IPS Navjot Simi : ಬಾಲಿವುಡ್ ಬೆಡಗಿಯರನ್ನು ಮೀರಿಸುವ ಇವರು ಡಾಕ್ಟರ್ ಬಿಟ್ಟು IPS ಅಧಿಕಾರಿ!

SIMI ಬಿಹಾರ ಕೇಡರ್‌ನ 2017 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ನವಜೋತ್ ಸಿಮಿ ಅವರು ಕೆಲಸದ ಜೊತೆಗೆ ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. 

ನವದೆಹಲಿ : ಬ್ಯೂಟಿ ವಿತ್ ಬ್ರೈನ್ ಬಗ್ಗೆ ಮಾತನಾಡಿದರೆ ಐಪಿಎಸ್ ಅಧಿಕಾರಿ ನವಜೋತ್ ಸಿಮಿ ಹೆಸರು ಟಾಪ್ ನಲ್ಲಿ ಬರುತ್ತದೆ. ಐಪಿಎಸ್ ನವಜೋತ್ ಸಿಮಿ ಮೂಲತಃ ಪಂಜಾಬ್‌ನ ಗುರುದಾಸ್‌ಪುರದವರು. SIMI ಬಿಹಾರ ಕೇಡರ್‌ನ 2017 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ನವಜೋತ್ ಸಿಮಿ ಅವರು ಕೆಲಸದ ಜೊತೆಗೆ ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. 

1 /6

ಐಪಿಎಸ್ ನವಜೋತ್ ಸಿಮಿ ಪ್ರಸ್ತುತ ಪಾಟ್ನಾದಲ್ಲಿ ಪೋಸ್ಟಿಂಗ್ ಆಗಿದ್ದಾರೆ.

2 /6

ಐಪಿಎಸ್ ನವಜೋತ್ ಸಿಮಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಅವರ ಅಭಿಮಾನಿಗಳು ಕೂಡ ಫೋಟೋಗಳನ್ನು ಲೈಕ್ ಮತ್ತೆ ಶೇರ್ ಮಾಡಿಕೊಳ್ಳುತ್ತಾರೆ.

3 /6

ನವಜೋತ್ ಸಿಮಿ 2016 ರಲ್ಲಿ ಪಂಜಾಬ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಆದರೆ ಸಿಮಿಯ ಕನಸು ಐಪಿಎಸ್ ಆಗಬೇಕಿತ್ತು, ಆದ್ದರಿಂದ ಮತ್ತೆ 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡು ಎರಡನೇ ಪ್ರಯತ್ನದಲ್ಲಿ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

4 /6

ಐಪಿಎಸ್ ನವಜೋತ್ ಸಿಮಿ ಡಾಕ್ಟರ್ ಓದುತ್ತಲೇ ಐಪಿಎಸ್ ಕನಸು ಕಂಡವರು. ವಾಸ್ತವವಾಗಿ, 2010 ರಲ್ಲಿ, ಅವರು ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಲುಧಿಯಾನಾದಿಂದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಪಡೆದಿದ್ದಾರೆ. ನಂತರ ಅವರ ಒಲವು ಯುಪಿಎಸ್‌ಸಿ ಕಡೆಗೆ ತಿರುಗಿತು. ಹಾಗಾಗಿ, ದೆಹಲಿಗೆ ಬಂದು ಯುಪಿಎಸ್‌ಸಿಗೆ ತಯಾರಿ ಆರಂಭಿಸಿದರು.

5 /6

ಸಿಮಿಯವರು ತಮ್ಮ ಸಹ ಪಾಟಿ ತುಷಾರ್ ಸಿಂಗ್ಲಾ ಅವರನ್ನು ಮದುವೆಯಾಗಿದ್ದಾರೆ. ಸಧ್ಯ ಸಿಮಿ ಬಿಹಾರದ ಪಾಟ್ನಾದಲ್ಲಿ ಎಸಿಪಿಯಾಗಿ ಮತ್ತು ತುಷಾರ್ ಅವರನ್ನು ಪಶ್ಚಿಮ ಬಂಗಾಳದ ಹೌರಾದಲ್ಲಿ ಎಸ್‌ಡಿಒ ಆಗಿ ನೇಮಿಸಲಾಗಿದೆ. ಬಿಡುವಿಲ್ಲದ ಕೆಲಸದ ಕಾರಣ ಇಬ್ಬರೂ ಮದುವೆಯಾಗಲು ಸಾಧ್ಯವಾಗಿರಲಿಲ್ಲ, ಆದ್ದರಿಂದ ಇಬ್ಬರೂ ಫೆಬ್ರವರಿ 14, 2020 ರಂದು ಮದುವೆಯಾಗಲು ನಿರ್ಧರಿಸಿದರು ಮತ್ತು ಸಿಮಿ ಮತ್ತು ತುಷಾರ್ ಸಿಂಗ್ಲಾ ಪಾಟ್ನಾದಿಂದ ಹೋಗಿ ಹೌರಾದ ನೋಂದಣಿ ಕಚೇರಿಯಲ್ಲಿ ವಿವಾಹವಾದರು.

6 /6

ನವಜೋತ್ ಸಿಮಿ ಅವರು 2020 ರ ಪ್ರೇಮಿಗಳ ದಿನದಂದು ಐಎಎಸ್ ತುಷಾರ್ ಸಿಂಗ್ಲಾ ಅವರೊಂದಿಗೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ತುಷಾರ್ ಸಿಂಗ್ಲಾ ಪಶ್ಚಿಮ ಬಂಗಾಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.