ದೇಹದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತೆ ಈ ಒಣ ಎಲೆ ನೆನೆಸಿಟ್ಟ ನೀರು! ಮಧುಮೇಹಕ್ಕೂ ಪರಮೌಷಧಿ!

Benefits Of Kasuri Methi: ಮೆಂತ್ಯವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತಾಜಾ ಮೆಂತ್ಯದಿಂದ ಪ್ರಾರಂಭಿಸಿ, ಮೆಂತ್ಯ ಎಲೆಗಳವರೆಗೆ ಆರೋಗ್ಯ ಮತ್ತು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಒಣಗಿದ ಮೆಂತ್ಯದ ಎಲೆ ಅಥವಾ ಇವುಗಳನ್ನು ಕಸೂರಿ ಮೇತಿ ಎಂದು ಸಹ ಕರೆಯಲಾಗುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಪ್ರೊಟೀನ್, ಐರನ್, ಕ್ಯಾಲ್ಸಿಯಂ ಮುಂತಾದ ಗುಣಗಳಿದ್ದು, ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ.

2 /9

ಕಸೂರಿ ಮೇತಿಯನ್ನು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಕಸೂರಿ ಮೇತಿಯನ್ನು ಔಷಧೀಯ ಗುಣಗಳಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ.

3 /9

ತೂಕ ಇಳಿಕೆ: ಬೊಜ್ಜು ಇಂದಿನ ಕಾಲಘಟ್ಟದಲ್ಲಿ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹೀಗಾಗಿ ಕಸೂರಿ ಮೇತಿಯನ್ನು ಜಗಿಯುತ್ತಿದ್ದರೆ, ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

4 /9

ಹಾರ್ಮೋನು: ಕಸೂರಿ ಮೇತಿಯನ್ನು ಋತುಬಂಧ ಮತ್ತು ಹಾರ್ಮೋನುಗಳ ಬದಲಾವಣೆಗಳಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಾರ್ಮೋನುಗಳ ಬದಲಾವಣೆ ಎಂಬುದು ಮಹಿಳೆಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ಕಸೂರಿ ಮೇತಿಯಲ್ಲಿ ಕಂಡುಬರುವ ಅಂಶಗಳು ಹಾರ್ಮೋನ್ ಬದಲಾವಣೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

5 /9

ಸ್ತನ್ಯಪಾನ: ಎದೆಹಾಲು ಹೆಚ್ಚಿಸಲು ಸಹ ಕಸೂರಿ ಮೇತಿ ಸಹಾಯಕ. ಇದರಲ್ಲಿ ಕಂಡುಬರುವ ಒಂದು ರೀತಿಯ ಸಂಯುಕ್ತವು ಹಾಲುಣಿಸುವ ಮಹಿಳೆಯರ ಎದೆಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

6 /9

ಮಧುಮೇಹ: ಮಧುಮೇಹಿಗಳು ಕಸೂರಿ ಮೇಥಿ ಸೇವಿಸಿದರೆ ಪ್ರಯೋಜನವಾಗುತ್ತದೆ. ಟೈಪ್ 2 ಡಯಾಬಿಟಿಸ್‌’ನಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಕಸೂರಿ ಮೆಂತ್ಯವು ಸಹಾಯ ಮಾಡುತ್ತದೆ.

7 /9

ಮಲಬದ್ಧತೆ: ಮಲಬದ್ಧತೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಕಸೂರಿ ಮೇತಿಯನ್ನು ಸೇವಿಸಿ. ಕಸೂರಿ ಮೇತಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಹೃದಯ, ಗ್ಯಾಸ್ಟ್ರಿಕ್ ಮತ್ತು ಕರುಳಿನ ಸಮಸ್ಯೆಗಳೂ ಇದರಿಂದ ಗುಣವಾಗುತ್ತವೆ.

8 /9

ಗ್ಲೂಕೋಸ್ ಮಟ್ಟ: ಕಸೂರಿ ಮೇತಿ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಡುಗೆಗ ಬಳಸುವ ಅಥವಾ ನೆನೆಸಿಟ್ಟು ನೀರಿನ ರೂಪದಲ್ಲಿ ಸಹ ಸೇವಿಸಿದರೆ, ಟೈಪ್ II ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

9 /9

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)