ಗೂಗಲ್ ನಲ್ಲಿ ಈ ಐದು ವಿಷಯಗಳ ಬಗ್ಗೆ ಸರ್ಚ್ ಮಾಡಿದರೆ ಜೈಲು ಪಾಲು ಗ್ಯಾರಂಟಿ ..!

Google ನಲ್ಲಿ ಸರ್ಚ್ ಮಾಡುವಾಗಲೂ ಬಹಳ ಎಚ್ಚರಿಕೆಯಿಂದ  ಇರಬೇಕು. ಇಲ್ಲವಾದರೆ ಈ ವಿಷಯವನ್ನು ಹುಡುಕಿರುವ ಕಾರಣಕ್ಕಾಗಿ ಜೈಲು ಪಾಲಾಗಬಹುದು. 

ಬೆಂಗಳೂರು : ಗೂಗಲ್ ಅನ್ನು ಹೆಚ್ಚು ಬಳಸಲಾಗುತ್ತದೆ. ಇದು ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಆಗಿದೆ. ಜನರು ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ಥಟ್ ಅಂತ Google ನೆನಪಾಗುತ್ತದೆ. ಆದರೆ Google ನಲ್ಲಿ ಸರ್ಚ್ ಮಾಡುವಾಗಲೂ ಬಹಳ ಎಚ್ಚರಿಕೆಯಿಂದ  ಇರಬೇಕು. ಇಲ್ಲವಾದರೆ ಈ ವಿಷಯವನ್ನು ಹುಡುಕಿರುವ ಕಾರಣಕ್ಕಾಗಿ ಜೈಲು ಪಾಲಾಗಬಹುದು. ಆದ್ದರಿಂದ ನೀವು Googleನಲ್ಲಿ ಸರ್ಚ್ ಮಾಡುವ ವೇಳೆ ಬಹಳ ಎಚ್ಚರಿಕೆ ಇರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭಾರತ ಸರ್ಕಾರವು ಚೈಲ್ಡ್ ಪೋರ್ನೋಗ್ರಫಿ  ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. Googleನಲ್ಲಿ ಈ ಬಗ್ಗೆ  ಸರ್ಚ್ ಮಾಡುವುದು  ವೀಕ್ಷಿಸುವುದು ಅಥವಾ ಶೇರ್ ಮಾಡುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ಜೈಲು ಗ್ಯಾರಂಟಿ. 

2 /5

ಕೆಲವೊಮ್ಮೆ Googleನಲ್ಲಿ ಅಗತ್ಯವಿರದ ವಿಷಯಗಳ ಬಗ್ಗೆ ಕೂಡಾ ಸರ್ಚ್ ಮಾಡುತ್ತಿರುತ್ತಾರೆ.   ಹಾಗಾಗಿ ಸುಮ್ಮನೆ ಕುತೂಹಲಕ್ಕೆ ಬಿದ್ದು ಕೂಡಾ ಬಾಂಬ್‌ಗಳನ್ನು ಹೇಗೆ ತಯಾರಿಸುವುದು ಇತ್ಯಾದಿ ಅನುಮಾನಾಸ್ಪದ ವಿಷಯಗಳ ಬಗ್ಗೆ ಸರ್ಚ್ ಮಾಡಬೇಡಿ. ಹಾಗೆ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಇದರಲ್ಲಿ ಜೈಲು ಸೇರುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. 

3 /5

Google ನಲ್ಲಿ ಗರ್ಭಪಾತ ವಿಧಾನಗಳನ್ನು ಹುಡುಕುವುದು ಸಹ ಅಪರಾಧದ ವರ್ಗಕ್ಕೆ ಸೇರುತ್ತದೆ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ.  

4 /5

ಚಿತ್ರ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಚಿತ್ರ ಸೋರಿಕೆಯಾಗುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಆನ್‌ಲೈನ್‌ನಲ್ಲಿ ಸಿನಿಮಾವನ್ನು ಸೋರಿಕೆ ಮಾಡಿದರೆ ಅಥವಾ ಡೌನ್‌ಲೋಡ್ ಮಾಡಿದರೆ ಅದು ಕೂಡಾ ಅಪರಾಧ. ಭಾರತ ಸರ್ಕಾರದ ಈ ಕಾನೂನನ್ನು ಉಲ್ಲಂಘಿಸಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ತೆರಬೇಕಾಗುತ್ತದೆ. 

5 /5

ಸಾಮಾಜಿಕ ಮಾಧ್ಯಮ ಅಥವಾ ಗೂಗಲ್‌ನಲ್ಲಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಸೋರಿಕೆ ಮಾಡುವುದು ಸಹ ಗಂಭೀರ ಅಪರಾಧ. ಇದು ಜೈಲು ಶಿಕ್ಷೆಗೂ ಕಾರಣವಾಗಬಹುದು. ತಪ್ಪಿಯೂ ಯಾರೊಬ್ಬರ ಖಾಸಗಿ ಫೋಟೋ ಅಥವಾ ವೀಡಿಯೊವನ್ನು Google ನಲ್ಲಿ ಶೇರ್ ಮಾಡಿಕೊಳ್ಳಬಾರದು.