ಕಲರಿಂಗ್‌ ಬೇಕಿಲ್ಲ! ಅಡುಗೆಮನೆಯ ಈ ಮಸಾಲೆ ಸಾಕು, ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ

Fenugreek For Premature White Hair: ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ. ನೀವು ನೈಸರ್ಗಿಕವಾಗಿ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಕೂದಲಿನ ಕಪ್ಪನ್ನು ಮರಳಿ ತರಲು ಬಳಸುವ ಆ ವಸ್ತು ಯಾವುದು ಎಂದು ತಿಳಿಯೋಣ.

White Hair Home Remedies: ಪ್ರಸ್ತುತ ಯುಗದಲ್ಲಿ, ಬಿಳಿ ಕೂದಲಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಎಲ್ಲಾ ವಯಸ್ಸಿನ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದರಿಂದ, ಅನೇಕ ಜನರು ಒತ್ತಡ, ಮುಜುಗರ ಮತ್ತು ಕಡಿಮೆ ಆತ್ಮವಿಶ್ವಾಸಕ್ಕೆ ಬಲಿಯಾಗುತ್ತಾರೆ. ಇದಕ್ಕೆ ರಾಸಾಯನಿಕಯುಕ್ತ ಹೇರ್ ಡೈ ಬಳಸುತ್ತಾರೆ, ಆದರೆ ಇದು ಕೂದಲಿಗೆ ಹಾನಿ ಉಂಟುಮಾಡಬಹುದು. ಆದರೆ ನಿಮ್ಮ ಅಡುಗೆಮನೆಯ ಈ ಮಸಾಲೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಗಾಗಿಸುತ್ತದೆ. 
 

1 /5

ಮೆಂತ್ಯ ನೀರು: ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ. ನಂತರ ತಲೆಗೆ ಹಚ್ಚಿ, ಕೆಲ ನಿಮಿಷಗಳ ಬಳಳಿಕ ಸ್ನಾನ ಮಾಡಿ. ಹೀಗೆ ಕೆಲವು ದಿನ ಮಾಡಿದರೆ ಬಿಳಿ ಕೂದಲು ಮಾಯವಾಗುತ್ತದೆ.  

2 /5

ಮೆಂತ್ಯದ ಔಷಧೀಯ ಗುಣ: ಮೆಂತ್ಯದ ಔಷಧೀಯ ಗುಣಗಳನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆ. ನಿಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ಬಯಸಿದರೆ, 2 ಚಮಚ ಮೆಂತ್ಯ ಬೀಜಗಳನ್ನು ನೀರಿನಲ್ಲಿ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಈಗ ಈ ನೀರಿನಿಂದ ಕೂದಲನ್ನು ತೊಳೆಯಿರಿ.  

3 /5

ಮೆಂತ್ಯದ ಜೊತೆ ಬೆಲ್ಲ : ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಮೆಂತ್ಯವನ್ನು ಹೆಚ್ಚು ಬಳಸಲಾಗುತ್ತದೆ, ಈ ಮಸಾಲೆಯೊಂದಿಗೆ ಬೆಲ್ಲವನ್ನು ಸೇವಿಸಿದರೆ, ನೀವು ಶೀಘ್ರದಲ್ಲೇ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತರಾಗುತ್ತೀರಿ. ಇದಲ್ಲದೆ, ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಮೆಂತ್ಯವು ತುಂಬಾ ಪರಿಣಾಮಕಾರಿಯಾಗಿದೆ.  

4 /5

ಮೆಂತ್ಯ ಹೇರ್‌ ಪ್ಯಾಕ್‌ : ಮೆಂತ್ಯವನ್ನು ರುಬ್ಬಿ, ಪೇಸ್ಟ್‌ ತಯಾರಿಸಿ. ಈಗ ಅದಕ್ಕೆ ನಿಂಬೆ ರಸವನ್ನು ಬೆರೆಸಿ. ಈಗ ಈ ಪೇಸ್ಟ್ ಅನ್ನು ಕೂದಲಿನ ಬೇರುಗಳಿಗೆ ಹಚ್ಚಿ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.  

5 /5

ತೆಂಗಿನೆಣ್ಣೆ: ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ. ನೀವು ಮೆಂತ್ಯವನ್ನು ಪುಡಿಮಾಡಿ ತೆಂಗಿನೆಣ್ಣೆಯಲ್ಲಿ ಬೆರೆಸಿ, ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಅಲ್ಲದೇ, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ದೂರವಾಗುತ್ತದೆ.