ಈ ರೀತಿಯ ಕನಸು ಬಿದ್ದಲ್ಲಿ ಭಯಪಡಬೇಕಾಗಿಲ್ಲ, ಅದೃಷ್ಟದ ಮುನ್ಸೂಚನೆಯಾಗಿರಬಹುದು..!

ಸ್ವಪ್ನ ಶಾಸ್ತ್ರದ ಪ್ರಕಾರ, ಕೆಲವು ಭಯಾನಕ ಕನಸುಗಳು ನಿಜ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತವೆ. 

ನವದೆಹಲಿ : ಗಾಢ ನಿದ್ರೆಯಲ್ಲಿ ಬೀಳುವ ಕನಸುಗಳು ಕೆಲವೊಮ್ಮೆ ನಿಜವಾಗಿ ಬಿಡುತ್ತವೆ. ಇನ್ನು ಕೆಲವೊಮ್ಮೆ ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಕೆಲವೊಮ್ಮೆ ನಾವು ನೋಡುವ ಭಯಾನಕ ಕನಸುಗಳ ನಂತರ, ಇದು ಅಹಿತಕರ ಘಟನೆಯ ಮುನ್ಸೂಚನೆಯೇ ಎಂಬ ಬಗ್ಗೆ  ಚಿಂತೆ ಕಾಡುತ್ತಿರುತ್ತದೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಕೆಲವು ಭಯಾನಕ ಕನಸುಗಳು ನಿಜ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತವೆ. ಸ್ವಪ್ನ ಶಾಸ್ತ್ರದಲ್ಲಿ, ಕನಸುಗಳ ಅರ್ಥವನ್ನು ಬಹಳ ವಿವರವಾಗಿ ಹೇಳಲಾಗಿದೆ. ಇದರ ಸಹಾಯದಿಂದ ರಾತ್ರಿಯಲ್ಲಿ ಕಾಣುವ ಕನಸು ಶುಭ ಫಲಿತಾಂಶವನ್ನು ನೀಡುತ್ತದೆಯೇ ಅಥವಾ ಕೆಟ್ಟ ಘಟನೆಯನ್ನು ಸೂಚಿಸುತ್ತದೆಯೇ ಎಂದು ನಾವು ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /6

ಸ್ವಪ್ನ ಶಾಸ್ತ್ರದ  ಪ್ರಕಾರ, ಕನಸಿನಲ್ಲಿ ಹಲ್ಲಿಯನ್ನು ನೋಡುವುದು ಶುಭ. ಇದರರ್ಥ ವ್ಯಕ್ತಿಯು ಹಣವನ್ನು ಗಳಿಸಲಿದ್ದಾನೆ.  

2 /6

ಕನಸಿನಲ್ಲಿ ಗಿಳಿಯನ್ನು  ಕಂಡರೆ, ಇದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಅಂತಹ ಕನಸಿನ ಸ್ವಲ್ಪ ಸಮಯದ ನಂತರ, ವ್ಯಕ್ತಿಯು ಯಾವುದಾದರೂ ರೀತಿಯಲ್ಲಿಹಣವನ್ನು ಪಡೆಯುತ್ತಾನೆ.

3 /6

ಇಂತಹ ಕನಸು ಬಿದ್ದರೆ ಯಾರೇ ಆದರೂ ಹೆದರುವುದು ಖಂಡಿತಾ. ಆದರೆ , ವಾಸ್ತವದಲ್ಲಿ ಇದು ತುಂಬಾ ಶುಭವಾಗಿದೆ. 

4 /6

ಈ ಕನಸು ವ್ಯಕ್ತಿಯು ಶೀಘ್ರದಲ್ಲೇ ಪ್ರಗತಿಯನ್ನು ಪಡೆಯಲಿದ್ದಾನೆ ಎನ್ನುವುದನ್ನು ತೋರಿಸುತ್ತದೆ

5 /6

ಕನಸಿನಲ್ಲಿ ನೀವು ತೀರಾ ಬಡತನಕ್ಕೆ ಇಳಿದಂತೆ ಕಂಡರೆ ಅದು ನೀವು ಆರ್ಥಿಕವಾಗಿ ಬಹಳ ಚೇತರಿಸಿಕೊಳ್ಳುವ ಮುನ್ಸೂಚನೆ. ಇಂಥಹ ಕನಸು ಬಿದ್ದ ನಂತರ ವ್ಯಕ್ತಿಯು ಬಹಳಷ್ಟು ಹಣವನ್ನು ಗಳಿಸುತ್ತಾನೆ.

6 /6

ಹಾವನ್ನು ಕಂಡರೆ ಎಂಥವರಿಗಾದರೂ ಭಯವಾಗುವುದು ಸಹಜ. ಕನಸಿನಲ್ಲಿ ಹಾವು ಕಂಡರೂ ಬೆಚ್ಚಿ ಬೀಳದೆ ಇರುವುದಿಲ್ಲ. ಆದರೆ ಕನಸಲ್ಲಿ ಹಾವು ಕಂಡರೆ ಅದು ಶುಭ ಸಂಕೇತ.