ಯಶ್ ಅಭಿಮಾನಿಗಳ ಆ ಕನಸು ನನಸಾಗುವ ಸಮಯ ಬಂದೇ ಬಿಡ್ತು!

ಎಲ್ಲೆಲ್ಲೂ 'ಕೆಜಿಎಫ್ 2' ಹವಾ.. ಬಾಕ್ಸ್ ಆಫೀಸ್‌ ನಡುಗಿಸಲು ಬರ್ತಿದ್ದಾನೆ 'ರಾಕಿ ಭಾಯ್'..  ಅಂತೂ ಯಶ್ ಅಭಿಮಾನಿಗಳ ಆ ಕನಸು ನನಸಾಗುವ ಸಮಯ ಬಂದೇ ಬಿಡ್ತು...

ಹಲವು ಸಮಯದಿಂದ ಸಿನಿಮಾದ ಅಪ್‌ಡೇಟ್ ಏನೂ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆಗಾಗ ಟೀಸರ್..‌ ಪೋಸ್ಟರ್‌ ಗಳನ್ನು ಬಿಡುಗಡೆ ಮಾಡುತ್ತಿದ್ದ ಚಿತ್ರತಂಡ ಮೊನ್ನೆ ಮೊದಲ ಲಿರಿಕಲ್‌ ಸಾಂಗ್‌ ರಿಲೀಸ್‌ ಮಾಡಿ ಫ್ಯಾನ್ಸ್‌ ದಿಲ್‌ ಖಷ್‌ ಮಾಡಿದೆ. ಕೆಲವೇ ಗಂಟೆಗಳಲ್ಲಿ ಈ ಸಾಂಗ್‌ ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿತು. ಇದರಿಂದಾಗಿ ಟ್ರೈಲರ್‌ ಬಗ್ಗೆ ಫ್ಯಾನ್ಸ್‌ ಕುತೂಹಲ ಹೆಚ್ಚಾಗಿದೆ. 

1 /8

ಕೆಜಿಎಫ್‌ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಕೆಲ ದಿನಗಳ ಹಿಂದೆ ಟ್ರೇಲರ್ ರಿಲೀಸ್ ಡೇಟ್ ಅನ್ನು ಕೆಜಿಎಫ್ 2 ಟೀಂ ಅನೌನ್ಸ್ ಮಾಡಿತ್ತು.

2 /8

ಕೆಜಿಎಫ್ 2 ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ. 

3 /8

ಟ್ರೇಲರ್​ ಬಿಡುಗಡೆಗೆ ದಿನಾಂಕ ನಿಗದಿ ಆಗಿದ್ದು, ಮಾರ್ಚ್ 27ಕ್ಕೆ ರಿಲೀಸ್​ ಆಗಲಿದೆ. ಟ್ರೈಲರ್​ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

4 /8

ಕೆಜಿಎಫ್​ ಚಾಪ್ಟರ್ 2 ಟ್ರೇಲರ್ ಮಾರ್ಚ್ 27 ರಂದು ಸಂಜೆ 6:40ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

5 /8

ಪ್ರಧಾನ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ನಟ ಸಂಜಯ್‌ ದತ್​ ಕಾಣಿಸಿಕೊಳ್ಳುತ್ತಿದ್ದಾರೆ.

6 /8

ರವಿ ಬಸ್ರೂರ್ ಸಂಗಿತ ಸಂಯೋಜನೆ 'ಕೆಜಿಎಫ್ 2' ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ತೆಲುಗು ನಟ ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. 

7 /8

ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

8 /8

2018ರ ಡಿಸೆಂಬರ್‌ನಲ್ಲಿ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. 'ಕೆಜಿಎಫ್ 2'​ ಸಿನಿಮಾ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.