ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಪತಿ ಯಾರು ಗೊತ್ತೆ..? 1406 ಕೋಟಿ ಕಂಪನಿಯ ಉಪಾಧ್ಯಕ್ಷ ಈತ

Shreya Ghoshal Husband : ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡುಗಳನ್ನು ಕೇಳುತ್ತಾ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗಲ್ಲ.. ಅವರ ಅದ್ಭುತ ಧ್ವನಿ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.. ಹಾಡುಗಾರಿಕೆಯಿಂದಲೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ಸಿಂಗರ್‌ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಬೆಂಗಾಲಿ, ಮರಾಠಿ, ಅಸ್ಸಾಮಿ, ಪಂಜಾಬಿ, ಒರಿಯಾ ಭಾಷೆಗಳ ಸಿನಿಮಾದಲ್ಲಿ ಹಾಡುಗಳನ್ನು ಹಾಡಿದ್ದಾರೆ. ಶ್ರೇಯಾ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರು.
 

1 /6

ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಶಿಲಾಧಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ 2021 ರಲ್ಲಿ ದೇವಯಾನ್ ಎಂಬ ಮಗ ಜನಿಸಿದ. ಶ್ರೇಯಾ ಘೋಷಾಲ್ ಭಾರತೀಯ ಸಿನಿಮಾ ಹಿನ್ನೆಲೆ ಸಂಗೀತದ ರಾಣಿ ಅಂತ ಕರೆಯಿಸಿಕೊಳ್ಳುತ್ತಾರೆ. ಅವರ ಪತಿ ಶಿಲಾಧಿತ್ಯ ಮುಖೋಪಾಧ್ಯಾಯ ವ್ಯಾಪಾರ ಜಗತ್ತಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.

2 /6

ಶಿಲಾದಿತ್ಯ ಅವರು ಏಪ್ರಿಲ್ 2022 ರಿಂದ ಟ್ರೂಕಾಲರ್‌ನ (Truecaller) ಜಾಗತಿಕ ಮುಖ್ಯಸ್ಥರಾಗಿದ್ದಾರೆ. ಟ್ರೂಕಾಲರ್‌ನ ವಾರ್ಷಿಕ ವರದಿಯ ಪ್ರಕಾರ, ಜನವರಿಯಿಂದ ಡಿಸೆಂಬರ್ 2023 ರವರೆಗೆ ಸುಮಾರು ರೂ. 1406 ಕೋಟಿ) ಆದಾಯ ಗಳಿಸಿದೆ. Truecaller 374 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಇದು ಭಾರತದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ.

3 /6

ಶಿಲಾಧಿತ್ಯ ಮುಖೋಪಾಧ್ಯಾಯ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ವ್ಯಾಪಾರ ಅಭಿವೃದ್ಧಿ, ಮೊಬೈಲ್ ಅಪ್ಲಿಕೇಶನ್‌ಗಳು, ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಉತ್ಪನ್ನ ನಿರ್ವಹಣೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಏಕೀಕರಣದಲ್ಲಿ ಪರಿಣತರಾಗಿದ್ದಾರೆ. ಇದಕ್ಕೂ ಮೊದಲು ಅವರು ಕ್ಯಾಲಿಫೋರ್ನಿಯಾ ಮೂಲದ SaaS ಕಂಪನಿಯಾದ CleverTap ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  

4 /6

ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ 10 ವರ್ಷಗಳ ಕಾಲ ಡೇಟಿಂಗ್ ಮಾಡಿ ವಿವಾಹವಾದರು. ಸ್ನೇಹಿತೆಯ ಮದುವೆ ವೇಳೆ ಶಿಲಾದಿತ್ಯ ತಮಗೆ ಪ್ರಪೋಸ್ ಮಾಡಿದ್ದಾಗಿ ಶ್ರೇಯಾ ಘೋಷಾಲ್ ಹೇಳಿಕೊಂಡಿದ್ದರು.  

5 /6

ಶ್ರೇಯಾ ಘೋಷಾಲ್ ಅವರ ಪತಿ ಎರಡು ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಿದ್ದಾರೆ: ಹಿಪ್‌ಕ್ಯಾಸ್ಕ್, ವೈನ್ ಸಂಗ್ರಹಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಸಹಾಯ ಮಾಡುವ ಅಪ್ಲಿಕೇಶನ್ ಮತ್ತು ಪಾಯಿಂಟ್‌ಶೆಲ್ಫ್, ಸಣ್ಣ ವ್ಯವಹಾರಗಳಿಗೆ ಪಾವತಿ ಅಪ್ಲಿಕೇಶನ್.  

6 /6

5 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ಶ್ರೇಯಾ ಘೋಷಾಲ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತಗಾರರಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯ ಅಂದಾಜು 180-185 ಕೋಟಿ ರೂ. ಎಂದು ಹೇಳಲಾಗುತ್ತದೆ..