ರಶ್ಮಿಕಾ ಮಂದಣ್ಣ

  • May 14, 2024, 14:56 PM IST
1 /8

ಸಾಮಾನ್ಯ ನಾಯಕಿಯಿಂದ ಪ್ಯಾನ್ ಇಂಡಿಯಾ ನಾಯಕಿಯವರೆಗಿನ ಅವರ ಪಯಣ ಸುಲಭವಾಗಿಲ್ಲ. 2022ರಿಂದ ರಶ್ಮಿಕಾ ಕನ್ನಡ ಇಂಡಸ್ಟ್ರಿಯಲ್ಲಿ ನಿಷೇಧಗೊಳಗಾಗುತ್ತಾರೆ ಎಂಬ ವರದಿಗಳು ಹಬ್ಬಿದ್ದವು.  

2 /8

ರಶ್ಮಿಕಾ ಮಂದಣ್ಣ ಹುಟ್ಟಿದ್ದು ಕರ್ನಾಟಕದ ಕೊಡುಗು ಜಿಲ್ಲೆಯಲ್ಲಿ. ಆಕೆಯ ತಂದೆ ಉದ್ಯಮಿ. ರಶ್ಮಿಕಾ ಮೊದಲು ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟು ಅದಾದ ಬಳಿಕ,  ಹೀರೋ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ್ದರು. ರಕ್ಷಿತ್ ಈ ಸಿನಿಮಾದ ನಿರ್ಮಾಪಕರೂ ಹೌದು. ಈ ಸಿನಿಮಾವನ್ನು ಕಾಂತಾರ ನಾಯಕ ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು.

3 /8

ಆ ನಂತರ ಮತ್ತೆರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ರಶ್ಮಿಕಾ, ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ ಮತ್ತು ಚಮಕ್ ಚಿತ್ರಗಳಲ್ಲಿ ಮಿಂಚಿದ್ದರು. ಈ ಎರಡು ಚಿತ್ರಗಳೂ ಹಿಟ್ ಆಗಿದ್ದರಿಂದ 2018ರಲ್ಲಿ ಚಲೋ ಚಿತ್ರಕ್ಕೆ ಟಾಲಿವುಡ್‌ನಿಂದ ಕರೆ ಬಂದಿತ್ತು.

4 /8

ಅದೇ ವರ್ಷದಲ್ಲಿ ಗೀತ ಗೋವಿಂದಂ ಚಿತ್ರ ಬಿಡುಗಡೆಯಾಗುವುದರೊಂದಿಗೆ ರಶ್ಮಿಕಾ ಅವರ ವೃತ್ತಿಜೀವನವು ನಿರ್ಣಾಯಕ ತಿರುವು ಪಡೆದುಕೊಂಡಿತು. ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಆ ಸಿನಿಮಾ.  ಆದರೆ ರಶ್ಮಿಕಾ ವೃತ್ತಿ ಜೀವನದಲ್ಲಿ ವಿವಾದಗಳಿಗೇನೂ ಕೊರತೆಯಿಲ್ಲ.

5 /8

2018 ರಲ್ಲಿ, ರಕ್ಷಿತ್ ಶೆಟ್ಟಿಯೊಂದಿಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಅದಾದ ಬಳಿಕ 2022 ರಲ್ಲಿ ಹಿಂದಿ ಚಲನಚಿತ್ರ ಗುಡ್ ಬೈ ಪ್ರಚಾರದ ಸಮಯದಲ್ಲಿ, ಕಿರಿಕ್ ಪಾರ್ಟಿಯ ಬಗ್ಗೆ ಮಾತನಾಡುವ ಮೂಲಕ ವಿವಾದವನ್ನು ಉಂಟುಮಾಡಿದ್ದರು. ಆ ಸಿನಿಮಾ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳದ ಕಾರಣ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಆಕ್ರೋಶಗೊಂಡಿದ್ದರು.

6 /8

ಅದಾದ ನಂತರ ಕಿರಿಕ್ ಪಾರ್ಟಿ ಸಿನಿಮಾ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಕೂಡ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಏಕೆಂದರೆ ಅವರ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ನೋಡಿಲ್ಲ ಎಂದು ರಶ್ಮಿಕಾ ಹೇಳಿರುವುದು ಮತ್ತೊಂದು ಗದ್ದಲಕ್ಕೆ ಕಾರಣವಾಗಿತ್ತು. ಆದರೆ, ಸಿನಿಮಾ ರಿಲೀಸ್ ಆಗಿ 3 ಅಥವಾ 4 ದಿನಗಳಾಗಿದ್ದರಿಂದ ಸಿನಿಮಾ ನೋಡಲು ಸಮಯ ಸಿಗಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

7 /8

ಈ ವಿವಾದಗಳ ಬೆನ್ನಲ್ಲೇ ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಈ ವೇಳೆ ರಶ್ಮಿಕಾ ಮೇಲೆ ಆಕ್ರೋಶಗೊಂಡ ಕನ್ನಡಿಗರು ಆಕೆಯನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದರು.

8 /8

ಅಂದಹಾಗೆ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್’ನಲ್ಲಿ ಮಿಂಚುತ್ತಿದ್ದಾರೆ. ಯಶಸ್ಸಿನ ಮೆಟ್ಟಿಲೇರುತ್ತಿರುವ ನಟಿ ಕೋಟ್ಯಾಧಿಪತಿಯಾಗಿದ್ದು, ಇವರ ಆಸ್ತಿ ಮೌಲ್ಯ ಸುಮಾರು 45 ಕೋಟಿ ಎಂದು ಅಂದಾಜಿಸಲಾಗಿದೆ.