ಮನೆಗೆ ಮಂಗಳ ಈ ಹೂವಿನ ಗಿಡ: ಒತ್ತಡ-ಹಣದ ಸಮಸ್ಯೆ ನಿವಾರಿಸೋದು ಖಂಡಿತ!

ಮನೆಯಲ್ಲಿ ಗಿಡಗಳು ತಾಜಾತನ ಮತ್ತು ಧನಾತ್ಮಕ ಭಾವನೆಯನ್ನು ನೀಡುತ್ತದೆ. ಗಿಡಗಳ ಜೊತೆಗೆ ಬಣ್ಣಬಣ್ಣದ ಹೂಗಳನ್ನು ನೋಡುತ್ತಿದ್ದರೆ ಖುಷಿ ದುಪ್ಪಟ್ಟಾಗುತ್ತದೆ. ಹೂವಿನ ಗಿಡಗಳು ಕಣ್ಣಿಗೆ ಹಿತವಾದವು. ವಿಜ್ಞಾನದ ಪ್ರಕಾರ, ಸಸ್ಯಗಳು ಒತ್ತಡವನ್ನು ದೂರ ಮಾಡುತ್ತವೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಸಸ್ಯಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅತ್ಯಂತ ಮಂಗಳಕರವಾದ ಕೆಲವು ಹೂವಿನ ಸಸ್ಯಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. 

1 /5

 ವಾಸ್ತು ಶಾಸ್ತ್ರದಲ್ಲಿ ಪಾರಿಜಾತವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಪಾರಿಜಾತ ಗಿಡವು ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಪಾರಿಜಾತ ಮರ ಅಥವಾ ಗಿಡ ಇರುವ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ. ಇದು ಸಂತೋಷ ಮತ್ತು ಶಾಂತಿಯನ್ನು ಸಹ ನೀಡುತ್ತದೆ. ಪಾರಿಜಾತದ ಇನ್ನೊಂದು ವಿಶೇಷವೆಂದರೆ ಅದರ ಹೂವುಗಳು ರಾತ್ರಿಯಲ್ಲಿ ಮಾತ್ರ ಅರಳುತ್ತವೆ.

2 /5

ಚಂಪಾ ಹೂವುಗಳನ್ನು ಅನೇಕ ದೇವತೆಗಳಿಗೆ ಅರ್ಪಿಸಲಾಗುತ್ತದೆ. ಇದು ತನ್ನ ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ತಾಜಾತನವನ್ನು ತುಂಬುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ತುಂಬಾ ಶುಭ.

3 /5

ಮೊಗ್ರದ ಹೂವುಗಳು ಎಷ್ಟು ಸುಂದರವಾಗಿರುತ್ತದೆಯೋ ಅದರ ಪರಿಮಳವು ಹೆಚ್ಚು ಅದ್ಭುತವಾಗಿರುತ್ತದೆ. ಮೊಗ್ರದ ಸುಗಂಧವು ಮನಸ್ಸನ್ನು ತುಂಬಾ ನಿರಾಳಗೊಳಿಸುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ. 

4 /5

ಮನೆಯಲ್ಲಿ ಮಲ್ಲಿಗೆ ಗಿಡವಿದ್ದರೆ ಹಲವಾರು ಲಾಭಗಳು ಸಿಗುತ್ತವೆ. ಇದು ಸಕಾರಾತ್ಮಕತೆಯನ್ನು ನೀಡುತ್ತದೆ. ಮಲ್ಲಿಗೆ ಗಿಡ ನೆಟ್ಟ ತಕ್ಷಣ ಅದರ ಪರಿಣಾಮ ಕೆಲವೇ ದಿನಗಳಲ್ಲಿ ಮನೆ ಮಂದಿಯ ಬದುಕಿನ ಮೇಲೆ ಕಾಣಿಸಿಕೊಳ್ಳತೊಡಗುತ್ತದೆ.

5 /5

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಗುಲಾಬಿ ಗಿಡಗಳನ್ನು ನೆಡಲಾಗುತ್ತದೆ. ಗುಲಾಬಿ ಹೂವಿನ ಸೌಂದರ್ಯ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಗುಲಾಬಿ ಹೂವುಗಳನ್ನು ಅರ್ಪಿಸಲಾಗುತ್ತದೆ. ಇವು ಪ್ರೀತಿಯ ಸಂಕೇತಗಳು.