ದಿನೇಶ್ ಕಾರ್ತಿಕ್ ಅವರ ಪತ್ನಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಮುರಳಿ ವಿಜಯ್ ಅವರ ಸುಖಸಂಸಾರದಲ್ಲಿ ಹುಳಿ ಹಿಂಡಿದ್ದರು.
ಯಾವುದೇ ಬಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲದಂತಿದೆ ಈ ತ್ರಿಕೋನ ಪ್ರೇಮಕಥೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬದುಕಿನಲ್ಲಿ ಎದ್ದಿದ್ದ ಬಿರುಗಾಳಿ ಸಖತ್ ಸುದ್ದಿಯಾಗಿತ್ತು. ಪ್ರಾಣಸ್ನೇಹಿತನೇ ಅವರಿಗೆ ವಿಲನ್ ಆಗಿ ದ್ರೋಹವೆಸಗಿದ್ದರು. ಮದುವೆಯಾದ ಯಾರಾದರೂ ಪ್ರೀತಿಯಲ್ಲಿ ಸಿಲುಕಿದರೆ ಎಲ್ಲರ ಜೀವನೇ ಹಾಳಾಗುತ್ತದೆ. ಅದೇ ರೀತಿ ದಿನೇಶ್ ಕಾರ್ತಿಕ್ ಬದುಕಿನಲ್ಲಿಯೂ ಆಗಿತ್ತು.
ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಇಬ್ಬರು ಜನಪ್ರಿಯ ಭಾರತೀಯ ಕ್ರಿಕೆಟಿಗರು. ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಕಾರ್ತಿಕ್ ಅವರ ಪತ್ನಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಮುರಳಿ ಅವರ ಸುಖಸಂಸಾರದಲ್ಲಿ ಹುಳಿ ಹಿಂಡಿದ್ದರು. ಈ ತ್ರಿಕೋಣ ಪ್ರೇಮಕಥೆಯ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
2007ರಲ್ಲಿ 21 ವರ್ಷದ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರ ಅವರನ್ನು ವಿವಾಹವಾದರು. ನಿಕಿತಾ ತಂದೆ ಮತ್ತು ದಿನೇಶ್ ಅವರ ತಂದೆ ಒಳ್ಳೆಯ ಸ್ನೇಹಿತರಾಗಿದ್ದರಿಂದ ಇದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಕಾರ್ತಿಕ್ ಮತ್ತು ನಿಕಿತಾ ಮದುವೆ ವಯಸ್ಸನ್ನು ತಲುಪಿದ ತಕ್ಷಣ ಎರಡೂ ಕುಟುಂಬಗಳು ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದವು.
ಮದುವೆಯಾಗಿ 5 ವರ್ಷಗಳ ಕಾಲ ದಿನೇಶ್ ಮತ್ತು ನಿಕಿತಾ ಚೆನ್ನಾಗಿಯೇ ಇದ್ದರು. ನಂತರ ಇವರಿಬ್ಬರ ಸಂಸಾರದಲ್ಲಿ 3ನೇ ವ್ಯಕ್ತಿಯ ಪ್ರವೇಶವಾಯಿತು. ನಿಕಿತಾ ತಮಿಳುನಾಡಿನಲ್ಲಿ ಕಾರ್ತಿಕ್ ನ ಸಹ ಆಟಗಾರನಾಗಿದ್ದ ಮುರಳಿ ವಿಜಯ್ ನನ್ನು ಪ್ರೀತಿಸಲು ಶುರುಮಾಡಿದ್ದಳು. 2012ರಲ್ಲಿ ತಮಿಳುನಾಡು ತಂಡ ಕರ್ನಾಟಕದ ವಿರುದ್ಧ ಆಡುತ್ತಿದ್ದ ಸಂದರ್ಭದಲ್ಲಿ ಮುರಳಿ ವಿಜಯ್ ಜೊತೆ ತನ್ನ ಪತ್ನಿಯ ಸಂಬಂಧ ಹೊಂದಿದ್ದಾಳೆಂದು ಕಾರ್ತಿಕ್ ತಿಳಿದುಕೊಂಡರು. ಬಳಿಕ ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಬೇಕಾಯಿತು.
ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಿದಾಗ ಆಕೆ ಗಂಡು ಮಗುವಿಗೆ ಗರ್ಭಿಣಿಯಾಗಿದ್ದಳು. ನಿಕಿತಾ ಮತ್ತು ಮುರಳಿ ವಿಜಯ್ ಕೆಲವೇ ದಿನಗಳಲ್ಲಿ ವಿವಾಹವಾದರು. ಬಳಿಕ ಕಾರ್ತಿಕ್ ಜೊತೆಗೆ ವಿಚ್ಛೇದನವನ್ನೂ ಕೆಲವೇ ದಿನಗಳಲ್ಲಿ ಪಡೆದುಕೊಂಡರು. ಮುರಳಿ ವಿಜಯ್ ಮತ್ತು ನಿಕಿತಾ ಈಗ 3 ಮಕ್ಕಳ ಪೋಷಕರಾಗಿ ಸಂಸಾರ ನಡೆಸುತ್ತಿದ್ದಾರೆ.
2018ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಕಾರ್ತಿಕ್ ಮತ್ತು ವಿಜಯ್ ಇಬ್ಬರನ್ನು ಭಾರತೀಯ ಟೆಸ್ಟ್ ತಂಡದಲ್ಲಿ ಸೇರಿಸಲಾಯಿತು. ಸರಣಿಯುದ್ದಕ್ಕೂ ಇಬ್ಬರೂ ಪರಸ್ಪರ ಮಾತನಾಡದಿರಲು ಆದ್ಯತೆ ನೀಡಿದರು. ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಕಾರ್ತಿಕ್ ಮತ್ತು ವಿಜಯ್ ಸ್ನೇಹಸಂಬಂಧ ಹೀಗೆ ಅಂತ್ಯವಾಯಿತು.
ನಿಕಿತಾಗೆ ವಿಚ್ಛೇದನ ನೀಡಿದ ನಂತರ ದಿನೇಶ್ ಕಾರ್ತಿಕ್ 2015ರಲ್ಲಿ ಭಾರತೀಯ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು. ದೀಪಿಕಾ ಕ್ರಿಕೆಟಿಗರನ್ನು ದ್ವೇಷಿಸುತ್ತಿದ್ದರು. ಆದರೆ ಕಾರ್ತಿಕ್ ಜೊತೆಗಿನ ಕೆಲ ಭೇಟಿಗಳ ನಂತರ ಅವರನ್ನು ಇಷ್ಟಪಡಲು ಶುರುಮಾಡಿದರು. ಇಬ್ಬರೂ ಪ್ರೀತಿಸುತ್ತಾ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆಗಸ್ಟ್ 2015 ರಲ್ಲಿ ಇಬ್ಬರೂ ಮದುವೆಯಾದರು.