Changes From May 1: ಬರುವ ಮೇ 1ನೇ ತಾರೀಖಿನಿಂದ ಹಲವು ನಿಯಮಗಳು ಬದಲಾಗುತ್ತಿವೆ. ಹೀಗಾಗಿ ಮೇ ತಿಂಗಳು ಬರುವ ಮೊದಲೇ ನೀವೂ ಕೂಡ ಈ ಬದಲಾವಣೆಗಳನ್ನು ತಿಳಿದುಕೊಳ್ಳಿ .
ನವದೆಹಲಿ: Changes From May 1 - ಏಪ್ರಿಲ್ ತಿಂಗಳು ಮುಕ್ತಾಯಕ್ಕೆ ಕೇವಲ ಒಂದು ದಿನ ಮಾತ್ರ ಉಳಿದಿದೆ. ಮೇ 1 ರಿಂದ (Changes From May 1), ಅನೇಕ ಹೊಸ ಬದಲಾವಣೆಗಳು ಸಾರ್ವಜನಿಕರಿಗೆ ಅವಯವಾಗುತ್ತಿವೆ , ಆದ್ದರಿಂದ ಮೇ ಬರುವ ಮೊದಲು, ನೀವು ಈ ನಿಯಮಗಳ ಬಗ್ಗೆ ತಿಳಿದಿರಬೇಕು. ಈ ಬದಲಾವಣೆಗಳು ಬ್ಯಾಂಕಿಂಗ್ (Banking), ಗ್ಯಾಸ್ ಸಿಲಿಂಡರ್ (LPG Cylinder), ಕೋವಿಡ್ ವ್ಯಾಕ್ಸಿನೇಷನ್ಗೆ (Covid Vaccination) ಸಂಬಂಧಿಸಿದ ಬದಲಾವಣೆಗಳನ್ನೂ ಒಳಗೊಂಡಿವೆ ಮತ್ತು ಇವು ಸಾರ್ವಜನಿಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿವೆ. ಹಾಗಾದರೆ ಬನ್ನಿ ಯಾವ ಯಾವ ಬದಲಾವಣೆಗಳಾಗಲಿವೆ ತಿಳಿದುಕೊಳ್ಳೋಣ.
ಇದನ್ನೂ ಓದಿ-ದೇಶದಲ್ಲಿ ಕರೋನಾ ಸೋಂಕಿನ ಸುನಾಮಿ 24 ಗಂಟೆಗಳಲ್ಲಿ 3.79 ಲಕ್ಷ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ದಾಖಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. Axis Bank ಈ ಬದಲಾವಣೆ ಮಾಡುತ್ತಿದೆ - ಮೇ 1 ರಿಂದ ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿನ ಮಿನಿಮಮ್ ಬ್ಯಾಲೆನ್ಸ್ ಕುರಿತಾದ ನಿಯಮವನ್ನು ಬದಲಾಯಿಸುತ್ತಿದೆ. ಮೇ 1 ರಿಂದ ಪ್ರಿಲಿಮಿಟ್ ಬಳಿಕ ಹಣ ಹಿಂಪಡೆಯಲು ಮೊದಲಿಗಿಂತ ಡಬಲ್ ಜಾರ್ಜ್ ನೀಡಬೇಕಾಗಲಿದೆ. ಇದಲ್ಲದೆ ಉಳಿದ ಸೇವೆಗಳಿಗೂ ಕೂಡ ಬ್ಯಾಂಕ್ ಮೊದಲಿಗಿಂತ ಹೆಚ್ಚು ಶುಲ್ಕ ಪಡೆಯಲಿದೆ. ಮೇ ಒಂದರಿಂದ ಆಕ್ಸಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಹೆಚ್ಚಿಸಿದೆ. ಅಂದರೆ ಇನ್ಮುಂದೆ ನೀವು ಆಕ್ಸಸ್ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 10 ಸಾವಿರ ಬದಲು 15 ಸಾವಿರ ಮಿನಿಮಮ್ ಬ್ಯಾಲೆನ್ಸ್ ಕಾಯಬೇಕು.
2. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ - ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪದ ನಡುವೆಯೇ ಮೇ 1 ರಿಂದ ಲಸಿಕಾಕರಣ ಅಭಿಯಾನದ ಮೂರನೇ ಹಂತ ಆರಂಭವಾಗಲಿದೆ. ಈ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೂಡ ವ್ಯಾಕ್ಸಿನ್ ಹಾಕಲಾಗುವುದು. ಮೂರನೇ ಹಂತದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸರ್ಕಾರ ಹಲವು ನಿಯಮಗಳನ್ನು ಬದಲಾಯಿಸಿದೆ ಹಾಗೂ ಕೆಲ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತಿದೆ. ಈ ಬಾರಿ ಲಸಿಕೆ ಪಡೆಯಲು ಸರ್ಕಾರ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿದೆ.
3. ಪಾಲಸಿಯ ಕವರ್ ಮೊತ್ತವನ್ನು ದುಪ್ಪಟ್ಟು ಮಾಡಿದ IRDAI - ಕೊರೊನಾ ಎರಡನೇ ಅಲೆಯ ಮಧ್ಯೆ ವಿಮಾ ನಿಯಂತ್ರಕ ಪ್ರಾಧಿಕಾರ (IRDAI) ಆರೋಗ್ಯ ಸಂಜೀವನಿ ಪಾಲಸಿಯ ಮೊತ್ತವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ಮೇ 1 ರಿಂದ ವಿಮಾ ಕಂಪನಿಗಳು 10 ಲಕ್ಷ ರೂ. ಕವರೇಜ್ ಹೊಂದಿರುವ ಪಾಲಸಿಗಳನ್ನು ಪ್ರಸ್ತುತಪಡಿಸಬೇಕಾಗಿದೆ. ಇದಲ್ಲದೆ ಕಳೆದ ಏಪ್ರಿಲ್ 1 ರಿಂದ ಆರಂಭಗೊಂಡಿರುವ ಆರೋಗ್ಯ ಸಂಜೀವನಿ ಸ್ಟ್ಯಾಂಡರ್ಡ್ ಪಾಲಸಿ ಈ ಮೊದಲಿನ ಗರಿಷ್ಟ ಕವರೇಜ್ 5 ಲಕ್ಷ ರೂ.ಗಳಾಗಿತ್ತು.
4. ಮೇ 5 ರಿಂದ 12 ದಿನಗಳ ಕಾಲ ಬ್ಯಾಂಕ್ ಬಂದ ಇರಲಿವೆ - ಮೇ ತಿಂಗಳಿನಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳಿಗೆ ರೆಜೆ (Bank Holidays In May 2021) ಇರಲಿದೆ. ಆದರೆ ಇವುಗಳಲ್ಲಿ ಹಲವು ದಿನಗಳು ದೇಶಾದ್ಯಂತ ಎಲ್ಲ ಕಡೆಗೆ ಬ್ಯಾಂಕ್ ರಜೆ ಇರುವುದಿಲ್ಲ. ಆರ್.ಬಿ. ಐ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಪಟ್ಟಿಯ ಪ್ರಕಾರ ಕೆಲ ರಜೆಗಳು ಸ್ಥಳೀಯ ಮಟ್ಟದಲ್ಲಿ ಮಾತ್ರ ಪ್ರಭಾವದಲ್ಲಿರಲಿವೆ.
5. LPG Cylinder Price ಬದಲಾವಣೆ - ಸರ್ಕಾರಿ ತೈಲೋತ್ಪಾದಕ ಕಂಪನಿಗಳು ಪ್ರತಿ ತಿಂಗಳು LPG ಸಿಲಿಂಡರ್ ದರವನ್ನು ಪರಿಶೀಲಿಸುತ್ತವೆ. ಮೇ 1 ರಂದು ಕೂಡ ಹೊಸ ದರಗಳು ಅನ್ವಯಿಸಲಿವೆ. ಬೆಲೆಯಲ್ಲಿ ಏರಿಕೆಯಾದರು ಆಗಲಿದೆ ಅಥವಾ ಇಳಿಕೆ. ಒಟ್ಟಾರೆ ಮೇ 1 ರಿಂದ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ .