ, ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಸರಿಯಾದ ವಿಧಾನ ನಿಮಗೆ ಗೊತ್ತಿದೆಯ? ಫೋನ್ ಅನ್ನು ಚಾರ್ಜ್ ಮಾಡುವಾಗ  ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಮ್ಮ ಫೋನ್ ಅನ್ನು ಅಗತ್ಯಕ್ಕಿಂತ ಹೆಚ್ಚು ಸಮಯ ಚಾರ್ಜಿಂಗ್‌ನಲ್ಲಿ ಇಡುವುದು ತಪ್ಪು. ರಾತ್ರಿಯಿಡೀ ಫೋನ್ ಅನ್ನು ಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. ಆದರೂ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಬ್ಯಾಟರಿ ಫುಲ್ ಆದಾಗ   ಚಾರ್ಜ್ ಮಾಡುವುದನ್ನು ತಾನಾಗಿಯೇ ನಿಲ್ಲಿಸುತ್ತವೆ, ಹಾಗಾಗಿ , ಯಾವುದೇ ವ್ಯತ್ಯಾಸವಾಗುವುದಿಲ್ಲ.  

2 /5

ಫೋನ್‌ನ ಬ್ಯಾಟರಿ ಶೂನ್ಯಕ್ಕೆ ಬಂದಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡುವ  ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಈ ಅಭ್ಯಾಸ ತಪ್ಪು. ಚಾರ್ಜಿಂಗ್ ಗೆ ಇಡಲು ಫೋನ್ ಬ್ಯಾಟರಿ ಪೂರ್ತಿ ಖಾಲಿಯಾಗುವವರೆಗೆ ಕಾಯಬೇಡಿ . 

3 /5

ಕಂಪ್ಯೂಟರ್ ಅನ್ನು ಬಳಸಿದ ನಂತರ ಅದನ್ನು ಹೇಗೆ ಆಫ್ ಮಾಡುತ್ತಿರೋ, ಹಾಗೆಯೇ,  ಸ್ಮಾರ್ಟ್‌ಫೋನ್ ಬಳಸಿದ ನಂತರ ಅಪ್ಲಿಕೇಶನ್‌ಗಳನ್ನು ಕ್ಕ್ಲೋಸ್ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇಲ್ಲದಿದ್ದರೆ, ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ, ಫೋನ್‌ನ ಬ್ಯಾಟರಿ ಕೂಡಾ  ಖಾಲಿಯಾಗುತ್ತಿರುತ್ತದೆ.     

4 /5

ನಿಮ್ಮ ಫೋನ್ ಚಾರ್ಜ್  ಫೋನ್‌ನಆಗುತ್ತಿರುವಾಗ ಅದರಲ್ಲಿರುವ ಪವರ್ ಸಾಮಾನ್ಯವಾಗಿ ಇರುವುದಕ್ಕಿಂತ ಭಿನ್ನವಾಗಿರುತ್ತದೆ. ಹಾಗಾಗಿ, ಫೋನ್ ಚಾರ್ಜ್ ಆಗುತ್ತಿರುವಾಗ, ಅದನ್ನು ಬಳಸಬೇಡಿ.  ಪೋಹೊನೆ ಬೇಗ ಚಾರ್ಜ್ ಆಗಲು ಅವಕಾಶ ಮಾಡಿಕೊಡಿ.    

5 /5

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಅಥವಾ ಇನ್ನಾವುದೇ ಸ್ಥಳದಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಬೇಡಿ.  ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳಿಂದ ಹ್ಯಾಕರ್‌ಗಳು ನಿಮ್ಮ ಡೇಟಾವನ್ನು ಕದಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ.