Richest Cricket Boards In The World: ಸದ್ಯ ಕ್ರಿಕೆಟ್ ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ವೀಕ್ಷಿಸುವ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದೆ. ಅಂದಹಾಗೆ ಕ್ರಿಕೆಟ್ ಎಂಬುದು ಕೇವಲ ರನ್ ಗಳಿಸುವುದು ಅಥವಾ ವಿಕೆಟ್ ತೆಗೆದುಕೊಳ್ಳುವುದು ಅಷ್ಟೇ ಅಲ್ಲ. ಈ ಕ್ರೀಡೆಯನ್ನು ನಿಯಮಿತವಾಗಿ ಆಡುವ ದೇಶಗಳ ಆರ್ಥಿಕತೆ ಉತ್ತುಂಗಕ್ಕೆ ಏರುತ್ತಿರುವುದು ಕೆಲವರಿಗಷ್ಟೇ ತಿಳಿದ ಸಂಗತಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶ್ರೀಮಂತ ಇತಿಹಾಸವನ್ನು ಹೊಂದಿರುವ ಕ್ರಿಕೆಟ್, ಮೊದಲ ಬಾರಿಗೆ 16 ನೇ ಶತಮಾನದಲ್ಲಿ ಹಳ್ಳಿಗಳಲ್ಲಿ ಅದರ ಮೂಲ ರೂಪದಲ್ಲಿ ಆಡಲಾಯಿತು. ಈಗ ಕ್ರಿಕೆಟ್ ಪ್ರಪಂಚದ ಬಹುತೇಕ ಮೂಲೆಗಳಲ್ಲಿ ವಿಸ್ತರಿಸಿದೆ. ಜಾಗತೀಕರಣದೊಂದಿಗೆ, ಕ್ರಿಕೆಟ್ ಆಟವು ಸಹ ಸಾಕಷ್ಟು ವಾಣಿಜ್ಯವಾಗಿದೆ. ಈ ಪರಿವರ್ತನೆಯ ಹಿಂದಿನ ಕಾರಣವೆಂದರೆ ಈ ದೇಶಗಳ ಕ್ರಿಕೆಟ್ ಮಂಡಳಿಗಳು ಕ್ರೀಡೆಗೆ ಪ್ರೋತ್ಸಾಹ ಮತ್ತು ಧನಸಹಾಯ ನೀಡುತ್ತಿರುವುದು.
ನಾವಿಂದು ಈ ವರದಿಯಲ್ಲಿ ವಿಶ್ವದ ಟಾಪ್ ಶ್ರೀಮಂತ ಕ್ರಿಕೆಟ್ ಮಂಡಳಿಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ:
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (BCCI) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. BCCI 2 ಬಿಲಿಯನ್ USD ನಿವ್ವಳ ಮೌಲ್ಯವನ್ನು ಹೊಂದಿರುವುದರಿಂದ ಇದನ್ನು ಆರ್ಥಿಕ ಯಶಸ್ಸಿನ ಸಾರಾಂಶ ಎಂದು ಕರೆಯಲಾಗುತ್ತದೆ. ಭಾರತವು ಕ್ರಿಕೆಟ್-ಕ್ರೇಜಿ ರಾಷ್ಟ್ರವಾಗಿರುವುದರಿಂದ, ಮಂಡಳಿಯ ಆರ್ಥಿಕ ಯಶಸ್ಸಿಗೆ ಇಡೀ ದೇಶದಲ್ಲಿರುವ ಅಪಾರ ಅಭಿಮಾನಿಗಳು ಸಹ ಕಾರಣವಾಗಿದ್ದಾರೆ. ಪ್ರತಿ ವರ್ಷ ನಡೆಯುವ ಐಪಿಎಲ್ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್, ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿದ್ದು, ಬಿಸಿಸಿಐಗೆ ಭಾರಿ ಆರ್ಥಿಕ ಉತ್ತೇಜನ ನೀಡುತ್ತದೆ.
ಇನ್ನು 2ನೇ ಸ್ಥಾನದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಇದೆ. ಈ ಮಂಡಳಿಯು 1905 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದ ಒಟ್ಟು ನೆಟ್ ವರ್ತ್ USD 70 ಮಿಲಿಯನ್. ಆಸ್ಟ್ರೇಲಿಯಾವು ಎಲ್ಲಾ ಸ್ವರೂಪಗಳಲ್ಲಿ ಅನೇಕ ICC ಟ್ರೋಫಿಗಳನ್ನು ಗೆದ್ದಿರುವ ರಾಷ್ಟ್ರ. ಫ್ರಾಂಚೈಸ್ ಲೀಗ್, ಬಿಗ್ ಬ್ಯಾಷ್ ಲೀಗ್, ಮಂಡಳಿಯ ಆರ್ಥಿಕ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ.
ಇಂಗ್ಲೆಂಡ್ ಆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂದಹಾಗೆ ಈ ಮಂಡಳಿಯನ್ನು 1997 ರಲ್ಲಿ ರಚಿಸಲಾಯಿತು. ವೇಗವಾಗಿ ಯಶಸ್ಸು ಕಂಡ ಈ ಮಂಡಳಿ, ಕ್ರಿಕೆಟ್ ಜಗತ್ತಿನಲ್ಲಿ ಅಗ್ರಮಾನ್ಯ ಮಂಡಳಿಗಳಲ್ಲಿ ಒಂದಾಗಿದೆ. ಇದು USD 59 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾಲ್ಕನೇ ಸ್ಥಾನದಲ್ಲಿದ್ದು, ಈ ಮಂಡಳಿಯನ್ನು 1949 ರಲ್ಲಿ ರಚಿಸಲಾಯಿತು. ಈ ಮಂಡಳಿಯು USD 55 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ . ಇದು ಪೆಪ್ಸಿ, ಗಟೋರೇಡ್ ಮತ್ತು ಯುನೈಟೆಡ್ ಬ್ಯಾಂಕ್ ಲಿಮಿಟೆಡ್ನಂತಹ ಬ್ರ್ಯಾಂಡ್’ಗಳಿಂದ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐದನೇ ಸ್ಥಾನದಲ್ಲಿದ್ದು, ಇದನ್ನು 1977 ರಲ್ಲಿ ರಚಿಸಲಾಯಿತು. USD 51 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಮಂಡಳಿಯ ಆರ್ಥಿಕ ಪ್ರಯಾಣವು ಈ ದೇಶದಲ್ಲಿ ಕ್ರೀಡೆಯ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ.