ಇದು ಅರಮನೆ, ಇಂದ್ರಭವನ ಅಲ್ಲ.. ಸ್ಟಾರ್‌ ನಟನೊಬ್ಬ ವಾಸಿಸುವ ಭವ್ಯ ಬಂಗಲೆ..! ಯಾರದ್ದು ಗೊತ್ತೆ.?

Thalapathy Vijay house : ಕಾಲಿವುಡ್‌ ಜನಪ್ರಿಯ ನಟ ದಳಪತಿ ವಿಜಯ್ ಅವರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.. ಅವರಿಗೆ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಕನ್ನಡ, ತೆಲುಗು ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ತಮಿಳಿನಲ್ಲಿ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕ್ರೇಜ್ ಪಡೆಯುತ್ತಿವೆ.. ಸಧ್ಯ ದಳಪತಿ ಮನೆಯ ಕುರಿತು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಅದೇನು ನೋಡೋಣ ಬನ್ನಿ..  
 

1 /8

ವಿಜಯ್ ದಳಪತಿ ಕೇವಲ ದುಬಾರಿ ಕಾರುಗಳಲ್ಲಿ ಪ್ರಯಾಣಿಸುವುದಲ್ಲದೆ ಇಂದ್ರಭವನದಂತಹ ಐಷಾರಾಮಿ ಮನೆಯಲ್ಲಿ ವಾಸಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಪೈಕಿ ಇತ್ತೀಚೆಗೆ ಅವರ ಮನೆಯ ಹೋಮ್ ಟೂರ್ ವಿಡಿಯೋ ಸಹ ವೈರಲ್ ಆಗುತ್ತಿದೆ.     

2 /8

ವಿಜಯ್ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಸದ್ಯ ಅವರು ಹುಟ್ಟಿ ಬೆಳೆದ ಮನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಮನೆಯಲ್ಲಿ ಅವರ ತಂದೆ-ತಾಯಿ ಇನ್ನೂ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  

3 /8

ಮೇಲಾಗಿ ವಿಜಯ್ ಗೆದ್ದ ಪ್ರಶಸ್ತಿಗಳನ್ನು ಈ ಮನೆಯಲ್ಲಿ ಇಡಲಾಗಿದೆಯಂತೆ. ಅವರಿಗೆ ಚೆನ್ನೈನಲ್ಲಿರುವ ಈ ಮನೆ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ಗಳಿಸಿದ ಪ್ರತಿಯೊಂದು ಪ್ರಶಸ್ತಿಯನ್ನು ಇಲ್ಲಿಯೇ ಇಡಲಾಗಿದೆ.     

4 /8

ಚೆನ್ನೈನಲ್ಲಿರುವ ಈ ಮನೆ ತುಂಬಾ ಹಳೆಯದಾದರೂ ಅದ್ಭುತ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕೆಲವು ವಿಶೇಷ ಕೊಠಡಿಗಳೂ ಇವೆ.   

5 /8

ವಿಜಯ್ ಜನಿಸಿದ ಮನೆಯಲ್ಲಿ ವಿಶೇಷ ಕಚೇರಿಯನ್ನು ಸಹ ಸ್ಥಾಪಿಸಿದ್ದಾರೆ. ಈ ಕಚೇರಿಯು ವಿಶೇಷ ಸೋಫಾಗಳೊಂದಿಗೆ ಮನೆಯ ಮೊದಲ ಮಹಡಿಯಲ್ಲಿದೆ.     

6 /8

ಅಲ್ಲದೆ, ವಿಜಯ್ ದಳಪತಿಗೆ ಚೆನ್ನೈನಲ್ಲಿ ಎರಡನೇ ಮನೆಯೂ ಇದೆ. ಇತ್ತೀಚೆಗೆ ನೀಲಂ ಕರೇ ಬೀಚ್ ರಸ್ತೆಯಲ್ಲಿ ಎರಡನೇ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.   

7 /8

ಇದಲ್ಲದೆ, ಇತ್ತೀಚೆಗೆ ಖರೀದಿಸಿದ ಅವರ ಮನೆ 75 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಇದು ಐಶಾರಾಮಿ ವಸ್ತುಗಳು ಮತ್ತು ಉದ್ಯಾನವನವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ..   

8 /8

ನೀಲಂ ಕರೇ ಬೀಚ್ ರಸ್ತೆಯಲ್ಲಿ ವಿಜಯ್ ಖರೀದಿಸಿದ ಮನೆಯಲ್ಲಿ ವಿಶೇಷ ಜಿಮ್ ಕೂಡ ಇದೆಯಂತೆ. ಒಟ್ಟಾರೆಯಾಗಿ ನಟನ ಮನೆಯ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ..