Happy Birthday Rajinikanth : ಟಾಲಿವುಡ್‌ನಿಂದ ಬಾಲಿವುಡ್ ವರೆಗೂ ತಮ್ಮದೇ ಆದ ಐಕಾನಿಕ್ ಸ್ಟೈಲ್ ಗಳಿಂದ ಜನರ ಮನಸ್ಸನ್ನು ಗೆದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 74ನೇ ವರ್ಷಕ್ಕೆ ಕಾಲಿಟ್ಟಿರುವ ತಲೈವಾ ಬರ್ತ್‌ಡೇ ಅನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ..
ತಮಿಳುನಾಡಿನ ಮಧುರೈನಲ್ಲಿ ರಜನಿಕಾಂತ್ ರವರ ದೇವಾಲಯದಲ್ಲಿ ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಲ್ಲದೆ, ತಲೈವಾ ಹುಟ್ಟು ಹಬ್ಬಕ್ಕೆ ಸಿನಿಮಾ, ರಾಜಕೀಯ, ಉದ್ಯಮ ಕ್ಷೇತ್ರಗಳ ದಿಗ್ಗಜರು ವಿಶ್ ಮಾಡುತ್ತಿದ್ದಾರೆ..
ಇಷ್ಟಲ್ಲದೆ ಅಭಿಮಾನಿಗಳು ರಜನಿಕಾಂತ್ ನಿವಾಸದಲ್ಲಿ ಕೇಕ್ ಕಟ್ ಮಾಡಿ ಸಂಬ್ರಮಿಸಿದ್ದಾರೆ. ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಿಷಸ್ ಹರಿದಾಡುತ್ತಿವೆ.
ಇನ್ನು ಹುಟ್ಟುಹಬ್ಬದ ಹಿನ್ನಲೆ ರಜನಿ ನಟನೆಯೆ ಬಹುನಿರೀಕ್ಷಿತ ಕೂಲಿ ಚಿತ್ರದ ಪೋಸ್ಟರ್ ಅಥವಾ ಗ್ಲಿಂಪ್ಸ್ ರಿಲೀಸ್ ಮಾಡುವ ನಿರೀಕ್ಷೆ ಇದೆ.
ಮೂಲತಃವಾಗಿ ರಜನಿಕಾಂತ್‌ರವರು ಬೆಂಗಳೂರಿನವರಾಗಿದ್ದು 1950 ಡಿಸೆಂಬರ್ 12 ರಂದು ಜನಿಸಿದ್ದಾರೆ. ಇವರ ಸಿನಿಮಾಗಳು ಎಂದಿಗೂ ಸೋಲು ಕಂಡಿಲ್ಲ.
ರಜನಿಕಾಂತ್ ಸೋಲನ್ನೆ ನೋಡದ ನಟ ಎನ್ನಬಹುದು. 74ವಯಾಸ್ಸಾದರು ಇಂದಿಗೂ ತಮ್ಮ ಅಭಿನಯದ ಮೂಲಕ ಇಡೀ ಜಗತ್ತನ್ನೆ ತಮ್ಮತ್ತ ನೋಡುವಂತೆ ಮಾಡುತ್ತಿದ್ದಾರೆ .
ಕನ್ನಡಿರಾದ ರಜನಿಕಾಂತ್ ಅವರು ಸ್ಯಾಂಡಲ್‌ವುಡ್‌ನಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.
ಹಿರಿಯ ನಟ ಅನಂತ್ ನಾಗ ಜೊತೆ ʼಮಾತು ತಪ್ಪದ ಮಗʼ, ಡಾ.ವಿಷ್ಣುವರ್ಧನ್ ಜೊತೆ ಕಿಲಾಡಿ ಕಿಟ್ಟು, ಗಲಾಟೆ ಸಂಸಾರ, ಕುಂಕುಮ ರಕ್ಷೆ, ಸಹೋದರರ ಸವಾಲ್ ಒಂದು ಪ್ರೇಮದ ಕಥೆ, ಬಾಳು ಜೇನು, ಕಥಾ ಸಂಗಮ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ..