Shreya Ghoshal : ಗ್ಲಾಮರ್ ಕ್ವೀನ್ ಆದ ಮೆಲೋಡಿ ಕ್ವೀನ್..! ಕ್ಯೂಟ್‌ ಶ್ರೇಯಾ ಘೋಷಾಲ್ ಫೋಟೋಸ್‌ ನೋಡಿ..

Shreya ghosal : ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅವರ ಇತ್ತೀಚಿನ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಮೆಲೋಡಿ ಕ್ವೀನ್‌ ಗ್ಲಾಮರ್‌ ಲುಕ್‌ನಲ್ಲಿ ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದು.. ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದಾರೆ... ಫೋಟೋಸ್‌ ಇಲ್ಲಿವೆ.. ನೋಡಿ..
 

1 /9

ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಮಧುರವಾದ ಧ್ವನಿಯಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.   

2 /9

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ, ಅಸ್ಸಾಮಿ, ಪಂಜಾಬಿ, ಒರಿಯಾ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.  

3 /9

ಕನ್ನಡದಲ್ಲಿ 300ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಲು ಲಭಿಸಿವೆ..  

4 /9

ಶ್ರೀಯಾ ಘೋಷಾಲ್ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರು. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿಯರಲ್ಲಿ ಇವರೂ ಒಬ್ಬರು.   

5 /9

ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಶಿಲಾಧಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾದರು, ದಂಪತಿಗೆ ದೇವಯಾನ್ ಎಂಬ ಒರ್ವ ಮಗನಿದ್ದಾನೆ.  

6 /9

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ರೇಯಾ ಘೋಷಾಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಂಗೀತ ಕಚೇರಿಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತಾರೆ.   

7 /9

ಗಾಯಕಿ ಶ್ರೇಯಾ ಇತ್ತೀಚಿನ ಫೋಟೋಶೂಟ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

8 /9

ಅನಂತ್‌ ಅಂಬಾನಿ ರಾಧಿಕಾ ಮರ್ಚಂಟ್‌ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಾಗ ತೆಗೆದ ಫೋಟೋಗಳನ್ನು ಶ್ರೇಯಾ ಪೋಸ್ಟ್ ಮಾಡಿದ್ದಾರೆ.  

9 /9

ಸ್ವಲ್ಪ ಗ್ಲಾಮರಸ್ ಇರುವ ಶ್ರೇಯಾ ಫೋಟೋಗಳಿಗೆ ಲೈಕ್ ಮತ್ತು ಕಾಮೆಂಟ್‌ ಮಹಾಪೂರವೇ ಹರಿದು ಬರುತ್ತಿದೆ.