Prabhas : ಮದುವೆಯಾಗದೇ ಇದ್ದರೆ ಪ್ರಭಾಸ್‌ ಸಾವಿರಾರು ಕೋಟಿ ಕಳೆದುಕೊಳ್ಳಬೇಕಾಗುತ್ತದೆ..! ಹೇಗೆ ಗೊತ್ತೆ

Prabhas networth : ಪ್ರಭಾಸ್ ಮದುವೆಯಾಗುತ್ತಾರೆ ಎಂಬ ನಿರೀಕ್ಷೆಗಳು ದಿನದಿಂದ ದಿನಕ್ಕೆ ಕಳೆದು ಹೋಗುತ್ತಿವೆ. ಈ ಕ್ರಮದಲ್ಲಿ ಪ್ರಭಾಸ್ ಮದುವೆಯಾಗದಿದ್ದರೆ ಅವರು ಸಂಪಾದಿಸಿರುವ ನೂರಾರು ಕೋಟಿ ಆಸ್ತಿ ಯಾರ ಪಾಲಾಗುತ್ತೆ ಅಂತ ನೋಡೋಣ... 
 

Prabhas Prabhas marriage : ಪ್ರಭಾಸ್ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ಅಣ್ಣ ಕೃಷ್ಣಂರಾಜು ಟಾಲಿವುಡ್ ಸೂಪರ್‌ ಸ್ಟಾರ್‌ ನಟ. ಪ್ರಭಾಸ್ ತಂದೆ ಸೂರ್ಯನಾರಾಯಣ ರಾಜು ನಿರ್ಮಾಪಕರು. ಅವರು ಗೋಪಿ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕೃಷ್ಣಂರಾಜ್ ಅವರ ಉತ್ತರಾಧಿಕಾರಿಯಾಗಿ ಪ್ರಭಾಸ್ ಬೆಳ್ಳಿತೆರೆಗೆ ಪರಿಚಯವಾಗಿದ್ದರು. 
 

1 /5

ʼಈಶ್ವರ್ʼ ಪ್ರಭಾಸ್ ಅವರ ಮೊದಲ ಚಿತ್ರ 2002 ರಲ್ಲಿ ಬಿಡುಗಡೆಯಾಯಿತು. ವರ್ಷಂ, ಛತ್ರಪತಿ, ಯೋಗಿ, ಬಿಲ್ಲಾ ಚಿತ್ರಗಳು ಪ್ರಭಾಸ್‌ಗೆ ಮಾಸ್ ಹೀರೋ ಇಮೇಜ್ ತಂದುಕೊಟ್ಟಿದ್ದವು. ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್ ಮತ್ತು ಮಿರ್ಚಿ ಸಿನಿಮಾಗಳು ಡಾರ್ಲಿಂಗ್‌ಗೆ ಹೆಚ್ಚಿನ ಮಹಿಳಾ ಫ್ಯಾನ್ಸ್‌ ನೀಡಿದವು, ಕುಟುಂಬ ಪ್ರೇಕ್ಷಕರಿಗೂ ರೆಬಲ್‌ ಹತ್ತಿರವಾದರು.   

2 /5

ಬಾಹುಬಲಿ ಚಿತ್ರಗಳೊಂದಿಗೆ ಅವರ ಕ್ರೇಜ್ ವಿಶ್ವ ಮಟ್ಟ ತಲುಪಿತು. ಬಾಹುಬಲಿ 2 ಅತಿ ಹೆಚ್ಚು ಗಳಿಕೆ ಮಾಡಿದ ಬಾರತೀಯ ಚಿತ್ರಗಳಲ್ಲಿ ಒಂದು. ಈ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆದರು. ವೃತ್ತಿ ಬದುಕಿನಲ್ಲಿ ಪ್ರಭಾಸ್ ಎಲ್ಲರಿಗಿಂತ ಮೇಲುಗೈ ಸಾಧಿಸಿದರು. ಸಧ್ಯ ಚಿತ್ರವೊಂದಕ್ಕೆ ಅವರು 100 ರಿಂದ ರೂ. 150 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.  

3 /5

ಆದರೆ ವೈಯಕ್ತಿಕವಾಗಿ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 44 ವರ್ಷದ ಪ್ರಭಾಸ್ ಮದುವೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ. ಮದುವೆ ವಿಷಯ ಪ್ರಸ್ತಾಪವಾದರೆ ಪ್ರಭಾಸ್ ಸಿಲ್ಲಿ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಪ್ರಭಾಸ್ ಮದುವೆಯ ಸುದ್ದಿಗಳು ಬರುತ್ತಲೇ ಇವೆ.    

4 /5

ಇನ್ನು ಪ್ರಭಾಸ್ ಬಳಿ ಕೋಟಿಗಟ್ಟಲೆ ಐಷಾರಾಮಿ ಕಾರುಗಳು, ಫಾರ್ಮ್ ಹೌಸ್, ವಿದೇಶಗಳಲ್ಲಿ ಮನೆಗಳಿವೆ. ಒಂದು ಅಂದಾಜಿನ ಪ್ರಕಾರ ಪ್ರಭಾಸ್ ಆಸ್ತಿ ಮೌಲ್ಯ ಸಾವಿರ ಕೋಟಿಗೂ ಹೆಚ್ಚು. ಪ್ರಭಾಸ್ ಮದುವೆಯಾಗಿ ವಾರಸುದಾರರನ್ನು ನೀಡದಿದ್ದರೆ... ಆಸ್ತಿ ಅವರ ಕುಟುಂಬ ಸದಸ್ಯರಿಗೆ ಹೋಗುತ್ತದೆ. ಪ್ರಭಾಸ್ ಅವರ ಅಣ್ಣ ಪ್ರಬೋಧ್ ವಿವಾಹವಾಗಿದ್ದು, ಅವರಿಗೆ ಮಕ್ಕಳಿದ್ದಾರೆ ಎಂದು ವರದಿಯಾಗಿದೆ. ಪ್ರಭಾಸ್ ಆಸ್ತಿ ಅವರದ್ದೇ ಎನ್ನಲಾಗಿದೆ.   

5 /5

ಅಲ್ಲದೇ ಸ್ವಲ್ಪ ಮಟ್ಟಿಗೆ ಕೃಷ್ಣನ ಹೆಣ್ಣು ಮಕ್ಕಳಿಗೆ ಪ್ರಭಾಸ್ ಕೊಡುವ ಸಾಧ್ಯತೆ ಇದೆ. ಪ್ರಭಾಸ್‌ಗೆ ದೊಡ್ಡಪ್ಪ ಕೃಷ್ಣಂ ರಾಜು ಎಂದರೆ ತುಂಬಾ ಇಷ್ಟ. ಅವರ ಮರಣದ ನಂತರ, ಪ್ರಭಾಸ್ ಮೂರು ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡರು. ಹಾಗಾಗಿ ಕೃಷ್ಣಂರಾಜ್ ಪುತ್ರಿಯರು ಹಾಗೂ ಪ್ರಭೋದ್ ಅವರ ಮಕ್ಕಳಿಗೆ ಪ್ರಭಾಸ್ ಆಸ್ತಿ ಸಿಗುವ ಸಾಧ್ಯತೆ ಇದೆ.