Indian Railway: ದೇಶದ ಈ ವಿಶಿಷ್ಠ ರೈಲು ನಿಲ್ದಾಣಗಳಿಗೆ ಹೆಸರೇ ಇಲ್ಲ, ಕಾರಣ ತುಂಬಾ ರೋಚಕವಾಗಿದೆ

Unique Railway Stations: ಭಾರತೀಯ ರೈಲ್ವೇ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದೆ. ಭಾರತದಲ್ಲಿ 8000 ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ, ಇಲ್ಲಿ ದಿನನಿತ್ಯ ಲಕ್ಷಾಂತರ ಜನರು ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ನಿಲ್ದಾಣಗಳ ಹೆಸರಿನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತದೆ. 

Unique Railway Stations: ಭಾರತೀಯ ರೈಲ್ವೇ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದೆ. ಭಾರತದಲ್ಲಿ 8000 ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ, ಇಲ್ಲಿ ದಿನನಿತ್ಯ ಲಕ್ಷಾಂತರ ಜನರು ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ನಿಲ್ದಾಣಗಳ ಹೆಸರಿನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಯಾವುದೇ ಹೆಸರಿಲ್ಲದ ಎರಡು ನಿಲ್ದಾಣಗಳಿವೆ ಎಂದು ನಿಮಗೆ ಹೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.  ಆದರೆ, ಇದು ಸಂಪೂರ್ಣ ನಿಜ. ಬನ್ನಿ ಈ ನಿಲ್ದಾಣಗಳ ಬಗ್ಗೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Name Astrology: ಈ ಅಕ್ಷರದಿಂದ ಹೆಸರು ಆರಂಭಗೊಳ್ಳುವವರು ಭಾಗ್ಯಶಾಲಿಗಳಾಗಿರುತ್ತಾರೆ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /4

ಇವುಗಳಲ್ಲಿ ಮೊದಲ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಬರ್ಧಮಾನ್‌ನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಈ ನಿಲ್ದಾಣವನ್ನು ರೈನಾ ಮತ್ತು ರಾಯನಗರ ಎಂಬ ಎರಡು ಹಳ್ಳಿಗಳ ನಡುವೆ ನಿರ್ಮಿಸಲಾಗಿದೆ. ಮೊದಲು ಈ ನಿಲ್ದಾಣದ ಹೆಸರು ರಾಯನಗರ ಎಂದಿತ್ತು.

2 /4

ಈ ನಿಲ್ದಾಣಕ್ಕೆ ರಾಯನಗರ ಎಂದು ಹೆಸರಿಸಿದ್ದು ರೈನಾ ಗ್ರಾಮದ ಜನರಿಗೆ ಇಷ್ಟವಾಗಲಿಲ್ಲ. ಇದಾದ ಬಳಿಕ ಎರಡು ಗ್ರಾಮಗಳ ನಡುವಿನ ಜಗಳ ಠಾಣೆ ಮೆಟ್ಟಲೇರಿತು. ಈ ನಿಲ್ದಾಣದ ಕಟ್ಟಡವನ್ನು ರೈನಾ ಗ್ರಾಮದ ಜಮೀನಿನಲ್ಲಿ ನಿರ್ಮಿಸಲಾಗಿದೆ, ಆದ್ದರಿಂದ ಇದಕ್ಕೆ ರೈನಾ ಎಂದು ಹೆಸರಿಸಬೇಕು ಎಂದು ಗ್ರಾಮಸ್ಥರು ವಾದಿಸಿದರು. ನಂತರ ಗ್ರಾಮಸ್ಥರ ದೂರು ಆಲಿಸಿದ ರೈಲ್ವೆ ಮಂಡಳಿಯು ನಿಲ್ದಾಣದ ಹೆಸರನ್ನೇ ತೆಗೆದುಹಾಕಿತು. ಅಂದಿನಿಂದ ಈ ನಿಲ್ದಾಣಕ್ಕೆ ಹೆಸರಿಡಲಾಗಿಲ್ಲ

3 /4

ಈ ನಿಲ್ದಾಣವನ್ನು 2008 ರಲ್ಲಿ ನಿರ್ಮಿಸಲಾಗಿದೆ. ಅಂದಿನಿಂದ ಇದು ವಿವಾದಗಳಿಗೆ ಕಾರಣವಾಗಿದೆ. ಗ್ರಾಮಸ್ಥರ ವಾಗ್ವಾದದಿಂದಾಗಿ ನಿಲ್ದಾಣದ ಸೈನ್ ಬೋರ್ಡ್‌ನಿಂದ ನಿಲ್ದಾಣದ ಹೆಸರನ್ನು ತೆಗೆದುಹಾಕಲಾಗಿದೆ. ನಿಲ್ದಾಣಕ್ಕೆ ಹೆಸರಿಲ್ಲದ ಕಾರಣ ಇಲ್ಲಿಗೆ ಬರುವ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

4 /4

ಇಂತಹ ಮತ್ತೊಂದು ರೈಲು ನಿಲ್ದಾಣ  ಜಾರ್ಖಂಡ್‌ನಲ್ಲಿದೆ, ಅದಕ್ಕೂ ಯಾವುದೇ ಹೆಸರಿಲ್ಲ. ಮಾಹಿತಿಯ ಪ್ರಕಾರ, ಈ ವಿಶಿಷ್ಟ ನಿಲ್ದಾಣವು ರಾಂಚಿಯಿಂದ ತೋರಿಗೆ ಹೋಗುವ ರೈಲು ಮಾರ್ಗದಲ್ಲಿದೆ. 2011 ರಲ್ಲಿ ಈ ನಿಲ್ದಾಣದಲ್ಲಿ ಮೊದಲ ಬಾರಿಗೆ ರೈಲು ಓಡಿಸಲಾಯಿತು. ಆಗ ಅದಕ್ಕೆ ಬಡ್ಕಿಚಂಪಿ ಎಂದು ಹೆಸರಿಡಲು ತೀರ್ಮಾನಿಸಲಾಗಿತ್ತಾದರೂ ಅಕ್ಕಪಕ್ಕದ ಕಾಮ್ಲೆ ಗ್ರಾಮದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂದಿನಿಂದ ಈ ನಿಲ್ದಾಣಕ್ಕೂ ಕೂಡ ಯಾವುದೇ ಹೆಸರಿಡಲಾಗಿಲ್ಲ.