ಕೇತು ರಾಶಿ ಪರಿವರ್ತನೆಯಿಂದ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ

                              

ಕೇತು ರಾಶಿ ಪರಿವರ್ತನೆಯ ಪ್ರಭಾವ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೆರಳು ಗ್ರಹ ಎಂದೇ ಪರಿಗಣಿಸಲಾಗಿರುವ ಕೇತು ಗ್ರಹವು ಎಪ್ರಿಲ್ 12ರಂದು ತನ್ನ ರಾಶಿ ಬದಲಾಯಿಸುವ ಮೂಲಕ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಗ್ರಹವು ಯಾವಾಗಲು ಅಶುಭ ಫಲಿತಾಂಶಗಳನ್ನೇ ನೀಡುತ್ತದೆ ಎಂಬುದು ಸದಾ ಹಿಮ್ಮುಖವಾಗಿ ಚಲಿಸುವ ಕೇತು ಗ್ರಹದ ಬಗ್ಗೆ ಇರುವ ಸಾಮಾನ್ಯ ನಂಬಿಕೆ. ಆದರೆ, ಕೇತು ರಾಶಿಚಕ್ರ ಬದಲಾವಣೆಯು ಕೆಲವು ರಾಶಿಯವರಿಗೆ ಶುಭ ಪ್ರಲಿತಾಂಶಗಳನ್ನೂ ನೀಡಲಿದೆ. ಹೌದು, ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದಿರುವ ಕೇತು ಮೂರು ರಾಶಿಯವರ ಅದೃಷ್ಟವನ್ನು ಬೆಳಗಿಸಲಿದ್ದಾನೆ. ಇದೇ ವೇಳೆ ನಾಲ್ಕು ರಾಶಿಯವರ ಮೇಲೆ ಕೇತುವಿನ ಅಶುಭ ಪರಿಣಾಮ ಗೋಚರಿಸಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜ್ಯೋತಿಷ್ಯದ ಪ್ರಕಾರ, ರಾಹು-ಕೇತು ಗ್ರಹಗಳು ಹಿಮ್ಮುಖವಾಗಿ ಚಲಿಸುವ ಮತ್ತು ನಿಧಾನವಾಗಿ ಚಲಿಸುವ ಗ್ರಹಗಳು. ಈ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಸುಮಾರು 18 ತಿಂಗಳುಗಳು ಅಂದರೆ ಬರೋಬ್ಬರಿ ಒಂದೂವರೆ ವರ್ಷ ಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಎಪ್ರಿಲ್ 12ರಂದು ರಾಶಿ ಬದಲಾಯಿಸುವ ಮೂಲಕ ತುಲಾ ರಾಶಿಯನ್ನು ಪ್ರವೇಶಿಸಿರುವ ಕೇತು ಮುಂದಿನ 18 ತಿಂಗಳುಗಳವರೆಗೆ ಅಂದರೆ ಅಕ್ಟೋಬರ್ 2023 ರವರೆಗೆ ಇದೇ ರಾಶಿಯಲ್ಲಿ ಉಳಿಯಲಿದ್ದಾನೆ. ಈ ಅವಧಿಯು ಮೂರು ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

2 /5

ಕೇತುವಿನ ರಾಶಿ ಪರಿವರ್ತನೆಯಿಂದಾಗಿ ಶುಭ ಫಲಿತಾಂಶಗಳನ್ನು ಪಡೆಯುವ ಮೊದಲ ರಾಶಿ ಕರ್ಕಾಟಕ ರಾಶಿ. ಈ ಸಮಯದಲ್ಲಿ ಈ ರಾಶಿಯ ಜನರು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಪ್ರಮೋಷನ್ ಪಡೆಯುವ ಸಾಧ್ಯತೆಯ ಜೊತೆಗೆ ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೀವು ಬಯಸಿದ ಉದ್ಯೋಗ ಪ್ರಾಪ್ತಿಯಾಗಲಿದೆ. ಇದಲ್ಲದೆ ಆಸ್ತಿ ಮತ್ತು ವಾಹನ ಖರೀದಿಯ ಯೋಗವೂ ಇದೆ.

3 /5

ಕೇತು ರಾಶಿ ಬದಲಾವಣೆಯು ಮಕರ ರಾಶಿಯವರಿಗೆ ಆರ್ಥಿಕ ಬಲ ನೀಡಲಿದೆ. ನೌಕರರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ವೇಳೆ ವ್ಯಾಪಾರದಲ್ಲಿ ತೊಡಗಿರುವವರಿಗೆ ದೊಡ್ಡ ಆರ್ಡರ್ ಪಡೆಯುವ ಯೋಗವಿದೆ. ಒಟ್ಟಾರೆಯಾಗಿ ಈ ಸಮಯವು ನಿಮ್ಮನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಸಾಧ್ಯತೆ ಅಧಿಕವಾಗಿದೆ.

4 /5

ಕೇತು ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರ ಅದೃಷ್ಟ ಬೆಳಗಲಿದೆ. ನೀವು ಹಿಡಿದ ಕೆಲಸಗಳನ್ನು ಹೂವೆತ್ತಿದಷ್ಟು ಸುಲಭವಾಗಿ ಮುಗಿಸಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಯಶಸ್ಸು ನಿಮ್ಮದಾಗಲಿದೆ. ವಿದೇಶ ಪ್ರಯಾಣ ಯೋಗವೂ ಇದೆ.

5 /5

ಕೇತು ಸಂಚಾರವು ಕೆಲವು ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡಲಿದೆ. ಹಾಗಾಗಿ ಈ ರಾಶಿ ಚಕ್ರಗಳ ಜನರು ಈ ಸಮಯದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಕೇತು ಸಂಚಾರವು ಮೇಷ, ತುಲಾ, ಧನುಸ್ಸು ಮತ್ತು ಮೀನ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.