IND vs NZ: ಅಯ್ಯರ್, ಕೊಹ್ಲಿ ಶತಕ ಅಲ್ಲ, ಪಂದ್ಯದ ದಿಕ್ಕು ಬದಲಿಸಿದ್ದು ಈ ಒಂದು ಬಾಲ್ !

ಈ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (117) ಮತ್ತು ಶ್ರೇಯಸ್ ಅಯ್ಯರ್ (105) ಅದ್ಭುತ ಶತಕಗಳನ್ನು  ಸಿಡಿಸಿದ್ದಾರೆ. ಆದರೆ ಪಂದ್ಯದ ಗೆಲುವಿಗೆ ಕಾರಣವಾಗಿದ್ದು ಮಾತ್ರ ಆ ಒಂದು ಬಾಲ್.

ವಿಶ್ವಕಪ್ 2023 ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ 2019 ರ ವಿಶ್ವಕಪ್ ಸೆಮಿಫೈನಲ್ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ತಂಡ ಫೈನಲ್‌ ಪ್ರವೇಶಿಸಿದೆ. 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇಲ್ಲಿಯವರೆಗೆ ಅಜೇಯ ಪ್ರದರ್ಶನ ನೀಡಿದೆ. ಈ ತಂಡ ಸತತ 10 ಪಂದ್ಯಗಳನ್ನು ಗೆದ್ದಿದೆ. ಈ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (117) ಮತ್ತು ಶ್ರೇಯಸ್ ಅಯ್ಯರ್ (105) ಅದ್ಭುತ ಶತಕಗಳನ್ನು  ಸಿಡಿಸಿದ್ದಾರೆ. ಆದರೆ ಪಂದ್ಯದ ಗೆಲುವಿಗೆ ಕಾರಣವಾಗಿದ್ದು ಮಾತ್ರ ಆ ಒಂದು ಬಾಲ್. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಬಿರುಸಿನ ಬ್ಯಾಟಿಂಗ್ ನಡೆಸಿದರು. ನಾಯಕ ರೋಹಿತ್ ಶರ್ಮಾ (47) ಶುಭಮನ್ ಗಿಲ್ (80*) ಜತೆಗೂಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ (117) ಮತ್ತು ಶ್ರೇಯಸ್ ಅಯ್ಯರ್ (105) ಶತಕ . ಅ ಇನ್ನು  ಕೊನೆಯ  ಓವರ್‌ಗಳಲ್ಲಿ ಕೆಎಲ್  ರಾಹುಲ್ (39*)  ಸಂಚಲನ ಮೂಡಿಸಿದರು. 

2 /4

ಸೆಮಿಫೈನಲ್  ಪಂದ್ಯದಲ್ಲಿ ಬೀಸಿದ ಶಮಿ ಬಿರುಗಾಳಿಯನ್ನು ತಂಡದ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. 7 ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು  ಒಬ್ಬರ ಹಿಂದೆ ಒಬ್ಬರನ್ನು ಪೆವಿಲಿಯನ್ ಗೆ ಅಟ್ಟಿದ ರೀತಿ ಅಮೋಘ.  ನ್ಯೂಜಿಲೆಂಡ್‌ಗೆ ಶಮಿ ಮೊದಲೇ ಎರಡು ಆಘಾತ ನೀಡಿದ್ದರು.  ಟಾಪ್-5 ಬ್ಯಾಟ್ಸ್‌ಮನ್‌ಗಳನ್ನು ತಮ್ಮದೇ ಎಸೆತಗಳಲ್ಲಿ ಔಟ್ ಮಾಡಿದ್ದು ಶಮಿಯ ಮತ್ತೊಂದು ಸಾಧನೆ.  ಈ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

3 /4

ಭಾರತ ನೀಡಿದ 398 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಇದಾದ ಬಳಿಕ ಡ್ಯಾರಿಲ್ ಮಿಚೆಲ್ (131) ಮತ್ತು ಕೇನ್ ವಿಲಿಯಮ್ಸನ್ (79) ಮೂರನೇ ವಿಕೆಟ್‌ಗೆ 181 ರನ್‌ಗಳ ದೊಡ್ಡ ಜೊತೆಯಾಟವಾಡಿದರು. ಇನಿಂಗ್ಸ್‌ನ 33ನೇ ಓವರ್ ಪಂದ್ಯದ ದೊಡ್ಡ ತಿರುವು. ಈ ಓವರ್ ನಲ್ಲಿ ಶಮಿ ಮೊದಲು ಕಿವೀಸ್ ನಾಯಕ ವಿಲಿಯಮ್ಸನ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಇದಾದ ಬಳಿಕ ಓವರ್‌ನ ನಾಲ್ಕನೇ ಎಸೆತದಲ್ಲಿ ಟಾಮ್ ಲ್ಯಾಥಮ್ ಖಾತೆ ತೆರೆಯದೆ ನಿರ್ಗಮಿಸಿದರು. ಬಳಿಕ ಟೀಂ ಇಂಡಿಯಾ ಬೌಲರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ಗಳನ್ನು ಕಬಳಿಸುತ್ತಾ ಸಾಗಿದರು. ನ್ಯೂಜಿಲೆಂಡ್ ತಂಡ 327 ರನ್‌ಗಳಿಗೆ ಆಲೌಟ್ ಆಗಿತ್ತು.

4 /4

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ವಿಶ್ವಕಪ್ 2023 ರ ಎರಡನೇ ಸೆಮಿಫೈನಲ್‌ನ ವಿಜೇತ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ. ಈ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.