ಈ ರಾಶಿಯವರಿಗಿದೆ ಕುಬೇರನ ಅನುಗ್ರಹ.! ಹೊಸ ವರ್ಷದಲ್ಲಿ ಅಕ್ಷಯ ಪಾತ್ರೆಯಂತೆ ಉಕ್ಕಲಿದೆ ಧನ

2023 ರಲ್ಲಿ, ಕೆಲವು ರಾಶಿಯವರ ಮೇಲೆ ಕುಬೇರನ ವಿಶೇಷ ಆಶೀರ್ವಾದವಿರುತ್ತದೆ. ಇದರ ಪರಿಣಾಮ ಅವರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸು ಸಿಗುತ್ತದೆ.  

 ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅಧಿಪತಿ ಗ್ರಹವಿರುತ್ತದೆ. ಮಾತ್ರವಲ್ಲ ರಾಶಿಗನುಗುಣವಾಗಿ ಸಂಬಂಧಿತ ದೇವತೆಗಳು ಕೂಡಾ ವಿಭಿನ್ನವಾಗಿರುತ್ತಾರೆ. ರಾಶಿಗಳಲ್ಲಿಯೂ ಕುಬೇರನ ವಿಶೇಷ ಅನುಗ್ರಹವಿರುವ ರಾಶಿಗಳಿವೆ. 2023 ರಲ್ಲಿ, ಕೆಲವು ರಾಶಿಯವರ ಮೇಲೆ ಕುಬೇರನ ವಿಶೇಷ ಆಶೀರ್ವಾದವಿರುತ್ತದೆ. ಇದರ ಪರಿಣಾಮ ಅವರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸು ಸಿಗುತ್ತದೆ.  ಸೋಲು ಎನ್ನುವುದು ಇವರ ಹತ್ತಿರವೂ ಸುಳಿಯುವುದಿಲ್ಲವಂತೆ. ಇಷ್ಟೇ ಅಲ್ಲ, ಈ ರಾಶಿಯವರು ಆರ್ಥಿಕವಾಗಿ ಸಬಲರಾಗುತ್ತಾರೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಶ್ಚಿಕ ರಾಶಿ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಬೇರ ದೇವ ಈ ರಾಶಿಯವರ ಮೇಲೆ ಸದಾ ಕೃಪೆಯಿತ್ತಿರುತ್ತಾನೆ. 2023ರ ವರ್ಷವು ಈ ರಾಶಿಯವರ ಪಾಲಿಗೆ ಸಂತಸವನ್ನೇ ನೀಡಲಿದೆ. ಕುಬೇರ ದೇವನ ಕೃಪೆಯಿಂದ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಕೀರ್ತಿ ಪ್ರಾಪ್ತಿಯಾಗುವುದು. 2023 ರಲ್ಲಿ, ಈ ರಾಶಿಯವರು ಸಾಕಷ್ಟು ಹಣವನ್ನು ಸಂಗ್ರಹಿಸಲಿದ್ದಾರೆ.  ಇವರ ಜೀವನದಲ್ಲಿ ಹಣದ ಕೊರತೆಯಾಗುವುದೇ  ಇಲ್ಲ.   

2 /3

ತುಲಾ ರಾಶಿ : ಹಣಕಾಸಿನ ವಿಚಾರದಲ್ಲಿ ಈ ರಾಶಿಯವರು ಕೂಡಾ ಅದೃಷ್ಟವಂತರು. 2023 ರಲ್ಲಿ, ಇವರು ಯಾವುದೇ ರೀತಿಯಲ್ಲಿಯೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿಲ್ಲ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಕುಬೇರ ದೇವನ ಅನುಗ್ರಹದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ. ಮುಂಬರುವ ವರ್ಷದಲ್ಲಿ, ಯಾವ ಕೆಲಸ ಮಾಡಿದರೂ ಅಲ್ಲಿ ಕುಬೇರ ದೇವನ ಅನುಗ್ರಹ ಇದ್ದೇ ಇರುತ್ತದೆ. 

3 /3

ಕಟಕ ರಾಶಿ : ಕುಬೇರ ದೇವ ಕಟಕ ರಾಶಿಯವರ ಮೇಲೆ ವಿಶೇಷ ಕರುಣಾಮಯಿ.  ಮುಂಬರುವ ವರ್ಷದಲ್ಲಿ ಕಟಕ ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯುವುದು. ಈ ರಾಶಿಯವರು ಬುದ್ಧಿವಂತರು, ಶ್ರಮಶೀಲರು ಮತ್ತು ಪ್ರಾಮಾಣಿಕರು. ಅಷ್ಟೇ ಅಲ್ಲ ಎಲ್ಲ ಕೆಲಸಗಳನ್ನೂ ಸಂಪೂರ್ಣ ಸಮರ್ಪಣಾ ಭಾವದಿಂದ ಮಾಡುತ್ತಾರೆ. ಈ ಕಾರಣದಿಂದಾಗಿ, ಕುಬೇರ ದೇವನ ಅನುಗ್ರಹದ ಜೊತೆಗೆ, ಅದೃಷ್ಟವೂ ಇವರ ಕೈ ಹಿಡಿಯುತ್ತದೆ. ಕುಬೇರ ದೇವನ ಕೃಪೆಯಿಂದ ಉನ್ನತ ಸ್ಥಾನಕ್ಕೆ ಏರುತ್ತಾರೆ.    (  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)