International Women's Day 2023: ಜೀವನದಲ್ಲಿ ಯಾವಾಗಲು ತಲೆ ಎತ್ತಿ ಬದುಕುತ್ತಾರೆ ಈ ಮೂರು ರಾಶಿಗಳ ಹುಡುಗಿಯರು!

International Women's Day 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 12 ರಾಶಿಗಳಿಗೆ ಸಂಬಂಧಿಸಿದ ಜನರ ಸ್ವಭಾವ ಮತ್ತು ವ್ಯಕ್ತಿತ್ವವು ಪರಸ್ಪರ ಭಿನ್ನವಾಗಿರುತ್ತದೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಾವು ನಿಮಗೆ 3 ರಾಶಿಗಳ ಯುವತಿಯರ ಸ್ವಭಾವ ಹಾಗೂ ವ್ಯಕ್ತಿತ್ವದ ಕುರಿತು ಮಾಹಿತಿಯನ್ನು ನೀಡುತ್ತಿದ್ದು. ಈ ಯುವತಿಯರು ತಮ್ಮ ಜೀವನದಲ್ಲಿ ತುಂಬಾ ನಿರ್ಭೀತರಾಗಿರುತ್ತಾರೆ ಮತ್ತು ಆತ್ಮವಿಶ್ವಾಸದ ಜೊತೆಗೆ ಧೈರ್ಯದಿಂದ ಜೀವನದಲ್ಲಿ ಮುಂದಕ್ಕೆ ಸಾಗುತ್ತಾರೆ.
 

International Women's Day 2023: ವೈದಿಕ ಜ್ಯೋತಿಷ್ಯದಲ್ಲಿ 12 ರಾಶಿಗಳು ಹಾಗೂ  27 ನಕ್ಷತ್ರಗಳ ಕುರಿತು ವಿವರಣೆಯನ್ನು ನೀಡಲಾಗಿದೆ. ಈ ರಾಶಿಗಳಿಗೆ ಸಂಬಂಧಿಸಿದ ಜನರ ಸ್ವಭಾವವು ಪರಸ್ಪರ ಭಿನ್ನವಾಗಿರುತ್ತದೆ. ಅಲ್ಲದೆ, ಅವರ ವ್ಯಕ್ತಿತ್ವ ಮತ್ತು ವೃತ್ತಿ ಕೂಡ ಪರಸ್ಪರ ಭಿನ್ನವಾಗಿರುತ್ತದೆ. ಇಲ್ಲಿ ನಾವು ಅಂತಹ ಕೆಲ ರಾಶಿಗಳ ಕುರಿತು ಉಲ್ಲೇಖಿಸುತ್ತಿದ್ದು, ಈ ರಾಶಿಯ ಹುಡುಗಿಯರು ಜೀವನದಲ್ಲಿ ಎಂತಹ ಒತ್ತಡದಲ್ಲಿಯೂ ಕೂಡ ಧೈರ್ಯದಿಂದ ಮುನ್ನುಗ್ಗುತ್ತಾರೆ ಮತ್ತು ಇವರು ಪ್ರಾಮಾಣಿಕರು ಹಾಗೂ ಮುಕ್ತ ಮನಸ್ಸಿನವರಾಗಿರುತ್ತಾರೆ.  ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಏಳು ಶತಮಾನಗಳ ಬಳಿಕ 5 ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ಹೆಚ್ಚಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


 

1 /3

ಮೇಷ ರಾಶಿ: ಈ ರಾಶಿಯ ಹುಡುಗಿಯರು ತುಂಬಾ ನಿರ್ಭೀತರು ಹಾಗೂ ಧೈರ್ಯಶಾಲಿಗಳಾಗಿರುತ್ತಾರೆ. ಈ ಹುಡುಗಿಯರು ಯಾರ ಒತ್ತಡಕ್ಕೂ ಒಳಗಾಗಿ ಕೆಲಸ ಮಾಡುವುದಿಲ್ಲ. ಈ ಹುಡುಗಿಯರು ಪ್ರತಿ ಸವಾಲನ್ನು ಸ್ವೀಕರಿಸುತ್ತಾರೆ. ಅಲ್ಲದೆ, ಪ್ರತಿಕೂಲ ಸಂದರ್ಭಗಳಲ್ಲಿಯೂ ಇವರು ಶಾಂತವಾಗಿರುತ್ತಾರೆ. ಈ ರಾಶಿಯ ಹುಡುಗಿಯರು ತಮ್ಮ ಧೈರ್ಯದಿಂದ ತಮ್ಮ ಜೀವನದಲ್ಲಿ ಯಶಸ್ಸಿನ ಹಲವು ಕಥೆಗಳನ್ನು ಬರೆಯುತ್ತಾರೆ. ಈ ಹುಡುಗಿಯರು ಕ್ರೀಡೆಯಲ್ಲೂ ಮುಂದಿರುತ್ತಾರೆ. ಆದರೆ ಅವರು ಸ್ವಲ್ಪ ಮುಂಗೋಪದ ಸ್ವಭಾವದವರು. ಅಲ್ಲದೆ ಏನೇ ಹೇಳಬೇಕೆಂದರೂ ಮುಖದ ಮೇಲೆಯೇ ಕಡ್ಡಿ ಮುರಿದ ಹಾಗೆ ಹೇಳುತ್ತಾರೆ. ಮೇಷ ರಾಶಿಗೆ ಮಂಗಳ ಅಧಿಪತಿಯಾಗಿರುವ ತುಂಬಾ ಕಾರಣ ಮಂಗಳ ಅವರಿಗೆ ಈ ಗುಣಗಳನ್ನು ನೀಡುತ್ತಾನೆ. .  

2 /3

ಸಿಂಹ ರಾಶಿ: ಈ ರಾಶಿಗೆ ಸೇರಿದ ಹುಡುಗಿಯರು ಸ್ವಾಭಿಮಾನಿ ಮತ್ತು ತುಂಬಾ ನಿರ್ಭೀತರಾಗಿರುತ್ತಾರೆ. ಇವರು ಯಾರಿಗೂ ಹೆದರುವುದಿಲ್ಲ ಮತ್ತು ಯಾರ ಒತ್ತಡದಲ್ಲಿಯೂ ಕೆಲಸ ಮಾಡುವುದಿಲ್ಲ. ಇವರ ಮುಖದಲ್ಲಿ ಒಂದು ವಿಶೇಷ ರೀತಿಯ ತೀಕ್ಷ್ಣತೆ ಇರುತ್ತದೆ. ಇನ್ನೊಂದೆಡೆ ಇವರಿಗೆ ಏನೇ ಹೇಳಬೇಕೆಂದು ಅನಿಸಿದರೆ ಅದನ್ನು ಮುಖದ ಮೇಲೆಯೇ ಹೇಳುತ್ತಾರೆ. ಅವರ ವ್ಯಕ್ತಿತ್ವವೂ ಆಕರ್ಷಕವಾಗಿರುತ್ತದೆ. ಎಲ್ಲದರಲ್ಲೂ ತಮ್ಮದೇ ಆದ ಅಭಿಪ್ರಾಯ ಇವರು ಹೊಂದಿರುತ್ತಾರೆ. ಅಲ್ಲದೆ ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಅರ್ಥಾತ್ ಯಾರಾದರೂ ಇವರ ಆತ್ಮಗೌರವಕ್ಕೆ ಧಕ್ಕೆ ತಂದರೆ ಅದನ್ನು ಇವರು ಸಹಿಸುವುದಿಲ್ಲ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಆತ ಅವರಿಗೆ ಈ ಗುಣಗಳನ್ನು ನೀಡುತ್ತಾನೆ.   

3 /3

ಮಕರ ರಾಶಿ: ಈ ರಾಶಿಗಳ ಹುಡುಗಿಯರು ನಿರ್ಭೀತರು ಹಾಗೂ ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಇದೇ ವೇಳೆ, ತಮ್ಮ ಜೀವನದಲ್ಲಿ ಬರುವ ಪ್ರತಿ ಸವಾಲನ್ನು ಸ್ವೀಕರಿಸುವಲ್ಲಿ ಇವರು ಮುಂದಿರುತ್ತಾರೆ. ಸಮಯ ಬಂದಾಗ ತನ್ನ ನಿರ್ಭಯತೆಯನ್ನು ಇವರು ತೋರಿಸುತ್ತಾರೆ. ಅಲ್ಲದೆ, ಇವರು ಉತ್ತಮ ಬಾಸ್ ಎಂದು ಕೂಡ ಸಾಬೀತಾಗುತ್ತಾರೆ. ಎಲ್ಲರನ್ನು ಕರೆದುಕೊಂಡು ಹೋಗುವ ನಾಯಕತ್ವದ ಗುಣ ಇವರಲ್ಲಿರುತ್ತದೆ. ಇವರು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ. ಇವರು ಸೋಮಾರಿಗಳನ್ನು ಇಷ್ಟಪಡುವುದಿಲ್ಲ. ಶನಿ ದೇವನು ಮಕರ ರಾಶಿಯ ಅಧಿಪತಿಯಾಗಿದ್ದಾನೆ, ಆದ್ದರಿಂದ ಅವನು ಈ ಗುಣಗಳನ್ನು ಅವರಿಗೆ ದಯಪಾಲಿಸುತ್ತಾನೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)