ನಿವೃತ್ತಿ ಜೀವನದಲ್ಲಿ ತಗಲಬಹುದು ಮೂರು ಪಟ್ಟು ಹೆಚ್ಚು ಖರ್ಚು , ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಇರುವುದಿಲ್ಲ ಚಿಂತೆ

 Retirement Planning With Mutual Fund: ನೀವು ಉದ್ಯಮಿಗಳಾಗಲಿ ಅಥವಾ ವೇತನ ವರ್ಗದವರಾಗಲಿ ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಫೈನಾನ್ಸಿಯಲ್ ಪ್ಲಾನಿಂಗ್ ಮಾಡುವುದು ಮುಖ್ಯವಾಗಿದೆ. 

 ನವದೆಹಲಿ : Retirement Planning With Mutual Fund: ನೀವು ಉದ್ಯಮಿಗಳಾಗಲಿ ಅಥವಾ ವೇತನ ವರ್ಗದವರಾಗಲಿ ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಫೈನಾನ್ಸಿಯಲ್ ಪ್ಲಾನಿಂಗ್ ಮಾಡುವುದು ಮುಖ್ಯವಾಗಿದೆ. ಹೀಗಾಗಬೇಕಾದರೆ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅಗತ್ಯವಾಗಿರುತ್ತದೆ. ಇದರಿಂದ ಭವಿಷ್ಯದಲ್ಲಿ ಹಣಕಾಸಿನ ಒತ್ತಡ ಇರುವುದಿಲ್ಲ. ಹೆಚ್ಚುತ್ತಿರುವ ಬೆಲೆ ಏರಿಕೆ ಹಿನ್ನೆಲೆಯಲ್ಲಿ, ಇಂದಿನಿಂದ 20 ವರ್ಷಗಳ ನಂತರ ನಮ್ಮ ಮಾಸಿಕ ಖರ್ಚು 2 ರಿಂದ 3 ಪಟ್ಟು ಹೆಚ್ಚಾಗಬಹುದು. ಆದ್ದರಿಂದ,  ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ಹೊಂದಿರುವ ದೃಷ್ಟಿಯಿಂದ ಸರಿಯಾದ ಹೂಡಿಕೆಯನ್ನು ಮಾಡುವುದು ಅನಿವಾರ್ಯ.    ಮ್ಯೂಚುವಲ್ ಫಂಡ್ ಯೋಜನೆಗಳು ಇದಕ್ಕೆ ಉತ್ತಮ ಆಯ್ಕೆಯಾಗಿರಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

UTI Retirement Benefit Pension Fund ಅತ್ಯಂತ ಹಳೆಯ ಮ್ಯೂಚುವಲ್ ಫಂಡ್‌ಗಳಲ್ಲಿ ಒಂದಾಗಿದೆ. 26 ಡಿಸೆಂಬರ್ 1994 ರಂದು ಪ್ರಾರಂಭವಾದ ಈ ಯೋಜನೆ, ಸತತವಾಗಿ 10 ಪ್ರತಿಶತ ವಾರ್ಷಿಕ ಆದಾಯವನ್ನು ನೀಡಿದೆ. ಇಲ್ಲಿ 20 ವರ್ಷಗಳಲ್ಲಿ, 1 ಲಕ್ಷ 7 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಅಂದರೆ 7 ಪಟ್ಟು ರಿಟರ್ನ್.   

2 /5

HDFC Retirement Savings Fundನಲ್ಲಿ 1, 3 ಮತ್ತು 5 ವರ್ಷಗಳಲ್ಲಿ 55.81 ಶೇಕಡಾ, 16.68 ಶೇಕಡಾ ಮತ್ತು 15.62 ಪ್ರತಿಶತ ಆದಾಯವನ್ನು ನೀಡಿದೆ. ಇಲ್ಲಿ 1 ಲಕ್ಷ ರೂ.ಗಳ ಹೂಡಿಕೆಯು 5 ವರ್ಷಗಳಲ್ಲಿ 2 ಲಕ್ಷ ರೂ.ಗಳಷ್ಟಾಗಿದೆ.  

3 /5

Axis Retirement Savings Fund ಪ್ರಾರಂಭಿಸಿ ಕೇವಲ 1 ವರ್ಷವಾಗಿದೆ. ಕೇವಲ 1 ವರ್ಷದಲ್ಲಿ 18 ಪ್ರತಿಶತದಷ್ಟು ಉತ್ತಮ ಆದಾಯವನ್ನು ನೀಡಿದೆ. 

4 /5

Tata Retirement Savings Fund : ಈ ನಿವೃತ್ತಿ ನಿಧಿಯು 1, 3 ಮತ್ತು 5 ವರ್ಷಗಳಲ್ಲಿ 30.96 ಶೇಕಡಾ, 10.44 ಶೇಕಡಾ ಮತ್ತು 13.05 ರಿಟರ್ನ್ ನೀಡಿದೆ. ಇಲ್ಲಿ 1 ಲಕ್ಷ ರೂ.ಗಳ ಹೂಡಿಕೆ 5 ವರ್ಷಗಳಲ್ಲಿ 1.90 ಲಕ್ಷ ರೂ.ಯಷ್ಟಾಗಿದೆ.

5 /5

Nippon India Retirement Fund :ಈ ನಿವೃತ್ತಿ ನಿಧಿಯು 1, 3 ಮತ್ತು 5 ವರ್ಷಗಳಲ್ಲಿ 46.26 ಶೇಕಡಾ, 6.22 ಶೇಕಡಾ ಮತ್ತು 9.38 ಶೇಕಡಾ ಆದಾಯವನ್ನು ನೀಡಿದೆ. ಇಲ್ಲಿ 1 ಲಕ್ಷ ರೂ.ಗಳ ಹೂಡಿಕೆ 5 ವರ್ಷಗಳಲ್ಲಿ 1.60 ಲಕ್ಷ ರೂ. ಯಷ್ಟಾಗಿದೆ.