Janmashtami 2021: ಜನ್ಮಾಷ್ಟಮಿಯ ದಿನ ಈ ಕೆಲಸ ಅಗತ್ಯಮಾಡಿ, ಸುಖ-ಸಮೃದ್ಧಿಯ ಜೊತೆಗೆ ಮುಕ್ತಿ ಕೂಡ ಸಿಗುತ್ತದೆ

Shri Krishna Janmashtami 2021: ನಿಮ್ಮ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು (Financial Problem) ಕಾಡುತ್ತಿದೆಯೇ? ನೀವೂ ಕೂಡ ನಿಮ್ಮ ಆದಾಯವನ್ನು ಹೆಚ್ಚಿಸಲು (Increase Income) ಬಯಸುತ್ತೀರಾ?

Shri Krishna Janmashtami 2021: ನಿಮ್ಮ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು (Financial Problem) ಕಾಡುತ್ತಿದೆಯೇ? ನೀವೂ ಕೂಡ ನಿಮ್ಮ ಆದಾಯವನ್ನು ಹೆಚ್ಚಿಸಲು (Increase Income) ಬಯಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ, ಅದಕ್ಕಾಗಿ ನಾವು ನಿಮಗೆ ಕೆಲ ಪರಿಹಾರಗಳನ್ನು (Janmashtami Remedies) ಸೂಚಿಸಲಿದ್ದೇವೆ.

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ಉಪಾಯಗಳನ್ನು ಅನುಸರಿಸುವ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ನುರಿತ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Krishna Janmashtami 2021: ಶ್ರೀಕೃಷ್ಣನು ಸದಾ ತನ್ನ ಮುಡಿಯಲ್ಲಿ ನವಿಲುಗರಿ ಧರಿಸುವುದರ ಹಿಂದಿನ ರಹಸ್ಯವೇನು ಗೊತ್ತೇ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಆಗಸ್ಟ್ 30ರಂದು ಜನ್ಮಾಷ್ಟಮಿಯ ಉತ್ಸವ - ಶ್ರೀ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿಯನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತಿದೆ. ಜ್ಯೋತಿಷಿಗಳು ಮತ್ತು ತಜ್ಞರು ಹೇಳುವ ಪ್ರಕಾರ, ಈ ದಿನ ಶ್ರೀಕೃಷ್ಣನ ಪೂಜೆಯನ್ನು ವಿಶೇಷ ರೀತಿಯಲ್ಲಿ ಅಥವಾ ವಿಶೇಷ ವಸ್ತುಗಳಿಂದ ಮಾಡಿದರೆ, ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು ಎನ್ನುತ್ತಾರೆ.  ಸಮಸ್ಯೆ ಹಣಕಾಸಿಗೆ ಸಂಬಂಧಿಸಿದ್ದೇ ಆಗಿರಲಿ ಅಥವಾವೈಯಕ್ತಿಕ  ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿರಲಿ. ಈ ಕ್ರಮಗಳನ್ನು ಮಾಡುವುದರಿಂದ ಪ್ರತಿಯೊಂದು ಸಮಸ್ಯೆಯೂ ಪರಿಹಾರವಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

2 /5

2. ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಉಪಾಯ - ಜನ್ಮಾಷ್ಟಮಿಯ ದಿನ, ನಿಮ್ಮ ಮನೆಗೆ ಹಸು ಮತ್ತು ಕರು ಕಾಣಿಸುವ ಒಂದು ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬನ್ನಿ. ರಾತ್ರಿ ಶ್ರೀಕೃಷ್ಣನ ಜೊತೆಯಲ್ಲಿ ಆ ಮೂರ್ತಿಗೂ ಪೂಜೆ ಸಲ್ಲಿಸಿ. ಇದನ್ನು ಮಾಡುವುದರಿಂದ ಹಣಕಾಸಿನ ಬಿಕ್ಕಟ್ಟು ಶಮನವಾಗುತ್ತದೆ ಮತ್ತು ಕ್ರಮೇಣ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಆರಂಭವಾಗುತ್ತದೆ. ಇದು ಮಾತ್ರವಲ್ಲ, ಮಕ್ಕಳನ್ನು ಪಡೆಯುವಲ್ಲಿ ಸಮಸ್ಯೆ ಇರುವ ಜನರು, ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅವರು ಪ್ರಯೋಜನಗಳನ್ನು ಪಡೆಯಬಹುದು. ಮಗುವನ್ನು ಪಡೆಯುವಲ್ಲಿ ಸಮಸ್ಯೆ ಇದ್ದರೂ ಸಹ ಈ ಪರಿಹಾರವು ಪರಿಣಾಮಕಾರಿಯಾಗಿದೆ.

3 /5

3. ಸಾಲದಿಂದ ಮುಕ್ತಿಪಡೆಯಲು ಈ ಉಪಾಯ ಮಾಡಿ - ಜನ್ಮಾಷ್ಟಮಿಯ ದಿನ ಬಹಳ ವಿಶೇಷವಾಗಿದೆ. ಈ ದಿನ ನೀವು ತುಳಸಿಗೆ ಪೂಜೆ ಸಲ್ಲಿಸಬೇಕು. ಪೂಜೆ ಸಲ್ಲಿಸುವಾಗ  ಓಂ ನಮೋ ಭಗವತೇ ವಾಸುದೇವಾಯ ನಮಃ ಮಂತ್ರವನ್ನು ಜಪಿಸಿದರೆ, ಶ್ರೀಕೃಷ್ಣನು ಸಂತುಷ್ಟನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾನೆ. ಪೂಜೆಯ ನಂತರ, ತುಳಸಿಯ ಪ್ರದಕ್ಷಿಣೆ ಮಾಡಿ. ಹೀಗೆ ಮಾಡುವುದರಿಂದ ಸಾಲದ ಹೊರೆ ತಲೆಯ ಮೇಲಿಂದ ಕಡಿಮೆಯಾಗುತ್ತದೆ.

4 /5

4. ಆದಾಯ ಹೆಚ್ಚಿಸಲು ಈ ಉಪಾಯ ಮಾಡಿ - ಆದಾಯವನ್ನು ಹೆಚ್ಚಿಸಲು ಜನ್ಮಾಷ್ಟಮಿಯ ದಿನ ಒಂದು ಸಣ್ಣ ನಿಯಮ ಅನುಸರಿಸಲು ಆರಂಭಿಸಿ. ಜನ್ಮಾಷ್ಟಮಿಯ ದಿನ 7 ಕನ್ಯೆಯರನ್ನು ಮನೆಗೆ ಕರೆದು ಅವರಿಗೆ ಪಾಯಸ ಅಥವಾ ಖೀರ್ ತಿನ್ನಲು ಕೊಡಿ. ಜನ್ಮಾಷ್ಟಮಿಯ ಬಳಿಕ ಸತತ 5 ಶುಕ್ರವಾರ ಈ ಕೆಲಸ ಮಾಡಿ. ಒಂದು ವೇಳೆ ಯಾವುದೇ ವಿಘ್ನಗಳಿಲ್ಲದೆ ನೀವು ಈ ನಿಯಮವನ್ನು ಪೂರ್ಣಗೊಳಿಸಿದರೆ, ಖಂಡಿತ ನಿಮ್ಮ ಆದಾಯ ಹೆಚ್ಚಾಗಲಿದೆ.

5 /5

5. ಮನೆಯಲ್ಲಿ ಸುಖ ಸಮೃದ್ಧಿಗಾಗಿ ಈ ಉಪಾಯ ಅನುಸರಿಸಿ - ಜನ್ಮಾಷ್ಟಮಿಯ ದಿನ ರಾತ್ರಿ 12 ಗಂಟೆಗೆ ಹಾಲಿನಲ್ಲಿ ಕೇಸರಿಯನ್ನು  ಬೆರೆಸಿ ಶ್ರೀಕೃಷ್ಣನಿಗೆ ಅರ್ಪಿಸುವುದರಿಂದ ಮನೆ ಮತ್ತು ವ್ಯಾಪಾರದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದಷ್ಟೇ ಅಲ್ಲ, ಜನ್ಮಾಷ್ಟಮಿಯ ದಿನದಂದು ಶಂಖವನ್ನು ಹಾಲಿನಿಂದ ತುಂಬಿಸಿ ಶ್ರೀಕೃಷ್ಣನ ಮೂರ್ತಿಗೆ ಅರ್ಪಿಸುವುದನ್ನು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ, ನೀವು ರಾತ್ರಿ ಶ್ರೀಕೃಷ್ಣನನ್ನು ಪೂಜಿಸುವ ಸಮಯದಲ್ಲಿ ನೆಲದ ಕೊತ್ತಂಬರಿ ಸೊಪ್ಪನ್ನು ಇಟ್ಟುಕೊಂಡರೆ, ನೀವು ಪೂಜೆಯ ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ಪೂಜೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳುವುದರಿಂದ ಮನೆಯ ಎಲ್ಲಾ ಸಮಸ್ಯೆಗಳೂ ದೂರವಾಗುತ್ತದೆ. ಮತ್ತೊಂದೆಡೆ, ನೀವು ನಿಮ್ಮ ಮನಸ್ಸಿನಲ್ಲಿ 11 ಬಾರಿ ಶ್ರೀ ಕೃಷ್ಣ ಗೋವಿಂದ್ ಹರೇ ಮುರಾರಿ, ಹೇ ನಾಥ್ ನಾರಾಯಣ್ ವಾಸುದೇವ್ ದೇವಾ ಮಂತ್ರವನ್ನುಜಪಿಸಿದರೆ, ವಿಶೇಷ ಫಲಿತಾಂಶಗಳನ್ನು ಪಡೆಯುವಿರಿ.