ಹೈಟೆಕ್ ಹೈದರಾಬಾದ್ ವಿಮಾನ ನಿಲ್ದಾಣ!

ಜಿಎಂಆರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 80 ಎಕರೆ ಪ್ರದೇಶದಲ್ಲಿ ನೀರಾವರಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದಾಗಿ ಕನಿಷ್ಠ 35 ಪ್ರತಿಶತದಷ್ಟು ನೀರು ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

  • Sep 11, 2019, 14:01 PM IST

ಹೈದರಾಬಾದ್: ಕ್ಲೌಡ್ ಬೆಸ್ಟ್ ಸೆಂಟರ್ ನೀರಾವರಿ ನಿಯಂತ್ರಣ ವ್ಯವಸ್ಥೆಯನ್ನು ದೇಶದಲ್ಲಿ ಮೊದಲ ಬಾರಿಗೆ ಹೈದರಾಬಾದ್‌ನ ಜಿಎಂಆರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಸಲಾಗಿದೆ. ಐಎಂಎಂಎಸ್ (ನೀರಾವರಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಾಫ್ಟ್‌ವೇರ್) ಯಾಂತ್ರಿಕತೆಯ ಸಹಾಯದಿಂದ ಈ ವ್ಯವಸ್ಥೆಯಲ್ಲಿ ಸ್ವಯಂಚಾಲಿತ ನೀರಾವರಿ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ. ಜಿಎಂಆರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 80 ಎಕರೆ ಪ್ರದೇಶದಲ್ಲಿ ನೀರಾವರಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದಾಗಿ ಕನಿಷ್ಠ 35 ಪ್ರತಿಶತದಷ್ಟು ನೀರು ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

1 /5

ನೀರಾವರಿಗಾಗಿ ಹೈಟೆಕ್ ವ್ಯವಸ್ಥೆಗಳನ್ನು ಬಳಸುತ್ತಿರುವ ಭಾರತದ ಮೊದಲ ಪ್ರದೇಶ ಇದಾಗಿದೆ. ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ, ನೀರನ್ನು ಸಹ ಉಳಿಸಲಾಗಿದೆ. ಜೊತೆಗೆ ನಿರ್ವಹಣಾ ಕಾರ್ಯಗಳು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸುಲಭವಾಗಿದೆ.  

2 /5

ಈ ಸಂದರ್ಭದಲ್ಲಿ ಜಿಎಂಆರ್ ವಿಮಾನ ನಿಲ್ದಾಣದ ಸಿಇಒ ಎಸ್‌ಜಿಕೆ ಕಿಶೋರ್ ಅವರು ಗರಿಷ್ಠ ತಂತ್ರಜ್ಞಾನವನ್ನು ಬಳಸುವುದು ಮತ್ತು ಕನಿಷ್ಠ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಹೇಳಿದರು.

3 /5

ತಂತ್ರಜ್ಞಾನದ ಬಳಕೆಯಿಂದಾಗಿ, ನೀರನ್ನು ಸರಿಯಾಗಿ ಬಳಸಲಾಗುತ್ತಿದೆ. ಅದೇ ಸಮಯದಲ್ಲಿ ಈ ಕೆಲಸಕ್ಕಾಗಿ ಜನರ ಅಗತ್ಯವಿಲ್ಲ. ವಿಮಾನ ನಿಲ್ದಾಣದ ಆವರಣದಲ್ಲಿ ಎಲ್ಲಿಂದಲಾದರೂ ಮೊಬೈಲ್ ಇಂಟರ್ನೆಟ್ ಸಹಾಯದಿಂದ ನೀರಾವರಿ ಕಾರ್ಯವನ್ನು ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.

4 /5

ಐಎಂಎಂಎಸ್ ಆನ್‌ಲೈನ್ ಟ್ರ್ಯಾಕಿಂಗ್ ವ್ಯವಸ್ಥೆಯ ಸಹಾಯದಿಂದ, ನೀರಾವರಿ ಕೆಲಸವನ್ನು ಎಲ್ಲಿಂದಲಾದರೂ ಮಾಡಬಹುದು. ತಂತ್ರಜ್ಞಾನದ ಸಹಾಯದಿಂದ, ಸೋರಿಕೆಗಳು, ಬ್ರೇಕ್‌ಗಳಂತಹ ಸಮಸ್ಯೆಗಳು ಸಹ ನಿಖರವಾಗಿ ತಿಳಿಯುತ್ತವೆ. ಈ ಕಾರಣದಿಂದಾಗಿ, ತ್ಯಾಜ್ಯದ ಸಮಸ್ಯೆ ಕೂಡ ಇರುವುದಿಲ್ಲ. ಏಕೆಂದರೆ ಕೆಲಸ ಪೂರ್ಣಗೊಂಡ ತಕ್ಷಣವೆ ತ್ಯಾಜ್ಯವನ್ನು ತೆಗೆದುಹಾಕಲಾಗುತ್ತದೆ.

5 /5

ಆನ್‌ಲೈನ್ ವ್ಯವಸ್ಥೆಯ ಸಹಾಯದಿಂದ, ಯಾವುದೇ ರೀತಿಯ ನ್ಯೂನತೆಗಳಿದ್ದರೆ ಅದು ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತದೆ. ಅವರು ತಕ್ಷಣ ಸ್ಥಳಕ್ಕೆ ತಲುಪಿ ಸಮಸ್ಯೆಯನ್ನು ಪರಿಹರಿಸುತ್ತಾರೆ.