ಈ ಕ್ಯೂಟ್‌ ಪಾಪು ಈಗ ಹಾಟ್‌ ಬೇಬಿ..! ಈಕೆ ಅಂದಕ್ಕಿಲ್ಲ ಸರಿಸಾಟಿ..

Huma Qureshi : ಈ ನಟಿ ಬಿ.ರಂಜಿತ್ ನಿರ್ದೇಶನದ, ನಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರದಲ್ಲಿ ತಲೈವಾ ಗೆಳತಿ ಜರೀನಾ ಪಾತ್ರದಲ್ಲಿ ನಟಿಸಿ ಸೌತ್‌ ಸಿನಿ ಅಭಿಮಾನಿಗಳ ಮನದಲ್ಲಿ ಸ್ಥಾನ ಗಳಿಸಿದ್ದರು. ಈ ಚಿತ್ರದಲ್ಲಿ ರಜನಿ ಮತ್ತು ಹುಮಾ ಹಾಡಿರುವ ‘ಕನ್ನಮ್ಮ’ ಹಾಡು ಇಂದಿಗೂ ಅಭಿಮಾನಿಗಳ ಕಿವಿಯಲ್ಲಿ ಗುಂಯ್ಗುಡುತ್ತಿದೆ... ಅಂದಹಾಗೆ ಈಕೆ ಯಾರು ಅಂತ ಇನ್ನೂ ಗೊತ್ತಾಗ್ಲಿಲ್ವಾ..? ಬನ್ನಿ ನೋಡೋಣ..
 

1 /6

ಕಾಲಾ ಅಷ್ಟೇ ಅಲ್ಲ, ನಟ ಅಜಿತ್ ಕುಮಾರ್ ಅಭಿನಯದ ಹೆಚ್.ವಿನೋದ್ ನಿರ್ದೇಶನದ 'ವಲಿಮಾಯೈ' ಸಿನಿಮಾದಲ್ಲಿ 'ಸೋಫಿಯಾ' ಪಾತ್ರದಲ್ಲಿ ನಟಿಸಿ ಫೇಮಸ್ ಆಗಿದ್ದಳು ಈಕೆ.. ಯಸ್‌ ಅದು ಬೇರೆ ಯಾರೂ ಅಲ್ಲ ಬಾಲಿವುಡ್‌ ನಟಿ ಹುಮಾ ಖುರೇಷಿ. ವಲಿಮಾಯೈ ಚಿತ್ರದಲ್ಲಿ ಹುಮಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.   

2 /6

ಹುಮಾ ಖುರೇಷಿ ಜುಲೈ 28, 1986 ರಂದು ದೆಹಲಿಯಲ್ಲಿ ಸಲೀಂ ಖುರೇಷಿ ಮತ್ತು ಅಮೀನಾ ಖುರೇಷಿ ದಂಪತಿಗೆ ಜನಿಸಿದರು. ನಟ ಅಮೀರ್ ಖಾನ್ ಅವರೊಂದಿಗೆ ಸ್ಯಾಮ್‌ಸಂಗ್ ಮೊಬೈಲ್ ಜಾಹೀರಾತುಗಳಲ್ಲಿ ಮತ್ತು ನಟ ಶಾರುಖ್ ಖಾನ್ ಅವರೊಂದಿಗೆ ನೆರೋಲಾಗ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಬಾಲಿವುಡ್ ಚಿತ್ರರಂಗದಲ್ಲಿ ಪ್ರಸಿದ್ಧರಾದರು.  

3 /6

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಗ್ಯಾಂಗ್ಸ್ ಆಫ್ ವಾಸೇಪುರ್ ಸರಣಿಯಲ್ಲಿ ಹುಮಾ ಖುರೇಷಿ ತನ್ನ ಪಾತ್ರದ ಮೂಲಕ ಮುನ್ನೆಲೆಗೆ ಬಂದರು. ಅವರು ನಟ ಅಜಿತ್ ಕುಮಾರ್ ಅವರ ಬಿಲ್ಲಾ 2 ನಲ್ಲಿ ನಾಯಕಿಯಾಗಿ ಆಯ್ಕೆಯಾದರು. ಆದರೆ, ಕಾರಣಾಂತರದಿಂದ ಈ ಸಿನಿಮಾದಿಂದ ಹೊರನಡೆದರು.   

4 /6

2018ರಲ್ಲಿ ಬಾ.ರಂಜಿತ್ ನಿರ್ದೇಶನದ, ನಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರದಲ್ಲಿ ಕಾಳ ಗೆಳತಿ ಜರೀನಾ ಪಾತ್ರದಲ್ಲಿ ನಟಿಸಿ ತಮಿಳು ಅಭಿಮಾನಿಗಳ ಮನದಲ್ಲಿ ಸ್ಥಾನ ಗಳಿಸಿದ್ದರು. ಈ ಚಿತ್ರದಲ್ಲಿ ರಜನಿ ಮತ್ತು ಹುಮಾ ಹಾಡಿರುವ ‘ಕನ್ನಮ್ಮ’ ಹಾಡು ಇಂದಿಗೂ ಅಭಿಮಾನಿಗಳ ಕಿವಿಯಲ್ಲಿ ಗುಂಯ್ಗುಡುತ್ತಿದೆ.  

5 /6

ಅದಾದ ನಂತರ ನಟ ಅಜಿತ್ ಕುಮಾರ್ ಅಭಿನಯದ ಹೆಚ್.ವಿನೋದ್ ನಿರ್ದೇಶನದ 'ವಲಿಮಾಯೈ' ಸಿನಿಮಾದಲ್ಲಿ 'ಸೋಫಿಯಾ' ಪಾತ್ರದಲ್ಲಿ ನಟಿಸಿ ಫೇಮಸ್ ಆದರು ಹುಮಾ ಖುರೇಷಿ. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿ ತಮ್ಮ ವಿಶಿಷ್ಟ ಅಭಿನಯ ಮೂಲಕ ಜನಮನ ಗೆದ್ದರು.  

6 /6

ನಟಿ ಹುಮಾ ಖುರೇಷಿ ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಬಾಲಿವುಡ್‌ನಲ್ಲಿ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ, ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ನಟಿ ಹುಮಾ ಖುರೇಷಿ ಅವರ ಬಾಲ್ಯದ ಫೋಟೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.