Cobra Blood benefits : ಹಾವಿನ ರಕ್ತಕ್ಕೆ ಫುಲ್ ಡಿಮ್ಯಾಂಡ್ ಇದೆ. ಅದಕ್ಕಾಗಿ ಕೆಲವರು ಪ್ರಾಣದ ಹಂಗು ತೊರೆದು, ರಕ್ತಕ್ಕಾಗಿ ಗಂಟೆಗಟ್ಟಲೆ ಕಾಯುತ್ತಾರೆ. ಅದಲ್ಲದೆ.. ದಿನಕ್ಕೆ ಹಾವಿನ ರಕ್ತ ಮಾರಾಟ ಮಾಡಿ ಹತ್ತು ಲಕ್ಷದವರೆಗೆ ಸಂಪಾದಿಸುತ್ತಾರೆ. ಈ ಕುರಿತು ಘಟನೆಯೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿದೆ.. ಏನದು ನೋಡೋಣ ಬನ್ನಿ..
ನಾಗರ ಹಾವಿಗೆ ಹಿಂದೂ ಧರ್ಮದಲ್ಲಿ ಪೂಜ್ಯನೀಯ ಸ್ಥಾನವಿದೆ. ಆದರೆ ಇದನ್ನು ಇಂದು ಅನೇಕ ಜನರು ಚಿತ್ರ ವಿಚಿತ್ರ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹಾವುಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ವಿಶೇಷ ದಿನಗಳು ಇದೆ. ಅವುಗಳಿಗಾಗಿ ವಿಶೇಷ ದೇಗುಲವನ್ನು ಕಟ್ಟಿಸಿ ಪೂಜಿಸಲಾಗುತ್ತದೆ.
ಇನ್ನು ನಮ್ಮಲ್ಲಿ ಹೆಚ್ಚಿನ ಯುವಕರು ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ, ಎಷ್ಟೇ ಹಣ ಬೇಕಾದರೂ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಫೇಸ್ ಪ್ಯಾಕ್ ಹಾಕಿಕೊಂಡು ತಮಗೆ ಇಷ್ಟ ಬಂದಂತೆ ಹಣ ಖರ್ಚು ಮಾಡುತ್ತಾರೆ.
ಕೆಲವರು ಸೌಂದರ್ಯಕ್ಕಾಗಿ ಹಣ್ಣಿನ ರಸವನ್ನು ಕುಡಿಯುತ್ತಾರೆ. ಇನ್ನು ಕೆಲವರು ಒಳ್ಳೆಯ ಆಹಾರ ಸೇವಿಸುತ್ತಾರೆ. ಇತರರು ಕ್ಯಾರೆಟ್ ಮತ್ತು ಅನೇಕ ಜ್ಯೂಸ್ ಕುಡಿಯುತ್ತಾರೆ. ಆದರೆ ನಿಮಗೆ ಗೊತ್ತೆ..! ಇಂಡೋನೇಷ್ಯಾದಲ್ಲಿ ಹುಡುಗಿಯರು ಮತ್ತು ಹುಡುಗರು ಹಾವಿನ ರಕ್ತವನ್ನು ಕುಡಿಯುತ್ತಾರೆ.
ಅಲ್ಲಿನ ಜನ ಟೀ, ಕಾಫಿ ಶಾಪ್ ಗಳಲ್ಲಿ ಹಾವಿನ ರಕ್ತವನ್ನು ಮಾರುತ್ತಾರೆ.. ಹಾವಿನ ರಕ್ತ ಕುಡಿದರೆ ಮಹಿಳೆಯರು ತುಂಬಾ ಸುಂದರವಾಗಿ ಕಾಣುತ್ತಾರೆ ಎನ್ನಲಾಗಿದೆ. ಹಾಗಾಗಿಯೇ ಹಾವಿನ ರಕ್ತಕ್ಕೆ ಸಾಕಷ್ಟು ಬೇಡಿಕೆ ಇದೆ.
ಹಾವಿನ ರಕ್ತವನ್ನು ಕುಡಿಯುವುದರ ಜೊತೆಗೆ, ಇಂಡೋನೇಷಿಯಾದ ಜನರು ಅದನ್ನು ಆಹಾರವಾಗಿಯೂ ತಿನ್ನುತ್ತಾರೆ. ಹಾವಿನ ರಕ್ತವನ್ನು ಕುದಿಸಿ ತಿನ್ನಲಾಗುತ್ತದೆ. ಹೀಗೆ ಮಾಡಿದರೆ ನಿಮ್ಮ ಮುಖ ತುಂಬಾ ಸುಂದರವಾಗಿ ಕಾಂತಿಯುತವಾಗಿ ಕಾಣುತ್ತದೆ ಎಂಬುವುದು ಅವರ ನಂಬಿಕೆ..