Kamal Hassan: ‘ಸಕಲಕಲಾವಲ್ಲಭ’ ಕಮಲ್ ಹಾಸನ್ ಮಾಜಿ ಗರ್ಲ್‌ಫ್ರೆಂಡ್ಸ್‌ ಪಟ್ಟಿ ಇಲ್ಲಿದೆ...!

Kamal Haasan Controversial Relationships: ಇಂದು ನಟ ಕಮಲ್‌ ಹಾಸನ್‌ ಅವರ ಹುಟ್ಟು ಹಬ್ಬ. ಸದ್ಯ 69 ನೇ ವಸಂತಕ್ಕೆ ಕಾಲಿಡುತ್ತಿರುವ ಕಮಲ್ ಅವರ ಮಾಜಿ ಗೆಳತಿಯರು ಹಾಗೂ ಡೇಟ್ ಮಾಡಿದವರ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.. 
 

1 /6

ಸ್ಟಾರ್ ಹೀರೋ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಮಲ್ ಹಾಸನ್ ಆಗಾಗ ತಮ್ಮ ಓಪನ್ ಸ್ಟೇಟ್​ಮೆಂಟ್ ಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಕಮಲ್‌ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಬ ಶುರುವಾಗಿದ್ದು,  ಅವರು ತಮ್ಮ ಯೌವನದಲ್ಲಿ ಅನೇಕ ಪ್ರಣಯ ಮತ್ತು ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು ಎನ್ನಲಾಗುತ್ತಿದೆ.  

2 /6

ಅದರಲ್ಲಿ ನಟಿ ಶ್ರೀದಿವ್ಯಾ ಹಲವಾರು ಚಿತ್ರಗಳಲ್ಲಿ ಕಮಲ್ ಜೊತೆಯಾಗಿ ನಟಿಸಿದ್ದಾರೆ. ಕೆಲ ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಅವರು ಎಲ್ಲಿಯೂ ಅದರ ಬಗ್ಗೆ ಮಾತನಾಡಲಿಲ್ಲ.   

3 /6

ಕಮಲ್ 1988 ರಲ್ಲಿ ಭರತನಾಟ್ಯ ಕಲಾವಿದೆ ವಾಣಿ ಗಣಪತಿ ಅವರನ್ನು ವಿವಾಹವಾದರು. ಪ್ರೀತಿಯಿಂದ ಆರಂಭವಾದ ಇವರ ದಾಂಪತ್ಯ ಜೀವನ 10 ವರ್ಷಗಳ ನಂತರ ವಿಚ್ಛೇದನದಲ್ಲಿ ಅಂತ್ಯವಾಯಿತು.   

4 /6

ಕಮಲ್ 1988 ರಲ್ಲಿ ಹಿಂದಿ ನಟಿ ಸಾರಿಕಾ ಅವರನ್ನು ಮದುವೆಯಾದರು. ಅವರಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ 16 ವರ್ಷಗಳ ದಾಂಪತ್ಯದ ನಂತರ 2004 ರಲ್ಲಿ ವಿಚ್ಛೇದನ ಪಡೆದರು.   

5 /6

ಸಿಮ್ರಾನ್ ಮತ್ತು ಕಮಲ್ ಹಾಸನ್ ಕೆಲವು ವರ್ಷಗಳಿಂದ ಪ್ರಣಯ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಕಮಲ್ ಗಿಂತ ಸಿಮ್ರಾನ್ 22 ವರ್ಷ ಚಿಕ್ಕವಳಾಗಿದ್ದರಿಂದ ಈ ಸಂಬಂಧ ವಿವಾದಕ್ಕೆ ಕಾರಣವಾಗಿತ್ತು. ಪಂಚ ತಂತ್ರಂ ಬಿಡುಗಡೆಯಾದ ನಂತರ ಈ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗಿದೆ.   

6 /6

ಕಮಲ್ ಹಾಸನ್-ಗೌತಮಿ 2004 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು... ಅವರ ಈ ಸಂಬಂಧವು 2016 ರಲ್ಲಿ ಕೊನೆಗೊಂಡಿತು.