Karnataka Budget 2023: ರಾಜ್ಯದ ಸರ್ಕಾರಿ ಆಸ್ಪತ್ರೆಗಳನ್ನು ಹಾಗೂ ಆರೋಗ್ಯ ಕ್ಷೇತ್ರವನ್ನು ಉತ್ತಮಗೊಳಿಸುವುದಕ್ಕೆ ಒತ್ತು ನೀಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಶುಕ್ರವಾರ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದರು. 14ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಅವರು ಹೊಸ ದಾಖಲೆಯನ್ನೂ ನಿರ್ಮಿಸಿದರು. ‘ನುಡಿದಂತೆ ನಡೆದಿದ್ದೇವೆಂದು ಹೇಳಿದ ಸಿದ್ದರಾಮಯ್ಯ ‘ಸರ್ವರಿಗೂ ಸಮಬಾಳು’ ಎನ್ನುವಂತೆ ಬಜೆಟ್ ಮಂಡಿಸಿದ್ದೇನೆ ಎಂದು ತಿಳಿಸಿದರು. ಸಿದ್ದರಾಮಯ್ಯರ ಬಜೆಟ್‍ನ ಟಾಪ್ -10 ಹೈಲೈಟ್ಸ್ ನಿಮಗಾಗಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಾವು ಪ್ರಣಾಳಿಕೆಯಲ್ಲಿ ಹಾಗೂ ಚುನಾವಣೆ ಸಂದರ್ಭದಲ್ಲಿ ಮೀನುಗಾರರಿಗೆ ಘೋಷಿಸಿದ ಯೋಜನೆಗಳನ್ನು ಅಕ್ಷರಶಃ ಜಾರಿಗೊಳಿಸುತ್ತಿದ್ದೇವೆ. ಮೀನುಗಾರ ಸಮುದಾಯಕ್ಕೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ.#PragatiyaBudget pic.twitter.com/ZX6Gm6qCqG — Karnataka Congress (@INCKarnataka) July 7, 2023
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರವೇ ಸೊರಗಿ ಸಂಕಟಕ್ಕೆ ಜಾರಿತ್ತು. ಶಾಲಾ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ನೀಡುವಲ್ಲಿ ಬಿಜೆಪಿ ಸರ್ಕಾರ ವಂಚನೆ ಮಾಡಿತ್ತು, ನಮ್ಮ ಸರ್ಕಾರ 850 ಕೋಟಿ ಅನುದಾನ ನೀಡಿ ಅಪೌಷ್ಟಿಕತೆಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ಸೊರಗಿದ ಶಾಲಾ, ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ 280 ಕೋಟಿ ನೀಡಿದೆ.… pic.twitter.com/Cbx7eSqWVc — Karnataka Congress (@INCKarnataka) July 7, 2023
ರೈತರ ನೆರವಿಗೆ ನಿಂತಿದೆ ನಮ್ಮ ಸರ್ಕಾರ. ಬಡ್ಡಿರಹಿತ ಸಾಲದ ಮಿತಿಯನ್ನು ಏರಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ನಮ್ಮ ಸರ್ಕಾರ. ಅಲ್ಪಾವದಿ ಹಾಗೂ ದೀರ್ಘಾವದಿ ಸಾಲದ ಮಿತಿಯನ್ನು ಏರಿಕೆಯಾಗಿದೆ. ರೈತ ವಿರೋಧಿಯಾದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಕ್ರಮ.#PragatiyaBudget pic.twitter.com/Do8vPdZ8es — Karnataka Congress (@INCKarnataka) July 7, 2023
ಶಕ್ತಿ ಯೋಜನೆಗೆ ವಾರ್ಷಿಕ ₹4000 ಕೋಟಿ ಮೀಸಲಿಡುವ ಮೂಲಕ ರಾಜ್ಯದ ಮಹಿಳೆಯರಿಗೆ ಹಾಗೂ ರಾಜ್ಯದ ಸಾರಿಗೆ ನಿಗಮಗಳಿಗೆ ಏಕ ಕಾಲಕ್ಕೆ ಶಕ್ತಿ ತುಂಬುತ್ತಿದ್ದೇವೆ.#PragatiyaBudget pic.twitter.com/Op664AouAQ — Karnataka Congress (@INCKarnataka) July 7, 2023
ಗೃಹಜ್ಯೋತಿ ಯೋಜನೆಗೆ 13,910 ಕೋಟಿಯನ್ನು ಮೀಸಲಿಡುವ ಮೂಲಕ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಿದ್ದೇವೆ. ಬಿಜೆಪಿಯ ಟೀಕಾಕಾರರಿಗೆ ಈಗ ಉತ್ತರ ಸಿಕ್ಕಿರಬಹುದೇ?#PragatiyaBudget pic.twitter.com/wxP9uWkWQI — Karnataka Congress (@INCKarnataka) July 7, 2023
ಅನ್ನಭಾಗ್ಯ ಯೋಜನೆಯ ಜಾರಿಗೆ ನಾವು ಬದ್ಧವಾಗಿದ್ದೇವೆ. ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿಯನ್ನು 7ಕೆಜಿಯಿಂದ 5ಕೆಜಿಗೆ ಕಡಿತಗೊಳಿಸಿ ಮಹಾದ್ರೋಹವೆಸಗಿತ್ತು. ನಮ್ಮ ಸರ್ಕಾರ ಆಹಾರಧಾನ್ಯವನ್ನು 10ಕೆಜಿಗೆ ಏರಿಸಲು ಬದ್ಧವಾಗಿದೆ, ಆಹಾರಧಾನ್ಯ ಲಭ್ಯವಾಗುವವರೆಗೆ 170 ರೂಪಾಯಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ.#PragatiyaBudget pic.twitter.com/tT9Gw1ZFTp — Karnataka Congress (@INCKarnataka) July 7, 2023
ಧ್ವನಿ ಇಲ್ಲದ ಡೆಲಿವರಿ ಕಾರ್ಮಿಕರನ್ನು ಗುರುತಿಸಿ ಅವರ ಜೀವ ಹಾಗೂ ಜೀವನದ ಭದ್ರತೆಗೆ ವಿಮಾನ ಸೌಲಭ್ಯ ಒದಗಿಸಲಾಗಿದೆ. 2 ಲಕ್ಷ ರೂಪಾಯಿಗಳ ಜೀವ ವಿಮೆ ಹಾಗೂ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡುವ ಮೂಲಕ ನೆರವು ನೀಡಲಿದೆ ನಮ್ಮ ಸರ್ಕಾರ.#PragatiyaBudget pic.twitter.com/BUK5ZrGOTX — Karnataka Congress (@INCKarnataka) July 7, 2023
ಧ್ವನಿ ಇಲ್ಲದ ಡೆಲಿವರಿ ಕಾರ್ಮಿಕರನ್ನು ಗುರುತಿಸಿ ಅವರ ಜೀವ ಹಾಗೂ ಜೀವನದ ಭದ್ರತೆಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. 2 ಲಕ್ಷ ರೂಪಾಯಿಗಳ ಜೀವ ವಿಮೆ ಹಾಗೂ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡುವ ಮೂಲಕ ನೆರವು ನೀಡಲಿದೆ ನಮ್ಮ ಸರ್ಕಾರ.#PragatiyaBudget pic.twitter.com/3AMe9aYjDN — Karnataka Congress (@INCKarnataka) July 7, 2023
ನಮ್ಮ ಸರ್ಕಾರ ಈಗಾಗಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಉದ್ಯೋಗವಕಾಶಗಳನ್ನು ವೃದ್ಧಿಸಲು ಮುಂದಾಗಿದೆ. ನಿರುದ್ಯೋಗಿ ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಯುವನಿಧಿ ಯೋಜನೆಗೆ ಅನುದಾನ ನೀಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ.#PragatiyaBudget pic.twitter.com/JT60Bkbgbu — Karnataka Congress (@INCKarnataka) July 7, 2023
ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಯ ಉಪಕಾರಣಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.#PragatiyaBudget pic.twitter.com/WDLnASjJIt — Karnataka Congress (@INCKarnataka) July 7, 2023