ನೀವು ಗ್ಯಾಸ್ ಸಿಲಿಂಡರ್ನಲ್ಲಿ ಸಬ್ಸಿಡಿ ಪಡೆಯಲು ಬಯಸಿದರೆ ಸಬ್ಸಿಡಿ ಖಾತೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು.
ಹಣದುಬ್ಬರದ ಈ ಯುಗದಲ್ಲಿ ಉಳಿತಾಯವೆಂಬುದು ಬಹುತೇಕ ಮುಗಿದಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆ ದಾಖಲೆ ಮಟ್ಟದಲ್ಲಿದೆ. ನವೆಂಬರ್ 2020 ರಲ್ಲಿ 594 ರೂ. ಇದ್ದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಈಗ 819 ರೂ. ಆಗಿದೆ. ಆದರೆ ನೀವು ದುಬಾರಿ ಸಿಲಿಂಡರ್ಗೆ ಸಬ್ಸಿಡಿ ತೆಗೆದುಕೊಂಡರೆ ನೀವು 300 ರೂ.ವರೆಗೆ ಉಳಿಸಬಹುದು. ಇದು ಹೇಗೆ ಅಂತಾ ತಿಳಿದುಕೊಳ್ಳಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಇತ್ತೀಚೆಗಷ್ಟೇ ಸಿಲಿಂಡರ್ನ ಸಬ್ಸಿಡಿ 10 ರಿಂದ 20 ರೂ. ಉಳಿದಿದ್ದು, ಈಗ ಸರ್ಕಾರ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ 153.86 ರೂ.ನಿಂದ 291.48 ರೂ.ಗೆ ಏರಿಕೆಯಾಗಿದೆ. ನೀವು ಉಜ್ವಲ ಯೋಜನೆಯಡಿ ಸಂಪರ್ಕವನ್ನು ತೆಗೆದುಕೊಂಡಿದ್ದರೆ 312.48 ರೂ.ವರೆಗೆ ಸಬ್ಸಿಡಿ ಪಡೆಯಬಹುದು. ಇದು ಮೊದಲು 174.86 ರೂ. ಆಗಿತ್ತು.
ನೀವು ಗ್ಯಾಸ್ ಸಿಲಿಂಡರ್ನಲ್ಲಿ ಸಬ್ಸಿಡಿ ಪಡೆಯಲು ಬಯಸಿದರೆ ಸಬ್ಸಿಡಿ ಖಾತೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಖಾತೆಗೆ ಸುಮಾರು 300 ರೂ. ಸಬ್ಸಿಡಿ ಹಣ ಬರುತ್ತದೆ.
ನಿಮ್ಮ ಎಲ್ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡದಿದ್ದರೆ ನೀವು ಅದನ್ನು ಮನೆಯಲ್ಲಿ ಕುಳಿತು ಪರಿಹರಿಸಬಹುದು. ಇಂಡೇನ್ ಗ್ರಾಹಕರು ಸಂಪೂರ್ಣ ಮಾಹಿತಿಯನ್ನು https://cx.indianoil.in ನಲ್ಲಿ ಪಡೆಯಬಹುದು. ಭಾರತ್ ಗ್ಯಾಸ್ ಗ್ರಾಹಕರು ತಮ್ಮ LPG ಸಂಪರ್ಕವನ್ನು ಆಧಾರ್ನೊಂದಿಗೆ https://ebharatgas.com ಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಬಹುದು.
ನಿರಂತರವಾಗಿ ಹೆಚ್ಚುತ್ತಿರುವ ತೈಲ ಬೆಲೆಗಳು ದೇಶೀಯ ಅನಿಲದ ಮೇಲೂ ಪರಿಣಾಮ ಬೀರಿದೆ. 4 ತಿಂಗಳ ಹಿಂದೆ 594 ರೂ.ಗೆ ಲಭ್ಯವಿದ್ದ ಗೃಹಬಳಕೆಯ ಸಿಲಿಂಡರ್ ಈಗ ದೆಹಲಿಯಲ್ಲಿ 819 ರೂ.ಗೆ ಲಭ್ಯವಿದೆ. ನವೆಂಬರ್ ಮತ್ತು ಮಾರ್ಚ್ ನಡುವೆ ಸಿಲಿಂಡರ್ ಬೆಲೆ 225 ರೂ.ಗಳಷ್ಟು ಹೆಚ್ಚಾಗಿದೆ. ಅಂದರೆ ಸುಮಾರು ಶೇ.25ರಷ್ಟು ಹೆಚ್ಚಳ ಕಂಡಿದೆ.
ನೀವು ಮೊಬೈಲ್ ಅಪ್ಲಿಕೇಶನ್ Paytm ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಿದರೆ ಭರ್ಜರಿ ಕ್ಯಾಶ್ ಬ್ಯಾಕ್ ಸಿಗಲಿದೆ. Paytm ಮೊದಲ ಬಾರಿ ಬುಕ್ಕಿಂಗ್ ಗೆ 100 ರೂ. ರಿಯಾಯಿತಿಯನ್ನು ನೀಡುತ್ತದೆ. ನೀವು ಹಿಂದೆಂದೂ Paytm ನಿಂದ ಗ್ಯಾಸ್ ಬುಕ್ ಮಾಡಿಲ್ಲದಿದ್ದರೆ, ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು.